ಕನಕಪುರ: ರಾಜ್ಯದಲ್ಲಿ ಮಳೆ ಕೊರತೆಯಿಂದ ಉದ್ಬವಿಸಿರುವ ಬರ ಪರಿಸ್ಥಿತಿ ವೀಕ್ಷಣೆಗಾಗಿ ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ, ಮಾಜಿ ಸಚಿವ ಎನ್.ಮಹೇಶ್, ವಿಧಾನಪರಿಷತ್ ಸದಸ್ಯ ಗೋಪಿನಾಥರೆಡ್ಡಿ ಹಾಗೂ ಬರ ಅಧ್ಯಯನದ ರಾಜ್ಯ ತಂಡದ ಸಂಯೋಜಕ ಪಣೀಶ್ ತಂಡ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ವಕ್ಷೇತ್ರ ಕನಕಪುರ ತಾಲೂಕಿಗೆ ಭೇಟಿ ನೀಡಿ ರೈತರ ಸಂಕಷ್ಟವನ್ನು ವೀಕ್ಷಿಸಿದರು.
ತಾಲೂಕಿನ ಗಡಿ ಭಾಗದ ಹೊನ್ನಿಗನಹಳ್ಳಿ ಗ್ರಾಪಂ ವ್ಯಾಪ್ತಿಯ ಹರಿಹರ, ಸಾಸಲಪುರ ,ಹೊನ್ನಿಗನಹಳ್ಳಿ, ಗ್ರಾಮಗಳಲ್ಲಿ ಬತ್ತಿರುವ ಕೆರೆ ಮತ್ತು ರೈತರ ಜಮೀನುಗಳಿಗೆ ಭೇಟಿ ನೀಡಿ ಬರ ವೀಕ್ಷಣೆ ಮಾಡಿ ರೈತರ ಸಮಸ್ಯೆಗಳನ್ನು ಆಲಿಸಿದರು, ಹರಿಹರ ಗ್ರಾಮದ ರೈತ ಲೋಕೇಶ್ ಅವರ ಅಡಿಕೆ ತೋಟವನ್ನು ವೀಕ್ಷಿಸಿ ರೈತನಿಂದ ಮಾಹಿತಿ ಪಡೆದುಕೊಂಡರು. ಹೊನ್ನಿಗನಹಳ್ಳಿ ಗ್ರಾಮದಲ್ಲಿ ನೀರಿಲ್ಲದೆ ಒಣಗಿದ್ದ 500 ಎಕರೆ ವಿಸ್ತೀರ್ಣದಲ್ಲಿರುವ ಕೆರೆಗೆ ಭೇಟಿ ನೀಡಿ ವೀಕ್ಷಣೆ ಮಾಡಿದ ಬಳಿಕ ಸಾಸಲಾಪುರದ ಹಿಪ್ಪು ನೇರಳೆ ತೋಟ ಮತ್ತು ರೈತ ಚೌಡಯ್ಯ ಬೆಳೆದಿದ್ದ ಬಾಳೆ ತೋಟಕ್ಕೆ ಭೇಟಿ ನೀಡಿ ನೀರಿಲ್ಲದೆ ಬೆಳೆ ನಾಶವಾಗಿರುವ ಬಗ್ಗೆ ರೈತರಿಂದ ಮಾಹಿತಿ ಪಡೆದುಕೊಂಡರು.ಹರಿಹರ ಗ್ರಾಮದ ರೈತ ಲೋಕೇಶ್ ಮಾತನಾಡಿ, ಕೊಳವೆಬಾವಿ ಆಶ್ರಯಿಸಿ ಎರಡು ವರ್ಷಗಳ ಹಿಂದೆ ಎರಡು ಎಕರೆ ಜಾಗದಲ್ಲಿ ಅಡಿಕೆ ನಾಟಿ ಮಾಡಿದ್ದೆ. ಆದರೆ ಕೊಳವೆಬಾವಿ ಬರಿದಾಗಿ ನೀರಿಲ್ಲದೆ ಮಳೆಯೂ ಬಾರದೆ ಅಡಿಕೆ ತೋಟವೆಲ್ಲಾ ಒಣಗಿದೆ ಸಾವಿರ ಅಡಿ ಕೊರೆದರು ನೀರು ಸಿಗುತ್ತಿಲ್ಲ. ಕೃಷಿಯೇ ನಮ್ಮ ಜೀವನಾಧಾರ. ನೀರಲ್ಲದೆ ಕೃಷಿ ಮಾಡಲು ಆಗುತ್ತಿಲ್ಲ ಸರ್ಕಾರದಿಂದ ನಮಗೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಮನವಿ ಮಾಡಿದರು.
