- ಪ್ರಧಾನ ಕಾರ್ಯದರ್ಶಿಗಳು ಐರಣಿ ಅಣ್ಣೇಶ, ಆರ್.ಲಕ್ಷ್ಮಣ, ಧನಂಜಯ ಕಡ್ಲೆಬಾಳು - ಜಿಲ್ಲಾ ಖಜಾಂಚಿ ಎಚ್.ಪಿ.ವಿಶ್ವಾಸ್, ಮಹಿಳಾ ಮೋರ್ಚಾ ಅಧ್ಯಕ್ಷೆ ಚೇತುಬಾಯಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಎಪಿಎಂಸಿ ಮಾಜಿ ಅಧ್ಯಕ್ಷ ಮೆಳ್ಳೆಕಟ್ಟೆ ನಾಗರಾಜ ಅವರನ್ನು ಹಾಗೂ ಜಿಲ್ಲಾ ಸಮಿತಿ, ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಿ, ಪಕ್ಷದ ರಾಜ್ಯ ನಾಯಕರು ಆದೇಶ ಹೊರಡಿಸಿದ್ದಾರೆ.ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ಮಾಯಕೊಂಡ ಕ್ಷೇತ್ರದ ಮೆಳ್ಳೆಕಟ್ಟೆ ನಾಗರಾಜ, ಉಪಾಧ್ಯಕ್ಷರಾಗಿ ದಕ್ಷಿಣ ಕ್ಷೇತ್ರದ ಶಂಕರಗೌಡ ಪಾಟೀಲ್ ಬಿರಾದಾರ, ಚನ್ನಗಿರಿ ಬಸವರಾಜ, ಮಾಯಕೊಂಡದ ಆಲೂರು ನಿಂಗರಾಜ, ಅನಿಲಕುಮಾರ ನಾಯ್ಕ, ಹೊನ್ನಾಳಿ ಮಂಜುನಾಥ, ಜಗಳೂರು ಇ.ಎನ್.ಪ್ರಕಾಶ, ಹರಿಹರದ ಅಶ್ವಿನಿ ಕೃಷ್ಣ, ಉತ್ತರದ ವೀಣಾ ನಂಜಪ್ಪನವರಿಗೆ ನೇಮಕ ಮಾಡಿ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆದೇಶಿಸಿದ್ದಾರೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಹರಿಹರದ ಅಣ್ಣೇಶ ಐರಣಿ, ಉತ್ತರ ಕ್ಷೇತ್ರದ ಆರ್.ಲಕ್ಷ್ಮಣ, ಧನಂಜಯ ಕಡ್ಲೇಬಾಳು, ಕಾರ್ಯದರ್ಶಿಯಾಗಿ ಜಗಳೂರು ಜಯಲಕ್ಷ್ಮಿ ಮಹೇಶ, ಚನ್ನಗಿರಿ ಕಮಲಾ ಹರೀಶ, ಉತ್ತರದ ಸಿ.ಎಚ್.ಶಾಂತಾ, ಮಾಯಕೊಂಡದ ಶೋಭಾ ಧರಣೇಶ, ದಕ್ಷಿಣದ ಭಾಗ್ಯ ಪಿಸಾಳೆ, ರಾಜು ನೀಲಗುಂದ, ಉತ್ತರದ ಪಿ.ಎಸ್. ಬಸವರಾಜ, ಮಹೇಂದ್ರ ಹೆಬ್ಬಾಳ, ಖಜಾಂಚಿಯಾಗಿ ಎಚ್.ಪಿ.ವಿಶ್ವಾಸ ನೇಮಕವಾಗಿದ್ದಾರೆ.
ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ಹೊನ್ನಾಳಿಯ ಬೀರಪ್ಪ ಹೊನ್ನಾಳಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ದಕ್ಷಿಣದ ಚೇತು ಬಾಯಿ, ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ರಾಗಿ ಚನ್ನಗಿರಿ ಲೋಹಿತಕುಮಾರ, ರೈತ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಹರಿಹರದ ಚಂದ್ರಶೇಖರ ಪೂಜಾರ, ಎಸ್‌ಸಿ ಮೋರ್ಚಾ ಅದ್ಯಕ್ಷರಾಗಿ ಜಗಳೂರು ಹನುಮಂತಪ್ಪ, ಅಲ್ಪಸಂಖ್ಯಾತರ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ದಕ್ಷಿಣದ ಗೌತಮ್ ಜೈನ್, ಯುವ ಮೋರ್ಚಾ ಅಧ್ಯಕ್ಷರಾಗಿ ದಕ್ಷಿಣದ ರಾಕೇಶ ನೇಮಕವಾಗಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
- - -(ಬಾಕ್ಸ್)
* ಬಿಜೆಪಿ ನೂತನ ಪದಾಧಿಕಾರಿ ಆಯ್ಕೆ: ಬುಗಿಲೆದ್ದ ಆಕ್ರೋಶ ದಾವಣಗೆರೆ: ಮನೆಯೊಂದು ಮೂರು ಬಾಗಿಲಂತಾಗಿರುವ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎನ್.ರಾಜಶೇಖರ ನಾಗಪ್ಪ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ದಿಢೀರನೇ ಜಿಲ್ಲಾ ಘಟಕ, ವಿವಿಧ ಮೋರ್ಚಾಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿರುವುದು ಪಕ್ಷದಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.ಪಕ್ಷದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪದಾಧಿಕಾರಿಗಳನ್ನು ಆಯ್ಕೆ ಮಾಡಿಲ್ಲವೆಂಬ ಮಾತು ಕೇಳಿಬರುತ್ತಿದೆ. ಹಿಂದಿನ ಅಧ್ಯಕ್ಷ ಎನ್.ರಾಜಶೇಖರಪ್ಪ ಅಧ್ಯಕ್ಷರಾದಾಗಿನಿಂದ ರಾಜೀನಾಮೆ ಕೊಡುವ ದಿನದವರೆಗೂ ಅತ್ತ ಧರಿ, ಇತ್ತ ಪುಲಿ ಎಂಬಂತೆ ಅಧ್ಯಕ್ಷನಾಗಿ ಕಾರ್ಯ ರ್ವಹಿಸಿದ್ದನ್ನು ಸ್ವತಃ ಪಕ್ಷದ ಹಿರಿಯ-ಕಿರಿಯ ಮುಖಂಡರು, ಕಾರ್ಯಕರ್ತರೆ ಒಪ್ಪಿಕೊಳ್ಳುತ್ತಾರೆ.
ಹೋರಾಟದಿಂದಲೇ, ಹಲವಾರು ಕೇಸ್ ಗಳನ್ನು ಹಾಕಿಸಿಕೊಂಡೇ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ, ಯುವ ಮೋರ್ಚಾದಲ್ಲಿ, ಹಿಂದೂ ಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ರಾಜಶೇಖರ ನಾಗಪ್ಪಗೆ ಪಕ್ಷದೊಳಗಿನ ಬಣಗಳ ಮುಸುಕಿನ ಗುದ್ದಾಟದಿಂದ ಒಂದೇ ಒಂದು ದಿನವೂ ನೆಮ್ಮದಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಲಿಲ್ಲ. ಏನೇ ಕೆಲಸ ಮಾಡಿದರೂ ಒಂದಲ್ಲ ಒಂದು ಗುಂಪಿನ ವಿರೋಧ ಎದುರಿಸಬೇಕಾದ ಅಸಹಾಯಕ ಸ್ಥಿತಿಯಲ್ಲಿದ್ದುದು ಸ್ಪಷ್ಟವಾಗಿ ಕಾಣುತ್ತಿತ್ತು. ಇದೀಗ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದಾವಣಗೆರೆ ಜಿಲ್ಲೆಯ ಗುಂಪುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಮತ್ತೊಂದು ಗುಂಪಿನ ಪರ ಪದಾಧಿಕಾರಿಗಳನ್ನು ಆಯ್ಕೆ ಮಾಡಿದಂತಿದೆ ಎಂದರು.ಇಲ್ಲಿ ಕೇಂದ್ರದ ಮಾಜಿ ಸಚಿವರಿದ್ದಾರೆ, ಹಾಲಿ ಶಾಸಕರಿದ್ದಾರೆ, ಹಿರಿಯ ಮುಖಂಡರು, ಕಾರ್ಯಕರ್ತರು ಇದ್ದಾರೆ, ಜನಸಂಘ ಕಾಲದಿಂದಲೂ ಪಕ್ಷಕ್ಕಾಗಿ ನಿಸ್ವಾರ್ಥದಿಂದ ದುಡಿದಂತಹ ಹಿರಿಯ ಜೀವಗಳಿವೆ. ಈ ಯಾರ ಬಳಿಯೂ ಚರ್ಚಿಸದೇ ಏಕಪಕ್ಷೀಯವಾಗಿ ಪದಾಧಿಕಾರಿಗಳ ಆಯ್ಕೆ ಮಾಡದ್ದಾರೆಂಬ ಆಕ್ಷೇಪ ವ್ಯಕ್ತವಾಗುತ್ತಿದೆ.
