ಚಿಕ್ಕಮಗಳೂರು: ನಗರದ ಜನವಸತಿ ಪ್ರದೇಶದಲ್ಲಿ ರಿವಾಲ್ವರ್ ಹಾಗೂ ಡಬಲ್ ಬ್ಯಾರೆಲ್ ಗನ್ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ಆರೋಪದ ಮೇಲೆ ಬಿಜೆಪಿ ಯುವ ಮೋರ್ಚಾದ ನಗರ ಅಧ್ಯಕ್ಷ ಜೀವನ್ ಕೋಟೆ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು: ನಗರದ ಜನವಸತಿ ಪ್ರದೇಶದಲ್ಲಿ ರಿವಾಲ್ವರ್ ಹಾಗೂ ಡಬಲ್ ಬ್ಯಾರೆಲ್ ಗನ್ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ಆರೋಪದ ಮೇಲೆ ಬಿಜೆಪಿ ಯುವ ಮೋರ್ಚಾದ ನಗರ ಅಧ್ಯಕ್ಷ ಜೀವನ್ ಕೋಟೆ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಗರದ ಕೋಟೆ ಬಡಾವಣೆಯಲ್ಲಿ ಆಯುಧ ಪೂಜೆ ಹಿನ್ನೆಲೆ ಮನೆ ಮುಂಭಾಗ ಜೀವನ್ ಬಿನ್ ರಂಗನಾಥ್ ರಿವಾಲ್ವರ್ನಿಂದ ಐದು ಸುತ್ತು ಗುಂಡು ಹಾರಿಸಿರುವುದಲ್ಲದೆ, ಡಬಲ್ ಬ್ಯಾರೆಲ್ ಗನ್ನಿಂದಲೂ ಫೈರಿಂಗ್ ಮಾಡಿದ ವಿಡಿಯೊ ಅ.22ರಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.ನಗರ ಪೊಲೀಸ್ ಠಾಣೆ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಘಟಕದ ಸಿಬ್ಬಂದಿ ಫೇಸ್ಬುಕ್, ಇನ್ಸ್ಟಾಗ್ರಾಂ ಸೇರಿ ದಂತೆ ವಿವಿಧ ಸಾಮಾಜಿಕ ಮಾಧ್ಯಮಗಳನ್ನು ಪರಿಶೀಲಿಸುವಾಗ ವಿಡಿಯೊ ಗಮನಕ್ಕೆ ಬಂದಿದೆ. ಜನವಸತಿ ಪ್ರದೇಶದಲ್ಲಿ ಈ ರೀತಿ ಗುಂಡು ಹಾರಿಸುವುದರಿಂದ ಸಾರ್ವಜನಿಕರಲ್ಲಿ ಭಯಭೀತಿ ಉಂಟಾಗುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿ ಸಲಾಗಿದೆ.ವಿಡಿಯೊ ಆಧರಿಸಿ ಜೀವನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಕಾನ್ಸ್ಟೇಬಲ್ ನೀಡಿದ ದೂರಿನ ಮೇರೆಗೆ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಜನವಸತಿ ಪ್ರದೇಶದಲ್ಲೇ ಆಯುಧಗಳಿಂದ ಗುಂಡು ಹಾರಿಸಿರುವ ವಿಡಿಯೊ ವೈರಲ್ ಆಗಿದ್ದು, ಈ ಕೃತ್ಯದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ವ್ಯಕ್ತವಾಗಿದೆ.
