ವಕ್ಫ್ ಬೋರ್ಡ್ ಆಸ್ತಿಯೆಂದು ನೋಟಿಸ್ : ಇಂದು ಬಿಜೆಪಿಯಿಂದ ನಮ್ಮ ಭೂಮಿ- ನಮ್ಮ ಹಕ್ಕು ಪ್ರತಿಭಟನೆ

| Published : Nov 22 2024, 01:17 AM IST / Updated: Nov 22 2024, 06:56 AM IST

ವಕ್ಫ್ ಬೋರ್ಡ್ ಆಸ್ತಿಯೆಂದು ನೋಟಿಸ್ : ಇಂದು ಬಿಜೆಪಿಯಿಂದ ನಮ್ಮ ಭೂಮಿ- ನಮ್ಮ ಹಕ್ಕು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಾದ್ಯಂತ ವಕ್ಫ್ ಮಂಡಳಿ ಹೆಸರಿನಲ್ಲಿ ಲ್ಯಾಂಡ್ ಜಿಹಾದ್ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ.

 ಮೈಸೂರು ರೈತರ ಜಮೀನು, ಸರ್ಕಾರಿ ಶಾಲೆ, ಸ್ಮಶಾನ, ಚರ್ಚ್ ಪ್ರದೇಶದ ಭೂಮಿ ವಕ್ಫ್ ಬೋರ್ಡ್ ಆಸ್ತಿಯೆಂದು ನೋಟಿಸ್ ನೀಡುತ್ತಿರುವ ಕ್ರಮ ಖಂಡಿಸಿ ಹಾಗೂ ರಾಜ್ಯ ಸರ್ಕಾರದ ದ್ವಿಮುಖ ನಡೆ ವಿರೋಧಿಸಿ ನ.22ರ ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಮ್ಮ ಭೂಮಿ- ನಮ್ಮ ಹಕ್ಕು ಪ್ರತಿಭಟನೆ ಹಮ್ಮಿಕೊಂಡಿದ್ದು, 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ತಿಳಿಸಿದರು.

ರಾಜ್ಯಾದ್ಯಂತ ವಕ್ಫ್ ಮಂಡಳಿ ಹೆಸರಿನಲ್ಲಿ ಲ್ಯಾಂಡ್ ಜಿಹಾದ್ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ವಕ್ಫ್ ಮಂಡಳಿ ನೋಟಿಸ್ ನೀಡಿರುವುದನ್ನು ವಾಪಸ್ ಪಡೆಯುತ್ತೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಮತ್ತೊಂದೆಡೆ ಸಚಿವ ಜಮೀರ್ ಅಹ್ಮದ್ ಸಿಎಂ ಸೂಚನೆಯಂತೆ ವಕ್ಫ್ ಆಸ್ತಿಗಳಿಗೆ ನೋಟಿಸ್ ಕೊಡುವ ಸೂಚನೆ ನೀಡುತ್ತಾರೆ. ಅಧಿಕಾರಿಗಳು ಸರ್ಕಾರದ ಆದೇಶದಂತೆ ಆರ್.ಟಿ.ಸಿ.ಯಲ್ಲಿ ಖಾತೆ ಬದಲಾವಣೆ ಮಾಡಿರುವುದನ್ನು ಒಪ್ಪಿಕೊಂಡಿರುವ ಕಾರಣ ಬೃಹತ್ ಧರಣಿ ನಡೆಸಲಾಗುವುದು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜ್ಯದಲ್ಲಿ ವಕ್ಛ್ ಹೆಸರಿನಲ್ಲಿ ಭೂಮಿ ಬದಲಾವಣೆ ಮಾಡಿಕೊಂಡು ದೀನ ದಲಿತರ, ಬಡವರ ಜಮೀನಿನ ಹಕ್ಕನ್ನು ಕಸಿಯಲಾಗುತ್ತಿದೆ. ನೂರಾರು ವರ್ಷಗಳ ಕಾಲದಿಂದಲೂ ಉಳುಮೆ ಮಾಡಿಕೊಂಡು ಬಂದಿದ್ದ ರೈತರ ಭೂಮಿಯ ಖಾತೆ ಬದಲಾವಣೆ ಆಗಿ ಅನ್ಯಾಯ ಮಾಡಲಾಗುತ್ತಿದೆ. ರೈತರು ತಮ್ಮ ಜಮೀನಿನ ಖಾತೆ ಯಾರ ಹೆಸರಿನಲ್ಲಿ ಇದೆ ಎನ್ನುವುದನ್ನು ನೋಡಿಕೊಳ್ಳಬೇಕಾಗಿದೆ ಎಂದರು. ಮೈಸೂರು ತಾಲೂಕಿನ ಇಲವಾಲ ಶಾಲೆಗೆ ಭೇಟಿ ನೀಡಿದ್ದು, ಸರ್ವೆ ನಂಬರ್ 54ರಲ್ಲಿ ಶಾಲೆಯ ಜಾಗ ಖಾತೆ ಬದಲಾಗಿದೆ.

