ಸಾರಾಂಶ
ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ, ದೇಶದ ಚಿತ್ರಣ ಬಹುವಾಗಿ ಬದಲಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ 4078 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲದಿಂದ ರಾಮಕೃಷ್ಣ ನಗರದ ಸಾಯಿ ಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.ಪ್ರಧಾನಿ ಮೋದಿ ಅವರಿಗೆ ಮತ್ತಷ್ಟು ದೇಶ ಸೇವೆ ಮಾಡುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಲಾಯಿತು. ನಂತರ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಕೇಶ್‌ಭಟ್ ಮಾತನಾಡಿ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ, ದೇಶದ ಚಿತ್ರಣ ಬಹುವಾಗಿ ಬದಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೇ, ವಿಮಾನ ನಿಲ್ದಾಣಗಳು ದೊಡ್ಡಮಟ್ಟದಲ್ಲಿ ಅಭಿವೃದ್ಧಿ ಕಂಡಿದೆ. ಬಡವರಿಗೆ ಜನೌಷಧ ಮೂಲಕ ಕಡಿಮೆ ಧರಕ್ಕೆ ಔಷಧಿಗಳು ಸಿಗುತ್ತಿವೆ ಎಂದರು.ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳಿಂದ ಸೈನ್ಯ ಬಲಗೊಂಡಿದೆ. ಉತ್ತಮ ವಿದೇಶಾಂಗ ನೀತಿಗಳಿಂದ ದೇಶಕ್ಕೆ ಕೀರ್ತಿ ಬಂದಿದೆ. ಸ್ವಚ್ಛ ಭಾರತದ ಕಲ್ಪನೆ ಜನರ ಬಳಿಗೆ ತಲುಪಿದೆ. ರಾಮ ಮಂದಿರ, ಕಾಶ್ಮೀರದ 370ನೇ ವಿಧಿಯ ವಿಚಾರಗಳು ಬಗೆಹರಿದಿವೆ. ಉನ್ನತ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅವಕಾಶ ಲಭಿಸಿದೆ. ಇಷ್ಟೆಲ್ಲ ಸಾಧಿಸಿರುವ ಪ್ರಧಾನಿ ಸಿಕ್ಕಿರುವುದು ದೇಶದ ನಾಗರಿಕರ ಸೌಭಾಗ್ಯ ಹಾಗಾಗಿ ಇಂದು ಸಿಹಿ ಹಂಚಿ ಸಂಭ್ರಮಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ನಗರ ಮಂಡಲದ ಅಧ್ಯಕ್ಷ ರಾಕೇಶ್ ಭಟ್, ಪ್ರಧಾನ ಕಾರ್ಯದರ್ಶಿಗಳಾದ ಈರೇಗೌಡ, ಆರ್. ಸೋಮಶೇಖರ್, ಉಪಾಧ್ಯಕ್ಷರಾದ ಎಚ್.ಜಿ. ರಾಜಮಣಿ, ಬಿ.ಸಿ. ಶಶಿಕಾಂತ್, ಶಿವು ಪಟೇಲ್, ಎಚ್.ಎಸ್. ಹಿರಿಯಣ್ಣ, ಎಸ್ಟಿ ಮೋರ್ಚಾ ನಗರ ಉಪಾಧ್ಯಕ್ಷ ಎಸ್. ತ್ಯಾಗರಾಜ್ ಮಹಿಳಾ ಮೋರ್ಚಾ ನಗರ ಕಾರ್ಯದರ್ಶಿ ವಿಜಯ ಮಂಜುನಾಥ್, ಮಂಡಲದ ಕಾರ್ಯದರ್ಶಿಗಳಾದ ರಾಚಪ್ಪಾಜಿ, ಶ್ರೀನಿವಾಸ್ ಪ್ರಸಾದ್, ಸೋಮಣ್ಣ, ತುಳಸಿ ವಿನುತಾ, ಮೋರ್ಚಾ ಪದಾಧಿಕಾರಿಗಳಾದ ರಂಗೇಶ್, ಚಂದ್ರಶೇಖರ ಸ್ವಾಮಿ, ರಾಘವೇಂದ್ರ, ಮಹೇಶ್, ರಾಜ ನಾಯಕ್, ಪುಟ್ಟಮ್ಮಣ್ಣಿ, ಮುಖಂಡರಾದ ರಾಮಕೃಷ್ಣಪ್ಪ, ನಂಜಪ್ಪ, ರಮಾಭಾಯಿ, ರಾಧಾ ಮುತಾಲಿಕ್, ದೇವರಾಜ್, ಲೋಕೇಶ್ ರೆಡ್ಡಿ, ನಾಗೇಶ್ ನಾಯಕ್, ಗಂಗಾಧರ್, ಅನಿತಾ, ಸುಮಿತ್ರಾ, ಸುಧಾ ಸೇರಿದಂತೆ ಹಲವರು ಇದ್ದರು.