ಬಿಜೆಪಿಯಿಂದ ಜು. 6ರ ವರೆಗೆ ‘ಏಕ್ ಪೆಡ್ ಮಾ ಕೆ ನಾಮ್’

| Published : Jun 27 2024, 01:16 AM IST

ಸಾರಾಂಶ

ಜಿಲ್ಲೆಯಾದ್ಯಂತ ಏಕ್‌ ಪೆಡ್‌ ಮಾ ಕೆ ನಾಮ್‌ ಕಾರ್ಯಕ್ರಮದ ಮೂಲಕ ಎಲ್ಲಡೆ ಗಿಡ ನೆಟ್ಟು ಪೋಷಿಸಲಾಗುವುದು. ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಯೋಜನೆಯ ಬಗ್ಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್‌ ಕುಮಾರ್‌ ಕುಂದಾಪುರ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಜನಸಂಘದ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿ ಹಿನ್ನೆಲೆ ಜೂ.23ರ ಜಯಂತಿಯಿಂದ ಜು.6 ರವರೆಗೂ ಜಿಲ್ಲೆಯಾದ್ಯಂತ ಏಕ್ ಪೆಡ್ ಮಾ ಕೆ ನಾಮ್ (ತಾಯಿಯ ಹೆಸರಿನಲ್ಲಿ ಒಂದು ಗಿಡ) ಕಾರ್ಯಕ್ರಮದ ಮೂಲಕ ಎಲ್ಲೆಡೆ ಗಿಡ ನೆಟ್ಟು ಪೋಷಿಸಲಾಗುವುದು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು.

ಅವರು ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ರಾಷ್ಟ್ರ ಹಾಗೂ ರಾಜ್ಯ ಬಿಜೆಪಿ ಸೂಚನೆಯಂತೆ ಪ್ರತಿಯೊಬ್ಬರು ತಮ್ಮ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಟ್ಟು ಪೋಷಣೆ ಮಾಡಬೇಕು ಎಂದು ಪಕ್ಷದ ಕಾರ್ಯಕರ್ತರು, ಪ್ರಮುಖರು, ಮುಖಂಡರಿಗೆ ಈಗಾಗಲೇ ತಿಳಿಸಿದ್ದು ಜು.6ರವರೆಗೂ ಈ ಅಭಿಯಾನ ನಡೆಯಲಿದೆ. ತಾಯಿ ಮರಣ ಹೊಂದಿದ್ದರು, ಅವರ ಭಾವಚಿತ್ರವನ್ನಿಟ್ಟು ಗಿಡ ನೆಡಲಿದ್ದಾರೆ ಎಂದರು.

ಈ ವೇಳೆ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು. ಡಿವೈಎಸ್‌ಪಿ ಪ್ರಭು ಈ ನಾಯಕರ ಅಹವಾಲು ಸ್ವೀಕರಿಸಿದರು. ಮಣಿಪಾಲ ವೃತ್ತ ನಿರೀಕ್ಷಕ ದೇವರಾಜ್, ಪಿಎಸ್‌ಐ ರಾಘವೇಂದ್ರ ಉಡುಪಿ ನಗರ ಠಾಣೆಯ ಎಸ್‌ಐ ಭರತೇಶ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

ಕಾಂಗ್ರೆಸ್ ಕಚೇರಿಗೆ ಭಿತ್ತಿಪತ್ರ ಅಂಟಿಸಲು ಯತ್ನ: ಕಾಂಗ್ರೆಸ್ ಸರ್ಕಾರದ ನೀತಿಗಳನ್ನು ಖಂಡಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ನೇತೃತ್ವದಲ್ಲಿ ಕಾಂಗ್ರೆಸ್ ಕಚೇರಿಗೆ ಭಿತ್ತಿಪತ್ರ ಅಂಟಿಸಲು ಹೊರಟ ಬಿಜೆಪಿ ನಾಯಕರನ್ನು ಪೊಲೀಸರು ಬಿಜೆಪಿ ಜಿಲ್ಲಾ ಕಚೇರಿಯ ಮುಂಭಾಗ ತಡೆದು ನಿಲ್ಲಿಸಿದರು.