 ಕೃಷ್ಣರಾಜ ಕ್ಷೇತ್ರದ ಗುಂಡೂರಾವ್ ನಗರ ಸ್ಮಶಾನದ ಜಾಗ ವಕ್ಛ್ ಹೆಸರಿನಲ್ಲಿ ಖಾತೆಯಾಗಿದೆ. ಹುಣಸೂರು ತಾಲೂಕಿನ ಕಟ್ಟೆಮಳಲವಾಡಿಯಲ್ಲಿ ಸ್ಮಶಾನದ ಜಾಗ, ಟಿ. ನರಸೀಪುರ ತಾಲೂಕಿನ ರಂಗಸಮುದ್ರದ 19 ಗುಂಟೆ ಜಮೀನು ಬದಲಾವಣೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು. ರಾಜ್ಯದಲ್ಲಿ ಮೂರು ಟೀಂ ಮಾತ್ರ ಪ್ರವಾಸ ಮಾಡುತ್ತಿದೆಯೇ ಹೊರತು ಬೇರೆ ತಂಡವಿಲ್ಲ. 10 ವರ್ಷಗಳ ಕಾಲ ಸಂಸದನಾಗಿದ್ದೇನೆ, ಜನರ ಋಣ ತೀರಿಸಲು ಹೋರಾಟ ಮಾಡುತ್ತೇನೆ ಎನ್ನುವ ಮಾತನ್ನು ಪ್ರತಾಪ್ ಸಿಂಹ ಹೇಳಿರುವುದರಿಂದ ಹೋರಾಟ ಮಾಡಲಿ ಎಂದರು.

ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಅಲ್ಪಸಂಖ್ಯಾತರ ಮೋರ್ಚಾ ರಾಜ್ಯಾಧ್ಯಕ್ಷ ಡಾ. ಅನಿಲ್ ಥಾಮಸ್, ಮುಖಂಡರಾದ ಎಚ್.ಜಿ. ಗಿರಿಧರ್, ಬಿ.ಎಂ. ರಘು, ಕೇಬಲ್ ಮಹೇಶ್, ಮಿರ್ಲೆ ಶ್ರೀನಿವಾಸಗೌಡ, ಎನ್.ವಿ. ಫಣೀಶ್, ಹೇಮಾ ನಂದೀಶ್, ರುದ್ರಮೂರ್ತಿ, ಎಂ.ಜಿ. ಮಹೇಶ್ ಮೊದಲಾದವರು ಇದ್ದರು.-

ತನ್ವೀರ್ ಸೇಠ್ ವಕ್ಫ್ ಆಸ್ತಿ ಕಬಳಿಸಿದ್ದಾರೆ ಆರೋಪ 

ಬಿಜೆಪಿ ಸರ್ಕಾರ ಇದ್ದಾಗ ಅನ್ವರ್ ಮಾನಪ್ಪಾಡಿ ನೇತೃತ್ವದಲ್ಲಿ ನೀಡಿರುವ ಆಯೋಗದ ವರದಿ ಪ್ರಕಾರ ಸಿದ್ದಿಖಿನಗರದಲ್ಲಿರುವ ವಕ್ಫ್ ಆಸ್ತಿ ತನ್ವೀರ್ ಸೇಠ್ ಹೆಸರಿನಲ್ಲಿ ಖಾತೆಯಾಗಿದೆ. ವಕ್ಛ್ ಆಸ್ತಿಯನ್ನು ತನ್ವೀರ್ ಸೇಠ್ ಕಬಳಿಸಿದ್ದಾರೆ ಎಂದು ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ರಾಜ್ಯಾಧ್ಯಕ್ಷ ಡಾ. ಅನಿಲ್ ಥಾಮಸ್ ಆರೋಪಿಸಿದರು.ತಮ್ಮದೇ ಆದ ಒಂದು ಟ್ರಸ್ಟ್ ರಚನೆ ಮಾಡಿಕೊಂಡು ಅಜೀಜ್ ಸೇಠ್ ಅವರೇ ವ್ಯವಸ್ಥಾಪಕರಾಗಿದ್ದರು. ನಂತರ, ಅವರ ಪುತ್ರ ತನ್ವೀರ್ ಸೇಠ್ ತಮ್ಮ ಅಧೀನದಲ್ಲಿ ಇಟ್ಟುಕೊಂಡಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಸದ್ಬಳಕೆಯಾದರೆ ಒಬ್ಬ ಬಡವರೂ ಇರುವುದಿಲ್ಲ. ಈಗ ಮುಸ್ಲಿಂ ಬಡಬರಿಗೆ ಅರ್ಥವಾಗುತ್ತಿದೆ ಎಂದರು.