ಯೋಗೇಶ್ವರ್‌ಗೆ ಟಿಕೆಟ್ ನೀಡುವಂತೆ ಬಿಜೆಪಿ ಆಗ್ರಹ

| Published : Jul 20 2024, 12:51 AM IST

ಸಾರಾಂಶ

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಯೋಗೇಶ್ವರ್ ಎನ್‌ಡಿಎ ಪಕ್ಷದ ಅಭ್ಯರ್ಥಿ ಡಾ.ಮಂಜುನಾಥ್ ಪರವಾಗಿ ಹಗಲಿರುಳೆನ್ನದೆ ಶ್ರಮಿಸಿ ಗೆಲುವು ತಂದುಕೊಟ್ಟಿದ್ದಾರೆ. ಚನ್ನಪಟ್ಟಣದ ಉಪಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ದಿಟ್ಟ ಹೋರಾಟ ನೀಡಬೇಕಾಗುತ್ತದೆ. ನಾಯಕತ್ವದ ಎಲ್ಲಾ ವರಸೆಗಳನ್ನು ಬಲ್ಲ ಯೋಗೇಶ್ವರ್ ಅಭ್ಯರ್ಥಿಯಾದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಜಯ ಕಟ್ಟಿಟ್ಟ ಬುತ್ತಿ ಎಂಬ ಭರವಸೆ ವ್ಯಕ್ತಪಡಿಸಿ ಯೋಗೇಶ್ವರ್‌ ಅವರಿಗೆ ಮೈತ್ರಿಕೂಟದ ಟಿಕೆಟ್ ನೀಡುವಂತೆ ಒತ್ತಾಯಿಸಿದರು.

ಕನಕಪುರ: ಚನ್ನಪಟ್ಟಣದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ವಿಧಾನಪರಿಷತ್‌ ಸದಸ್ಯರ ಯೋಗೇಶ್ವರ್ ಅವರಿಗೆ ಎನ್‌ಡಿಎ ಮೈತ್ರಿಕೂಟದಿಂದ ಅವಕಾಶ ಮಾಡಿಕೊಡುವಂತೆ ತಾಲೂಕು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಕೆ.ಪಿ.ಕುಮಾರ್ ಅವರು ಪಕ್ಷದ ವರಿಷ್ಠರನ್ನು ಆಗ್ರಹಿಸಿದರು.

ಗ್ರಾಮಾಂತರ ಬಿಜೆಪಿ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿ, ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಯೋಗೇಶ್ವರ್ ಎನ್‌ಡಿಎ ಪಕ್ಷದ ಅಭ್ಯರ್ಥಿ ಡಾ.ಮಂಜುನಾಥ್ ಪರವಾಗಿ ಹಗಲಿರುಳೆನ್ನದೆ ಶ್ರಮಿಸಿ ಗೆಲುವು ತಂದುಕೊಟ್ಟಿದ್ದಾರೆ. ಚನ್ನಪಟ್ಟಣದ ಉಪಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ದಿಟ್ಟ ಹೋರಾಟ ನೀಡಬೇಕಾಗುತ್ತದೆ. ನಾಯಕತ್ವದ ಎಲ್ಲಾ ವರಸೆಗಳನ್ನು ಬಲ್ಲ ಯೋಗೇಶ್ವರ್ ಅಭ್ಯರ್ಥಿಯಾದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಜಯ ಕಟ್ಟಿಟ್ಟ ಬುತ್ತಿ ಎಂಬ ಭರವಸೆ ವ್ಯಕ್ತಪಡಿಸಿ ಯೋಗೇಶ್ವರ್‌ ಅವರಿಗೆ ಮೈತ್ರಿಕೂಟದ ಟಿಕೆಟ್ ನೀಡುವಂತೆ ಒತ್ತಾಯಿಸಿದರು.

ನೂತನ ಪದಾಧಿಕಾರಿಗಳು :

ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಕೆ.ಪಿ.ಕುಮಾರ್, ಉಪಾಧ್ಯಕ್ಷರಾಗಿ ಶೀರೇಗೌಡ ಹುಲಿಬೆಲೆ, ಯು.ವಿ.ಮಹಾದೇವಸ್ವಾಮಿ, ಮೋಹನ್‌ ಬಾಬು ಯಲವನಹಳ್ಳಿ, ರಾಮು ಸೂರನಹಳ್ಳಿ, ಸುಂದರ್‌ ಕುಮಾರ್ ರಾಮನಹಳ್ಳಿ ಹಾಗೂ ಪ್ರಧಾನ ಕಾರ್ಯದರ್ಶಿ ಗಳಾಗಿ ಕೆ.ಪಿ.ಅಶ್ವತ್‌ನಾರಾಯಣ್ ಕುರುಬಳ್ಳಿ, ಎ.ವಿ. ಪಾಲಾಕ್ಷ ಆಡನಕುಪ್ಪೆ, ತಾಲೂಕು ಕಾರ್ಯದರ್ಶಿಗಳಾಗಿ ಎಂ.ಕೆಂಪರಾಜು ರಾಂಪುರ, ಎಚ್.ಎಲ್.ಪ್ರದೀಪ್‌ ಕುಮಾರ್ ಹೊನಗನಹಳ್ಳಿ, ಪ್ರಮೋದ್ ಬನ್ನಿಮಕೊಡ್ಲು, ಚಿಕ್ಕಣ್ಣ ಐ.ಗೊಲ್ಲಹಳ್ಳಿ, ತಾಲೂಕು ಖಜಾಂಚಿಯಾಗಿ ಕೆ.ಎಲ್.ಲಕ್ಷ್ಮೀನಾರಾಯಣ ಹಾಗೂ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಕೆ.ಮಧುಸೂದನ್ ಮುರುಕಣಿ, ಶಿವರಾಜು ಬಿ.ಎಸ್.ದೊಡ್ಡಿ, ಸಾಗರ್ ವೆಂಕಟರಾಯರದೊಡ್ಡಿ, ದಾಳೇಗೌಡ ಮಹಿಮನಹಳ್ಳಿ, ಡಿ.ಉಮೇಶ್ ಕೋಟೆ ಕೊಪ್ಪ, ಕೆ.ಸಿ.ಮುನಿಯಪ್ಪ ಕೊಳಗೊಂಡನಹಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.