ಸಾರಾಂಶ
ಆಪರೇಷನ್ ಸಿಂಧೂರ್ ಮೂಲಕ ಭಾರತೀಯ ಸೇನೆ ಉಗ್ರರ ನೆಲೆಗಳ ಮೇಲೆ ಯಶಸ್ವಿ ದಾಳಿ ನಡೆಸಿದ ಹಿನ್ನೆಲೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ವತಿಯಿಂದ ಬುಧವಾರ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಕಂಪ್ಲಿ
ಆಪರೇಷನ್ ಸಿಂಧೂರ್ ಮೂಲಕ ಭಾರತೀಯ ಸೇನೆ ಉಗ್ರರ ನೆಲೆಗಳ ಮೇಲೆ ಯಶಸ್ವಿ ದಾಳಿ ನಡೆಸಿದ ಹಿನ್ನೆಲೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ವತಿಯಿಂದ ಬುಧವಾರ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು.ಬಿಜೆಪಿ ನಗರ ಘಟಕ ಅಧ್ಯಕ್ಷ ಮುರುಳಿ ಮೋಹನ್ ರೆಡ್ಡಿ ಮಾತನಾಡಿ, ಪ್ರವಾಸಿಗರ ಮೇಲೆ ಪಾಕಿಸ್ತಾನ ಉಗ್ರರು ನಡೆಸಿದ ನರಮೇಧಕ್ಕೆ ಇಡೀ ಭಾರತವೇ ದುಃಖ ಸ್ಥಪ್ತವಾಗಿತ್ತು. ಅಲ್ಲದೇ ಎಲ್ಲೆಡೆ ಪ್ರತೀಕಾರದ ಕೂಗು ಭುಗಿಲೆದ್ದಿತ್ತು. ಹಿಂದೂ ಪುರುಷರನ್ನೇ ಗುರಿಯಾಗಿಸಿ ಕೊಂದು ಅವರ ಪತ್ನಿಯರ ಸಿಂಧೂರ ಅಳಿಸಿದ ಉಗ್ರರರಿಗೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿಯೇ ಪ್ರತೀಕಾರದ ದಾಳಿಯನ್ನು ಸೇನೆ ನಡೆಸಿ ಪಿಒಕೆಯ 9 ಸ್ಥಳಗಳಲ್ಲಿ ಬೀಡು ಬಿಟ್ಟಿದ್ದ ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದ್ದು ಇಡೀ ದೇಶವೇ ಖುಷಿ ಪಡುವ ವಿಚಾರವಾಗಿದೆ ಎಂದರು. ಬಳಿಕ ಕಾರ್ಯಕರ್ತರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭ ಪುರಸಭೆ ಸದಸ್ಯರಾದ ಎನ್.ರಾಮಾಂಜಿನೇಯಲು, ಟಿ.ವಿ. ಸುದರ್ಶನರೆಡ್ಡಿ, ಆರ್.ಆಂಜಿನೇಯ, ಹೂಗಾರ ರಮೇಶ್, ಪ್ರಮುಖರಾದ ಪಿ.ಬ್ರಹ್ಮಯ್ಯ, ಭಾಸ್ಕರರೆಡ್ಡಿ, ಎನ್.ಚಂದ್ರಕಾಂತರೆಡ್ಡಿ, ಡಿ.ಶ್ರೀಧರಶ್ರೇಷ್ಠಿ, ಅಗಳಿ ಪಂಪಾಪತಿ, ಬಿ.ದೇವೇಂದ್ರ, ಜಿ.ಶ್ರೀನಿವಾಸ, ಸತ್ಯನಾರಾಯಣಶೆಟ್ಟಿ, ಕೊಡಿದಲ ರಾಜು, ಕೆ.ರಂಗಪ್ಪ, ಪರಮೇಶ್ವರ, ಯು.ಎಂ. ವಿದ್ಯಾಶಂಕರ, ಇಟ್ಗಿ ವಿರುಪಾಕ್ಷಿ ಸೇರಿ ಇತರರಿದ್ದರು.