ನೇಹಾ ಹತ್ಯೆಗೆ ಬಿಜೆಪಿಯಿಂದ ಖಂಡನೆ

| Published : Apr 20 2024, 01:08 AM IST

ಸಾರಾಂಶ

ಕಾಲೇಜು ಕ್ಯಾಂಪಸ್ ನಲ್ಲಿ ಹಾಡು ಹಗಲೆ ವಿದ್ಯಾರ್ಥಿನಿಯೊಬ್ಬಳ ಹತ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಮೊಳಕಾಲ್ಮುರು: ಕಾಲೇಜು ಕ್ಯಾಂಪಸ್ ನಲ್ಲಿ ಹಾಡು ಹಗಲೆ ವಿದ್ಯಾರ್ಥಿನಿಯೊಬ್ಬಳ ಹತ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಇಲ್ಲಿನ ತಾಲೂಕು ಆಡಳಿತ ಸೌಧದ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಹುಬ್ಬಳ್ಳಿ ಬಿವಿಬಿ ಕಾಲೇಜ್‌ ಕ್ಯಾಂಪಸ್ ಆವರಣದಲ್ಲಿ ಕಾರ್ಪರೇಟ್ ನಿರಂಜನ್ ಮಗಳು ನೇಹಾ ಹಿರೆಮಠ ಇವರನ್ನು ದುಷ್ಕರ್ಮಿ ಹಾಡು ಹಗಲೆ ಕೊಲೆ ಮಾಡಿರುವ ಕ್ರಮ ಖಂಡನೀಯ. ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ನಂತರ ಅತಿಯಾದ ತುಷ್ಟೀಕರಣದಿಂದಾಗಿ ರಾಜ್ಯದಲ್ಲಿ ಜಿಹಾದಿ ಮನಸ್ಥಿತಿ ಹಿನ್ನೆಲೆಯವರು ಇಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದಿದ್ದಾರೆ.

ಸಮಾಜ ವಿರೋಧಿ ಕೃತ್ಯಗಳು ಜರುಗಿದಾಗ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಪ್ರಭಾವಿ ಸಚಿವರ ಬಾಲಿಷ ಹೇಳಿಕೆಗಳು ಹೆಚ್ಚುತ್ತಿವೆ. ಹಿಂದೂ ಸಮಾಜವನ್ನು ಅವಹೇಳನಗೊಳಿಸುವ ಯತ್ನ ನಡೆಯುತ್ತಿದೆ. ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ತಮ್ಮದೇ ಪಕ್ಷದ ಕಾರ್ಪೋರೇಟರ್ ಮಗಳೊಬ್ಬಳನ್ನು ಹಾಡುಹಗಲೇ ಕೊಲೆ ಮಾಡಿರುವುದು ರಾಜ್ಯದ ಜನರಿಗೆ ಭಯವನ್ನು ಸೃಷ್ಟಿಸಿದೆ ಎಂದಿದ್ದಾರೆ.

ಸರ್ಕಾರ ಘಟನೆಗೆ ಕಾರಣನಾದ ಫಯಾಜ್‌ನನ್ನು ಬಂಧಿಸಿದೆಯಾದರೂ ಕಾಂಗ್ರೆಸ್ ಸರ್ಕಾರ ಓಲೈಸುವ ರಾಜಕಾರಣ ಮಾಡುತ್ತಿದೆ. ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಹಲವು ಬಯೋತ್ಪಾದಕ ಕೃತ್ಯಗಳು ಜರುಗಿವೆ. ವಿಧಾನ ಸೌಧದಲ್ಲಿ ಪಾಕಿಸ್ತಾನ್ ಜಿಂದಬಾದ್, ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್, ಹನುಮಾನ್‌ ಚಾಲೀಸಾ, ರಾಮನವಮಿ ಗಲಾಟೆ ಸೇರಿದಂತೆ ಹಲವು ಕೃತ್ಯಗಳು ನಡೆಯುತ್ತಿದ್ದರೂ ಸರ್ಕಾರ ಜಾತಿ ರಾಜಕಾರಣ ಮಾಡುತ್ತಿದೆ. ಬಹುಸಂಖ್ಯಾತ ಹಿಂದೂ ಸಮಾಜವನ್ನು ನಿರ್ಲಕ್ಷ ತೋರಲಾಗುತ್ತಿದೆ. ಹಿಂದುಗಳಿಗೆ ರಕ್ಷಣೆ ಇಲ್ಲದಾಗಿದೆ. ಸರ್ಕಾರ ಕೂಡಲೇ ಘಟನೆಗೆ ಕಾರಣನಾದ ಫಯಾಜ್‌ ಮರಣ ದಂಡನೆಗೆ ಗುರಿ ಪಡಿಸಬೇಕು. ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ಕೂಡಲೆ ಆರೋಪಿಗೆ ಕಠಿಣ ಶಿಕ್ಷಣ ನೀಡುವ ಜತೆಗೆ ಗೃಹ ಸಚಿವರು ರಾಜಿನಾಮೆ ನೀಡಬೇಕು ಎಂದರು.

ಈ ವೇಳೆ ಹಿರಿಯ ಮುಖಂಡ ಡಿ.ಎಂ.ಈಶ್ವರಪ್ಪ, ಮಂಡಲ ಅಧ್ಯಕ್ಷ ಡಾ.ಪಿ.ಎಂ.ಮಂಜುನಾಥ, ಟಿ.ರೇವಣ್ಣ, ಹರೀಶ ಕಡೆತೋಟ, ಜಿಂಕ್ಲ ಬಸವರಾಜ, ಪ್ರಭಾಕರ್, ಪಟ್ಟಣ ಪಂಚಾಯಿತಿ ಸದಸ್ಯರಾದ ಶುಭಾ ಪೃತ್ವಿರಾಜ್, ಮಂಜಣ್ಣ, ಮಹಿಳಾ ಮೋರ್ಚ ಅಧ್ಯಕ್ಷೆ ಸರ್ವಮಂಗಳ, ಕಿರಣ್ ಗಾಯಕವಾಡ್, ರಾಮಾಂಜಿನೇಯ ಇದ್ದರು.