ಕುಟುಂಬಸ್ಥರೊಂದಿಗೆ ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್

| Published : Mar 25 2024, 12:52 AM IST

ಕುಟುಂಬಸ್ಥರೊಂದಿಗೆ ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ವರ್ಷ ಒಂದು ಅಥವಾ ಎರಡು ಬಾರಿ ಕುಲ ದೇವತೆ ಕೋಡಿಮಾರಮ್ಮ ದೇವಾಯದಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ. ಅದರಂತೆ ಈ ವರ್ಷವು ಕುಟುಂಬಸ್ಥರು, ಸಂಬಂಧಿಕರು, ನಮ್ಮ ಹಿತೈಷಿಗಳೊಂದಿಗೆ ಆಗಮಿಸಿ ಕುಲದೇವಿಗೆ ಸಾಂಪ್ರದಾಯಕವಾಗಿ ಪೂಜೆ ಸಲ್ಲಿಸಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರು ಪತ್ನಿ ಅನುಸೂಯ ಮಂಜುನಾಥ್ ಮತ್ತು ಕುಟುಂಬಸ್ಥರೊಂದಿಗೆ ಮನೆದೇವರು ತಾಲೂಕಿನ ಕಿಕ್ಕೇರಿ ಹೋಬಳಿಯ ಚಿಕ್ಕತರಹಳ್ಳಿ ಕೋಡಿಮಾರಮ್ಮ ದೇವಾಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ವಿಶೇಷ ಪೂಜೆ ಸಲ್ಲಿಕೆ ನಂತರ ಮಾತನಾಡಿದ ಡಾ.ಸಿ.ಎನ್.ಮಂಜುನಾಥ್, ಪ್ರತಿ ವರ್ಷ ಒಂದು ಅಥವಾ ಎರಡು ಬಾರಿ ಕುಲ ದೇವತೆ ಕೋಡಿಮಾರಮ್ಮ ದೇವಾಯದಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ. ಅದರಂತೆ ಈ ವರ್ಷವು ಕುಟುಂಬಸ್ಥರು, ಸಂಬಂಧಿಕರು, ನಮ್ಮ ಹಿತೈಷಿಗಳೊಂದಿಗೆ ಆಗಮಿಸಿ ಕುಲದೇವಿಗೆ ಸಾಂಪ್ರದಾಯಕವಾಗಿ ಪೂಜೆ ಸಲ್ಲಿಸಿದ್ದೇವೆ ಎಂದರು.

ದೇವರಲ್ಲಿ ನಂಬಿಕೆ ಇರಬೇಕು. ಇದರಿಂದ ನಮ್ಮ ಒಳ್ಳೆಯ ಕೆಲಸಗಳಿಗೆ ಪ್ರೇರಣೆಯಾಗುತ್ತದೆ. ನಾವು ಏನು ಮಾಡುತ್ತೇವೆ, ಯಾವ ರೀತಿ ಕೆಲಸ ಮಾಡುತ್ತೇವೆ. ಅದು ಒಳ್ಳೆಯದಾ ಅಥವಾ ಕೆಟ್ಟದ್ದಾ ಎನ್ನುವುದು ಇಬ್ಬರಿಗೆ ಮಾತ್ರ ಗೊತ್ತಿರುತ್ತದೆ. ಒಂದು ನಮ್ಮ ಅಂತರಾತ್ಮಕ್ಕೆ ಮತ್ತೊಂದು ಭಗವಂತನಿಗೆ. ನಾವು ಸದಾ ಸನ್ಮಾರ್ಗದಲ್ಲಿ ಸಾಗಬೇಕಾದರೆ ದೇವರಲ್ಲಿ ನಂಬಿಕೆಯಿರಬೇಕು ಎಂದರು.

ರಾಜ್ಯದಲ್ಲಿಂದು ಮಳೆ ಅಭಾವವಿದೆ. ಕುಡಿಯುವ ನೀರಿಗೂ ಕೊರತೆಯಾಗಿದೆ. ನೀರಿನ ಅಭಾವದಿಂದ ರೈತಾಪಿ ವರ್ಗ ಸಂಕಷ್ಠಕ್ಕೆ ಸಿಲುಕಿದೆ. ಸಕಾಲಕ್ಕೆ ಮಳೆಯಾಗಿ ನೀರಿನ ಅಭಾವ ದೂರವಾಗಲಿ. ರೈತರ ಕೈಗೆ ಉತ್ತಮ ಫಸಲು ದೊರಕಿ ಅವರ ಬೆಳಗೆ ಒಳ್ಳೆಯ ಬೆಲೆ ಸಿಗಲೆಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು.

ಈ ವೇಳೆ ಡಾ.ಸಿ.ಎನ್.ಮಂಜುನಾಥ್ ಅವರ ಸಹೋದರ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್ ಬಾಲಕೃಷ್ಣ, ಕುಸುಮ ಬಾಲಕೃಷ್ಣ, ರಾಜ್ಯ ಸಹಕಾರ ಮಾರಾಟ ಮಹಾ ಮಂಡಲಿ ನಿರ್ದೇಶಕರಾದ ಸಿ.ಎನ್.ಪುಟ್ಟಸ್ವಾಮಿಗೌಡ ಮತ್ತು ಶುಭ ಪುಟ್ಟಸ್ವಾಮಿಗೌಡ, ಹೇಮಾವತಿ ಸಕ್ಕರೆ ಕಾರ್ಖಾನೆ ಮಾಜಿ ನಿರ್ದೇಶಕ ಬಿ.ಎಸ್.ಮಂಜುನಾಥ್, ಆನೆಗೊಳ ಗ್ರಾಪಂ ಉಪಾಧ್ಯಕ್ಷ ನಂಜೇಶ್, ಮಾಜಿ ಉಪಾಧ್ಯಕ್ಷರಾದ ಕಡಹೆಮ್ಮಿಗೆ ರಮೇಶ್, ಯೋಗೇಶ್, ಗ್ರಾಪಂ ಸದಸ್ಯರಾದ ಮಂಜೇಗೌಡ, ರಾಜು, ಮುಖಂಡರಾದ ಶಿಶುಪಾಲ, ಚಿಕ್ಕತರಹಳ್ಳಿ ರಾಮಕೃಷ್ಣಗೌಡ್ರು, ಬೋಳಮಾರನಹಳ್ಳಿ ಪುಟ್ಟಸ್ವಾಮಿಗೌಡ್ರು, ಕಾಯಿ ರಾಮಣ್ಣ, ರಂಗಸ್ವಾಮಿ, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಮಧು, ಚಿಕ್ಕತರಹಳ್ಳಿ ಮಂಜು, ಸೇರಿದಂತೆ ಆನೆಗೊಳ ಗ್ರಾಪಂ ತಿ ವ್ಯಾಪ್ತಿಯ ಮುಖಂಡರುಗಳು ಸಾರ್ವಜನಿಕರು ಇದ್ದರು.