ಎಪಿಎಂಸಿ ಮಾಜಿ ಅಧ್ಯಕ್ಷರಾದ ಮೆಳ್ಳೆಕಟ್ಟೆ ನಾಗರಾಜ ಯಾವುದೇ ಗುಂಪಿನ ಜೊತೆಗೆ ಗುರುತಿಸಿಕೊಳ್ಳದೇ, ತಟಸ್ಥವಾಗಿದ್ದರೂ ಎರಡೂ ಗುಂಪುಗಳು, ಮುಖಂಡರು- ಕಾರ್ಯಕರ್ತರ ಜೊತೆ ಚರ್ಚಿಸದೇ ನೇಮಿಸಲಾಗಿದೆಯೆಂಬ ದೂರು ಕೇಳಿಬರುತ್ತಿದೆ. ಮಾಯಕೊಂಡ ಕ್ಷೇತ್ರದ ಮಂಡಲ ಅಧ್ಯಕ್ಷರಾಗಿದ್ದ ಮೆಳ್ಳೆಕಟ್ಟೆ ನಾಗರಾಜ ತಟಸ್ಥವಾಗಿದ್ದ ಕಾರಣಕ್ಕೆ ಅಧ್ಯಕ್ಷ ಸ್ಥಾನ ಒಲಿದಿರಬಹುದು. ಆದರೆ, ಇತರೆ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ನೇಮಕದ ಬಗ್ಗೆ ಅಪಸ್ವರ ಕೇಳಿ ಬರುತ್ತಿದೆ.ಅನೂತನ ಪದಾಧಿಕಾರಿಗಳಾದ ಕೆಲವರಿಗೆ ಸೌಜನ್ಯಕ್ಕೂ ಒಂದು ಮಾತು ಕೇಳಿಲ್ಲ. ವಿವಿಧ ಮೋರ್ಚಾಗಳ ಅಧ್ಯಕ್ಷರ ನೇಮಕದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಬಣದ ಮೇಲುಗೈ ಆಗಿದೆ. ರೇಣುಕಾಚಾರ್ಯರ ಜೊತೆಗೆ ಗುರುತಿಸಿಕೊಂಡಿದ್ದವರಿಗೆ ಹೆಚ್ಚು ಸ್ಥಾನಮಾನ ನೀಡಿ, ಮಣೆ ಹಾಕಲಾಗಿದೆ ಎಂಬ ಅಸಮಾಧಾನವಿದೆ. ಇನ್ನುಳಿದಂತೆ ಹಲವರು ಈಗಾಗಲೇ ತಮ್ಮ ಬೇಸರವನ್ನು ಹೊರ ಹಾಕಲು ಶುರುವಾಗಿದ್ದು, ಹೊಸ ಪದಾಧಿಕಾರಿಗಳ ಸ್ಥಾನಮಾನ ಉಳಿಯುತ್ತದೋ ಮತ್ತೇನಾದರೂ ಹೊಸದಾಗಿ ಬದಲಾವಣೆಗೆ ವರಿಷ್ಟರಿಂದಲೇ ಸೂಚನೆ ಬರುತ್ತದೆಯೋ ನೋಡಬೇಕಿದೆ. ಸದ್ಯಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ವಿಚಾರ ಮಾತ್ರ ಎರಡೂ ಬಣಕ್ಕೂ ಬಿಸಿ ತುಪ್ಪವೇ ಆಗಿದೆ. ಬಣಗಳಿಂದ ದೂರವಿದ್ದ ನಿಷ್ಟಾವಂತ ಮುಖಂಡರು, ಕಾರ್ಯಕರ್ತರಿಗೆ ಇದು ಮತ್ತೊಂದು ತಲೆ ನೋವಾಗಿದೆ ಎನ್ನಲಾಗಿದೆ.
- - --13ಕೆಡಿವಿಜಿ5: ಮೆಳ್ಳೆಕಟ್ಟೆ ನಾಗರಾಜ.
-13ಕೆಡಿವಿಜಿ6: ಐರಣಿ ಅಣ್ಣೇಶ್.-13ಕೆಡಿವಿಜಿ7: ಆರ್.ಲಕ್ಷ್ಮಣ,
-13ಕೆಡಿವಿಜಿ8: ಧನಂಜಯ ಕಡ್ಲೇಬಾಳು-13ಕೆಡಿವಿಜಿ9: ಎಚ್.ಪಿ.ವಿಶ್ವಾಸ,
-13ಕೆಡಿವಿಜಿ10: ದಾವಣಗೆರೆ ಬಿಜೆಪಿ ಮಹಿಳಾ ಮೋರ್ಚಾದ ನೂತನ ಜಿಲ್ಲಾಧ್ಯಕ್ಷೆ ಚೇತು ಬಾಯಿ.- - -