ಹೊನ್ನಿಗನಹಳ್ಳಿ ಮತ್ತು ಸಾಸಲಾಪುರ ಗ್ರಾಮದ ರೈತರು ಮಾತನಾಡಿ, ಹೊನ್ನಿಗನಹಳ್ಳಿ ಕೆರೆ ಸುಮಾರು 500 ಎಕರೆ ವಿಸ್ತೀರ್ಣದಲ್ಲಿದೆ ಈ ಕೆರೆ ಕನಕಪುರ ತಾಲೂಕು ಗಡಿ ಮತ್ತು ಮಂಡ್ಯ ಜಿಲ್ಲೆ ಗಡಿ ಭಾಗದ ರೈತರಿಗೆ ಬಹಳ ಅನುಕೂಲ ವಾಗಿತ್ತು. ಆದರೆ ಮಳೆ ಇಲ್ಲದೆ ಕೆರೆ ಸಂಪೂರ್ಣ ಬತ್ತಿದೆ. ಈ ಹಿಂದೆ ಕೆರೆಗೆ ನೀರು ಬಿಡಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕೆರೆಗೆ ನೀರು ಸಹ ಬರುತ್ತಿಲ್ಲ ಈಗ ಮಳೆಯೂ ಇಲ್ಲದೆ ಇರುವುದರಿಂದ ಕೆರೆ ಸಂಪೂರ್ಣ ಬತ್ತಿರುವುದರಿಂದ ಸುತ್ತಮುತ್ತಲ ಕೊಳವೆ ಬಾವಿಗಳು ಬರಿದಾಗಿವೆ. ನೀರಿಲ್ಲದೆ ಹಿಪ್ಪು ನೇರಳೆ ಮತ್ತು ಬಾಳೆ ಬೆಳೆ ಒಣಗಿ ಹಾಳಾಗಿವೆ ರೈತರು ಸಂಕಷ್ಟದಲ್ಲಿದ್ದಾರೆ ಸರ್ಕಾರ ವಸ್ತುನಿಷ್ಠವಾದ ಸಮೀಕ್ಷೆ ಮಾಡಿ ನಮಗೆ ಸೂಕ್ತ ಪರಿಹಾರ ಒದಗಿಸಿ ಕೊಡುವಂತೆ ಬರ ಅಧ್ಯಯನ ತಂಡದ ಮುಂದೆ ರೈತರು ಮನವಿ ಮಾಡಿಕೊಂಡರು.ರೈತರ ಸಮಸ್ಯೆಗಳನ್ನು ಆಲಿಸಿದ ರಾಜ್ಯ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ತಾಲೂಕಿನ ಸ್ಥಿತಿಗತಿಗಳ ಬಗ್ಗೆ ಪಕ್ಷ ಮತ್ತು ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರಕ್ಕೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ರೈತ ಮೋರ್ಚ ಜಿಲ್ಲಾಧ್ಯಕ್ಷ ಹೊನ್ನಿಗನಹಳ್ಳಿ ಜಗನ್ನಾಥ್, ರೈತ ಮೋರ್ಚಾ ಜಿಲ್ಲಾ ಪ್ರದಾನ ಕಾರ್ಯದರ್ಶಿ ನಾಗನಂದ, ಜಿಲ್ಲಾ ಉಪಾಧ್ಯಕ್ಷ ಶಿವಸ್ವಾಮಿ, ಕಾರ್ಯದರ್ಶಿ ಮುನಿನಿಂಗೇಗೌಡ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಯೋಗಾನಂದ, ದಿಶಾ ಕಮಿಟಿ ಸದಸ್ಯ ಶ್ರೀನಿವಾಸ್, ಮಾಜಿ ಅಧ್ಯಕ್ಷ ಕೆ.ಎಂ. ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಕೃಷ್ಣಪ್ಪ, ಮಂಡಲ ಅಧ್ಯಕ್ಷ ರವೀಶ್, ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಮತಾ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕಾಳಯ್ಯ, ಪ್ರಧಾನ ಕಾರ್ಯದರ್ಶಿ ಲೊಕೇಶ್, ಮಂಡಲ ಅಧ್ಯಕ್ಷ ನಂದೀಶ್, ಯುವ ಮೋರ್ಚ ಅಧ್ಯಕ್ಷ ತಿಮ್ಮಪ್ಪ, ಉಪಾಧ್ಯಕ್ಷ ಸುನಿಲ್, ಒಬಿಸಿ ಮೋರ್ಚಾ ಕಾರ್ಯದರ್ಶಿ ವೆಂಕಟರಮಣ, ಸಾಗರ್, ಗಣೇಶ್ ಉಪಸ್ಥಿತರಿದ್ದರು.
(ಫೋಟೋ ಕ್ಯಾಪ್ಷನ್)
ಕೆ ಕೆ ಪಿ ಸುದ್ದಿ 1.ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ನೇತೃತ್ವದ ಬಿಜೆಪಿ ನಾಯಕರ ತಂಡ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಗಡಿ ಭಾಗದದಲ್ಲಿ ಬರ ವೀಕ್ಷಣೆ ಮಾಡಿದರು.
2. ಕೆ ಕೆ ಪಿ ಸುದ್ದಿ 03(1):ವಿಧಾನಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ನೇತೃತ್ವದ ಬಿಜೆಪಿ ನಾಯಕರ ತಂಡ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಗಡಿ ಭಾಗದದಲ್ಲಿ ಬರ ವೀಕ್ಷಣೆ ಮಾಡಿದರು.