ಶಾಮನೂರು ಗ್ರಾಮದ ಬಿಜೆಪಿ ಭೀಷ್ಮ ಎಂದೇ ಖ್ಯಾತರಾಗಿದ್ದ ಸಂಕೊಳ್ ಚಂದ್ರಶೇಖರ್ ಆತ್ಮಹತ್ಯೆ ಸುದ್ದಿ ಆಘಾತ ತಂದಿದೆ ಎಂದು ಮಾಜಿ ಸಚಿವ ಹಾಗೂ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರು ಆಪ್ತನ ನೆನೆದು ಕಣ್ಣೀರಿಟ್ಟರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಶಾಮನೂರು ಗ್ರಾಮದ ಬಿಜೆಪಿ ಭೀಷ್ಮ ಎಂದೇ ಖ್ಯಾತರಾಗಿದ್ದ ಸಂಕೊಳ್ ಚಂದ್ರಶೇಖರ್ ಆತ್ಮಹತ್ಯೆ ಸುದ್ದಿ ಆಘಾತ ತಂದಿದೆ ಎಂದು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರು ಆಪ್ತನ ನೆನೆದು ಕಣ್ಣೀರಿಟ್ಟರು.ಸಂಕೋಳ್ ಚಂದ್ರಶೇಖರ ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆ ಬಿಸಲೇರಿ ಗ್ರಾಮದ ತಮ್ಮ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿನ ಸುದ್ದಿ ತಿಳಿದ ತಕ್ಷಣ ಕುಟುಂಬಸ್ಥರಿಗೆ ಧೈರ್ಯ ಹೇಳಲು ಹೊರಟ ರವೀಂದ್ರನಾಥ್ ಮಾಧ್ಯಮದವರೊಂದಿಗೆ ಮಾತನಾಡುವಾಗ ಭಾವುಕರಾದರು.
ಸಂಕೊಳ್ ಚಂದ್ರಶೇಖರ ನನ್ನ ಸಂಬಂಧಿಕರು. ಕೆಲಸ ಚೆನ್ನಾಗಿ ಮಾಡುತ್ತಿದ್ದ. ಕಂಟ್ರೋಲ್ ಇರಲಿಲ್ಲ ಅವ್ನು. ಸಂಕೊಳ್ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ನನಗೂ ಬೆಳಗ್ಗೆ ಗೊತ್ತಾಗಿದೆ. ಏನಾಗಿದೆಯೋ ಏನೋ ಗೊತ್ತಿಲ್ಲ. ಜಗಳ ಆಡುತ್ತಿದ್ದ ಅಂತಾ ಹೇಳ್ತಿದ್ದಾರೆ. ಜನರಿಗಾಗಿ ಜನೋಪಯೋಗಿ ಕಾರ್ಯ ಮಾಡಿದ್ದ. ಆದರೆ, ಉಪಯೋಗ ಮಾಡಿದ್ದರೂ ಅವನೇ ಇಲ್ಲವಲ್ಲ ಈಗ. ಯಾರು ಕರೆದರೂ ಅವರ ಜತೆ ಮಾತನಾಡುತ್ತಿರಲಿಲ್ಲ, ಹಠವಾದಿಯಾಗಿದ್ದ ಎಂದು ಕಂಬನಿ ಮಿಡಿದರು.ಸಂಕೋಳ್ ಚಂದ್ರಶೇಖರ ಅತ್ತೆ ಮಗ ಕರಿಬಸಣ್ಣ ಆಗಾಗ್ಗೆ ಸಮಸ್ಯೆ ಪರಿಹರಿಸಲು ಯತ್ನಿಸುತ್ತಿದ್ದರು. ಅವರ ಮಾತೂ ಕೇಳುತ್ತಿರಲಿಲ್ಲ. ಉದ್ದಟತನದಿಂದ ಮಾತನಾಡಿ ಹೋಗುತ್ತಿದ್ದ ಎಂದು ಕರಿಬಸಣ್ಣ ಹೇಳ್ತಿದ್ದಾನೆ. ಚಂದ್ರಶೇಖರ್ ಸಾವಿನ ಸುದ್ದಿ ಬರಸಿಡಿಲು ಬಡಿದಂತಾಗಿದೆ ಎಂದು ಎಸ್.ಎ.ರವೀಂದ್ರನಾಥ್ ತಿಳಿಸಿದರು.
- - --11ಕೆಡಿವಿಜಿ42, 43: ಸುಟ್ಟು ಕರಕಲಾಗಿರುವ ಆಲ್ಟೋ ಕಾರು.