ಕನ್ನಡಪ್ರಭ ವಾರ್ತೆ ಗುಬ್ಬಿ

ಮೂವತ್ತು ದಿನಗಳ ಕಾಲ ಕಾರ್ಯಕರ್ತರು ಸಕ್ರೀಯವಾಗಿ ಶ್ರಮಿಸಿದರೆ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ ಎಂದು ರಾಜ್ಯ ಬಿಜೆಪಿ ಮುಖಂಡ ಸಚ್ಚಿದಾನಂದಮೂರ್ತಿ ಕಾರ್ಯಕರ್ತರನ್ನು ಹುರಿದುಂಬಿಸಿದರು.

ಇಲ್ಲಿನ ಪಟ್ಟಣದ ಬಾವಿಮನೆ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಾಗಾರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಎಸ್‌ಐಆರ್‌ ವಿಶೇಷ ಪ್ರಶಿಕ್ಷಣ ವರ್ಗದಲ್ಲಿ ಮಾತನಾಡಿದ ಅವರು, ಗುಬ್ಬಿ ವಿಧಾನಸಭಾ ಕ್ಷೇತ್ರದ ಎಲ್ಲಾ ಬೂತ್ ಮಟ್ಟದ ಏಜೆಂಟ್ಸ್, ಸದಸ್ಯರು ಸ್ಥಳೀಯ ಮುಖಂಡರು ಆಗಮಿಸಿ 30 ದಿನಗಳ ಕಾಲ ವಿಶೇಷ ಮತದಾರ ಪರಿಷ್ಕರಣೆಯಲ್ಲಿ ಪಾಲ್ಗೊಂಡು ಬಿಜೆಪಿ ಪರ ಮತಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಎಸ್ಐಆರ್ ಬಗ್ಗೆ ಮಾತನಾಡಿ ಗ್ರಾಮಗಳಲ್ಲಿ ಇರುವ ಮತಗಳ ಬಗ್ಗೆ ತಿಳಿದ ಬಿಎಲ್ಎ 2 ಗಳು ಅಲ್ಲಿನ ಬಿಎಲ್‌ಒ ಸಂಪರ್ಕ ಬೆಳೆಸಿ 2002 ಮತ್ತು 2026 ರ ಎರಡೂ ಮತಪಟ್ಟಿ ಪಡೆದು ತಮ್ಮ ಮತದಾರರ ಇರುವಿಕೆ ಹೊಸ ಮತಗಳು, ಮೃತಪಟ್ಟವರು, ಊರು ಬಿಟ್ಟವರು ಹೀಗೆ ಎಲ್ಲವನ್ನೂ ಗಮನಿಸಿ ಮ್ಯಾಪಿಂಗ್ ವ್ಯವಸ್ಥೆಗೆ ಸಹಕರಿಸಬೇಕು. ಮತದಾರರ ತಂದೆ ತಾತ ಹೀಗೆ ಸಂಬಂಧಿಕರ ಹೆಸರು ನಮೂದಿಸಬೇಕು, ಮೊಬೈಲ್ ನಂಬರ್ ಕಡ್ಡಾಯ ಬರೆಯಬೇಕು. ನಿಮ್ಮ ಊರಿಗೆ ಐದು ವರ್ಷಕ್ಕೆ ಒಮ್ಮೆ ಮತ ಹಾಕಲು ಬರುವವರ ಬಗ್ಗೆ ಎಚ್ಚರವಹಿಸಬೇಕು. ಹೊಸ ಮುಖಗಳು ಕಂಡಲ್ಲಿ ವಿಚಾರಿಸಿ, ಒಂದೇ ಮನೆಯಲ್ಲಿ ಹತ್ತು ಹದಿನೈದು ಮತಗಳು ಇದ್ದಲ್ಲಿ ಅದನ್ನು ಮ್ಯಾಪಿಂಗ್ ವ್ಯವಸ್ಥೆಗೆ ಒಳಪಡಿಸಬೇಕು. ಮುಂದಿನ ಬಾರಿ ರಾಜ್ಯದಲ್ಲಿ 170 ಕ್ಕೂ ಅಧಿಕ ಸ್ಥಾನ ಗೆದ್ದು ಬಿಜೆಪಿ ಸರ್ಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ ಮಾತನಾಡಿ ಪ್ರತಿ ಭಾನುವಾರ ಮನ್ ಕೀ ಬಾತ್ ಮೂಲಕ ವಿಚಾರಧಾರೆ ಪಡೆದು ಬೂತ್ ಮಟ್ಟದ ಸಮಿತಿ ಸಭೆ ನಡೆಸಿಕೊಂಡು ಎಸ್ಐಆರ್ ಬಗ್ಗೆ ಜಾಗೃತಿ ಮೂಡಿಸಿ ಪ್ರಶಿಕ್ಷಣ ವರ್ಗದಲ್ಲಿ ತರಬೇತಿ ಪಡೆದು ಬಿಎಲ್ಎ 2 ಸರಳ ಆ್ಯಪ್ ಮೂಲಕ ತಮ್ಮ ಮನ್ ಕೀ ಬಾತ್ ಬಗ್ಗೆ ಮಾಹಿತಿ ಹಂಚಿಕೊಳ್ಳಿ ಎಂದು ಸಲಹೆ ನೀಡಿದರು. ಬಿಜೆಪಿ ತಾಲೂಕು ಅಧ್ಯಕ್ಷ ಬಲರಾಮಯ್ಯ ಮಾತನಾಡಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಜೋಡಿ ಇಟ್ಟ ದಿಟ್ಟ ಹೆಜ್ಜೆ ಎಸ್ಐಆರ್ ಆಗಿದೆ. ಕಳೆದ 24 ವರ್ಷದ ನಂತರ ನಡೆದಿರುವ ಪರಿಷ್ಕರಣೆ ಈಗಾಗಲೇ ಹಲವು ರಾಜ್ಯದಲ್ಲಿ ಕೋಟಿಗೂ ಅಧಿಕ ಮತಗಳ ತೆಗೆಯಲಾಗಿದೆ. ವಲಸಿಗರು, ಅನ್ಯ ದೇಶದವರು ನಮ್ಮಲ್ಲಿ ಮತದ ಹಕ್ಕು ಪಡೆದಿದ್ದ ಬಗ್ಗೆ ತಿಳಿದೂ ಈ ಎಸ್ಐಆರ್ ಆರಂಭಿಸಿದ್ದಾರೆ. ಕೇವಲ ನಾಲ್ಕೈದು ಸಾವಿರ ಮತದ ಅಂತರದಲ್ಲಿ ಬಿಜೆಪಿ ಸೋಲು ಕಂಡಿತ್ತು. ಈ ಪರಿಷ್ಕರಣೆ ನಮ್ಮ ಗುಬ್ಬಿ ಕ್ಷೇತ್ರ ಗೆಲ್ಲಲು ಒಂದು ಮಾರ್ಗಸೂಚಿಯಾಗಿದೆ ಎಂದರು. ಕಾರ್ಯಾಗಾರದಲ್ಲಿ ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿದರು. ಎಚ್.ಎಂ.ರವೀಶ್, ಬಿಎಲ್ . ಪಂಚಾಕ್ಷರಿ, ಚಂದ್ರಶೇಖರಬಾಬು, ಜಕ್ಕನಹಳ್ಳಿ ರವೀಶ್, ಗಂಗಣ್ಣ, ಎಚ್.ಟಿ.ಭೈರಪ್ಪ, ಎಸ್.ನಂಜೇಗೌಡ, ಎಸ್.ವಿಜಯಕುಮಾರ್, ಹೊಸಹಳ್ಳಿ ಬಸವರಾಜು, ಡಾ.ನವ್ಯಾಬಾಬು, ಭಾರತಿ ಹಿತೇಶ್, ಚನ್ನಶೆಟ್ಟಿಹಳ್ಳಿ ಯತೀಶ್, ಎಪಿಕೆ ರಾಜು, ಶ್ರೀಧರ್, ಕಡಬ ರಾಘವೇಂದ್ರ, ಪಪಂ ಮಾಜಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಇತರರು ಇದ್ದರು.