ಹಳ್ಳಿ ಸಂಸ್ಕೃತಿ ಕಲಾ ಟ್ರಸ್ಟ್ ದೊಡ್ಡಸಣ್ಣೆ ಇವರು ಗ್ರಾಮೀಣ ಭಾಗದಲ್ಲಿ ಕಲೆಗೆ ಸಂಬಂಧಪಟ್ಟ ಕಾರ್ಯಕ್ರಮಗಳ ಮೂಲಕ ಕಲಾವಿದರಿಗೆ ವೇದಿಕೆ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಇದರಿಂದ ಕಲೆ ಮುಂದಿನ ಪೀಳಿಗೆಗೆ ಉಳಿಯಲು ಸಾಧ್ಯವಾಗುತ್ತದೆ ಎಂದರು.
ಸೂಲಿಬೆಲೆ: ಜನಪದ ಕಲೆ ಮತ್ತು ರಂಗಭೂಮಿಗೆ ಮರು ಜೀವ ನೀಡುವ ಕೆಲಸವಾಗಬೇಕು ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರಾದ ವಿ.ವೆಂಕಟೇಶ್ ಹೇಳಿದರು.
ಸೂಲಿಬೆಲೆ ಚನ್ನಬೈರೇಗೌಡ ನಗರದಲ್ಲಿ ಹಳ್ಳಿ ಸಂಸ್ಕೃತಿ ಕಲಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜನಪದ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಹಳ್ಳಿ ಸಂಸ್ಕೃತಿ ಕಲಾ ಟ್ರಸ್ಟ್ ದೊಡ್ಡಸಣ್ಣೆ ಇವರು ಗ್ರಾಮೀಣ ಭಾಗದಲ್ಲಿ ಕಲೆಗೆ ಸಂಬಂಧಪಟ್ಟ ಕಾರ್ಯಕ್ರಮಗಳ ಮೂಲಕ ಕಲಾವಿದರಿಗೆ ವೇದಿಕೆ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಇದರಿಂದ ಕಲೆ ಮುಂದಿನ ಪೀಳಿಗೆಗೆ ಉಳಿಯಲು ಸಾಧ್ಯವಾಗುತ್ತದೆ ಎಂದರು.
ಹಳ್ಳಿ ಸಂಸ್ಕೃತಿ ಕಲಾ ಟ್ರಸ್ಟ್ ಕಾರ್ಯದರ್ಶಿ ಶಾಂತಾ ಮಾತನಾಡಿ, ೮ ವರ್ಷಗಳಿಂದ ನಮ್ಮ ಟ್ರಸ್ಟ್ ಕಲಾ ಸೇವೆಗಾಗಿ ಮೀಸಲಾಗಿದ್ದು, ಅನೇಕ ಕಲಾವಿದರನ್ನು ಗುರುತಿಸಿ ಅವರಿಗೆ ವೇದಿಕೆ ಜೊತೆಯಲ್ಲಿ ಪ್ರೋತ್ಸಾಹ ಹಾಗೂ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಸಹ ದೊರಕಿಸಿಕೊಡುತ್ತಿದ್ದೇವೆ ಎಂದರು.ಜನಪದ ನೃತ್ಯ, ಸಮೂಹ ನೃತ್ಯ, ಭರತನಾಟ್ಯ, ಸುಗಮ ಸಂಗೀತ, ಜನಪದ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು
ಮುಖಂಡರುಗಳಾದ ಸೈಯದ್ ಮೆಹಬೂಬ್, ಮಂಜುನಾಥ್, ರಕ್ಷಿತಾ, ನಯಾಜ್,ಮುನಿಕೃಷ್ಣ, ಇತರರು ಇದ್ದರು.----