ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬಿಜೆಪಿ ವ್ಯಕ್ತಿ ಮೇಲೆ ನಿಂತಿಲ್ಲ, ಪಕ್ಷ ಉಳಿಸಬೇಕು ಅಂತಾ ಇರುವ ಪಕ್ಷ. ಎಲ್ಲ ನಾಯಕರು ಒಟ್ಟಿಗೆ ಇರುತ್ತೇವೆ. ಬಿಜೆಪಿಯಲ್ಲಿ ಸ್ಥಾನಮಾನದ ಪ್ರಶ್ನೆ ಇಲ್ಲ. ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರೇ. ಪ್ರಧಾನಮಂತ್ರಿ ಮೋದಿ ಅವರೂ ಕಾರ್ಯಕರ್ತರೇ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಒಬ್ಬ ವ್ಯಕ್ತಿಯಿಂದ ಪಕ್ಷ ಬೆಳೆಯಲ್ಲ. ಬಿಜೆಪಿ ಯಾರ ಮೇಲೂ ನಿಂತಿಲ್ಲ. ನರೇಂದ್ರ ಮೋದಿ ಬಿಜೆಪಿಯಲ್ಲಿ ಕಾರ್ಯಕರ್ತರು. ನಾನು ಕೂಡ ಕಾರ್ಯಕರ್ತ. ಎಲ್ಲರೂ ಒಟ್ಟಾಗಿ 28 ಸ್ಥಾನ ಗೆಲ್ಲುತ್ತೇವೆ. ಸಾಮೂಹಿಕ ನೇತೃತ್ವದಲ್ಲಿ ಈ ಚುನಾವಣೆ ನಡೆಯಲಿದೆ ಎಂದು ಹೇಳಿದರು.
ದೇಶದಲ್ಲಿ ಬಿಜೆಪಿ ಒಡೆದ ಮನೆ ಅಂತಿದ್ದಾರೆ ಕಾಂಗ್ರೆಸ್‌ನವರು. ಆದರೆ, ದೇಶದಲ್ಲಿ ಒಂದೇ ಕಾಂಗ್ರೆಸ್ ಇಲ್ಲ, ಹಲವು ಕಾಂಗ್ರೆಸ್ ಪಕ್ಷಗಳಿವೆ. ದೇಶ, ರಾಜ್ಯದಲ್ಲಿ ಕಾಂಗ್ರೆಸ್ ಒಡೆದು ಚೂರು ಚೂರಾಗಿರುವ ಪಕ್ಷ. ಅಧಿಕಾರ ಕಾಂಗ್ರೆಸ್‌ಗೆ ಇದೆಯಾ ಎಂದು ಪ್ರಶ್ನಿಸಿದರು.ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಶುಭ ಹಾರೈಸಿ ಅವರು, ಯಡಿಯೂರಪ್ಪ ಅವರ ಮಕ್ಕಳು ಆಗುತ್ತಾರಾ ಅಂತಾ ಕಾಯ್ತಿದ್ದರು. ಕಾಂಗ್ರೆಸ್‌ನಲ್ಲಿ ನೆಹರು, ಇಂದಿರಾ ಗಾಂಧಿ ಕುಟುಂಬದವರೇ ಆಳಿದ್ದಾರೆ. ಕಾಂಗ್ರೆಸ್ ಇರುವುದೇ ಒಂದು ಕುಟುಂಬದ ಹಿಡಿತದಲ್ಲಿ. ಬಿಜೆಪಿ ಕುಟುಂಬ ರಾಜಕಾರಣಕ್ಕೆ ವಿರೋಧವೇ. ಕುಟುಂಬ ರಾಜಕಾರಣದ ಬಗ್ಗೆ ಟ್ವೀಟ್ ಮಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ ಎಂದರು. ಸ್ವಾತಂತ್ರ್ಯ ಬಂದಾಗಿನಿಂದಲೂ ಒಂದೇ ಕುಟುಂಬದ ಕೈಯಲ್ಲಿ ಕಾಂಗ್ರೆಸ್ ಪಕ್ಷ ಇದೆ. ಪಕ್ಷ ಏನು ಜವಾಬ್ದಾರಿ ಕೊಡುತ್ತದೆಯೋ ಅದನ್ನು ನಿರ್ವಹಿಸುತ್ತೇನೆ. ನಮ್ಮದು ಸಾಮೂಹಿಕ ನೇತೃತ್ವ. ಲೋಕಸಭೆ ಟೀಕೆಟ್ ಹಂಚಿಕೆ, ಲೋಕಸಭೆ ಚುನಾವಣಾ ಪ್ರಚಾರ ಎಲ್ಲ ಸಾಮೂಹಿಕ ನೇತೃತ್ವದಲ್ಲೇ ನಡೆಯುತ್ತದೆ. ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುತ್ತೇವೆ ಎಂದು ಹೇಳಿದರು.
- - - (-ಫೋಟೋ: ಕೆ.ಎಸ್.ಈಶ್ವರಪ್ಪ)