ಆರ್‌ಎಸ್‌ಎಸ್ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಶುಕ್ರವಾರ ಹಳಿಯಾಳ ಠಾಣೆಯಲ್ಲಿ ಬಿಜೆಪಿ ಮಂಡಲದ ವತಿಯಿಂದ ದೂರು ಸಲ್ಲಿಸಲಾಯಿತು.
ಹಳಿಯಾಳ: ಆರ್‌ಎಸ್‌ಎಸ್ ಹಾಗೂ ಬಿಜೆಪಿಯನ್ನು ವಿಷಸರ್ಪಗಳು, ಅವನ್ನು ಹೊಡೆದು ಕೊಲ್ಲಬೇಕು ಎಂದು ಪ್ರಚೋದನಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಶುಕ್ರವಾರ ಹಳಿಯಾಳ ಠಾಣೆಯಲ್ಲಿ ಬಿಜೆಪಿ ಮಂಡಲದ ವತಿಯಿಂದ ದೂರು ಸಲ್ಲಿಸಲಾಯಿತು.
ಮಾಜಿ ಶಾಸಕ ಸುನೀಲ ಹೆಗಡೆ ಮುಂದಾಳತ್ವದಲ್ಲಿ ಹಳಿಯಾಳ ಠಾಣೆಗೆ ಬಂದ ಹಳಿಯಾಳ ಬಿಜೆಪಿ ಮಂಡಲದ ಪ್ರಮುಖರ ನಿಯೋಗವು, ಸಿಪಿಐ ಜಯಪಾಲ್ ಪಾಟೀಲ ಹಾಗೂ ಹಳಿಯಾಳ ಪಿಎಸ್‌ಐ ಬಸವರಾಜ ಮಬನೂರ ಅವರಿಗೆ ಲಿಖಿತ ದೂರು ಸಲ್ಲಿಸಿದರು.ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ ಪ್ರಚೋದನಕಾರಿ ಹೇಳಿಕೆ ದೇಶದಾದ್ಯಂತ ಇರುವ ಸಂಘ ಪರಿವಾರದ ಮೇಲೆ ಮಾಡಿದ ದಾಳಿಯಂತಿದೆ. ಮತೀಯ ಸಾಮರಸ್ಯತೆಗೆ ಧಕ್ಕೆಯನ್ನುಂಟು ಮಾಡುತ್ತಿರುವ ಇಂತಹ ಹೇಳಿಕೆ ನೀಡಿರುವವರ ವಿರುದ್ಧ ಪೊಲೀಸರು ಔಪಚಾರಿಕ ದೂರುಗಳಿಗೆ ಕಾಯದೇ ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಬೇಕು. ಖರ್ಗೆ ಅವರ ಹೇಳಿಕೆಯಿಂದ ದೇಶದಲ್ಲಿ ಉದ್ಭವಿಸಿರುವ ಪರಿಸ್ಥಿತಿಯ ಅವಲೋಕನ ಮಾಡಿ ಬಿಜೆಪಿ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು. ಲಕ್ಷಾಂತರ ಕಾರ್ಯಕರ್ತರ ಹತ್ಯೆಗೆ ಕರೆ ನೀಡಿರುವ ಖರ್ಗೆ ಅವರನ್ನು ತಕ್ಷಣ ಬಂಧಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಬಿಜೆಪಿ ಮಂಡಲ ಅಧ್ಯಕ್ಷ ವಿಠ್ಠಲ ಸಿದ್ದಣ್ಣನವರ, ಪ್ರಮುಖರಾದ ಶಿವಾಜಿ ನರಸಾನಿ, ಮಂಗೇಶ ದೇಶಪಾಂಡೆ, ಶ್ರೀನಿವಾಸ ಘೋಟ್ನೇಕರ, ಅನಿಲ ಮುತ್ನಾಳ್, ಜ್ಞಾನೇಶ್ ಮಾನಗೆ, ವಿ.ಎಂ. ಪಾಟೀಲ, ತುಕಾರಾಮ್ ಗೌಡ, ರಾಘವೇಂದ್ರ ಚಲವಾದಿ, ಯಲ್ಲಪ್ಪಾ ಹೊನ್ನೋಜಿ, ಮಹಾದೇವ್ ಮಾದಾರ, ಹನುಮಂತ ಚಲವಾದಿ, ಸಂತಾನ್ ಸಾವಂತ, ಶಾಂತಾ ಹಿರೇಕರ, ಮಾಲಾ ಹುಂಡೇಕರ್, ಜಯಲಕ್ಷ್ಮೀ ಚವ್ಹಾಣ, ವೀಣಾ ಕುಂಬಾರ್ ಹಾಗೂ ಬಿಜೆಪಿಯ ವಿವಿಧ ಮೋರ್ಚಾಗಳ ಪ್ರಮುಖರು ಇದ್ದರು.ಕಾರವಾರದಲ್ಲಿ ದೂರು ಸಲ್ಲಿಕೆ:
ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಬಿಜೆಪಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಬಿಜೆಪಿ ಯುವಮೋರ್ಚಾ ಕಾರವಾರ ಗ್ರಾಮೀಣ ಮಂಡಲದ ವತಿಯಿಂದ ಶುಕ್ರವಾರ ಕಾರವಾರ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.ಮಲ್ಲಿಕಾರ್ಜುನ ಖರ್ಗೆ ಅವರು ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಆರ್.ಎಸ್.ಎಸ್. ಮತ್ತು ಬಿಜೆಪಿ ವಿರುದ್ಧ ಬಾಯಿಗೆ ಬಂದಂತೆ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಮೂಲಕ ಕಾರ್ಯಕರ್ತರ ಭಾವನೆಗಳಿಗೆ ತೀವ್ರ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಯುವಮೋರ್ಚಾ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಹೇಳಿಕೆಗಳನ್ನು ಖಂಡಿಸಿ ಚಿತ್ತಾಕುಲಾ ಪೊಲೀಸ್ ಠಾಣೆಗೆ ತೆರಳಿದ ಯುವಮೋರ್ಚಾದ ಪದಾಧಿಕಾರಿಗಳ ನಿಯೋಗವು, ಠಾಣೆಯ ಪೊಲೀಸ್ ಉಪನಿರೀಕ್ಷಕರಿಗೆ ಲಿಖಿತ ದೂರು ನೀಡಿ, ಖರ್ಗೆ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.ದೂರು ನೀಡುವ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾ ಕಾರವಾರ ಗ್ರಾಮೀಣ ಮಂಡಲದ ಅಧ್ಯಕ್ಷ ಸುರೇಂದ್ರ ಎಂ. ಗಾಂವ್ಕರ್, ಕಾರ್ಯದರ್ಶಿ ಸುದೇಶ್ ತಳೇಕರ್, ಉಪಾಧ್ಯಕ್ಷರಾದ ಸುನೀಲ್ ನಾಯ್ಕ್ ಹಾಗೂ ಕಿಶನ್ ಪಡುವಳಕರ್ ಸೇರಿ ಹಲವರು ಇದ್ದರು.
ಯಲ್ಲಾಪುರದಲ್ಲಿ ಮನವಿ:ಮಲ್ಲಿಕಾರ್ಜುನ ಖರ್ಗೆ ಅವರು ಕೋಮು ಪ್ರಚೋದನೆ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಪೊಲೀಸ್ ಸ್ಟೇಷನ್‌ಗೆ ತೆರಳಿ ಎಫ್‌ಐಆರ್ ದಾಖಲಿಸಲು ಆಗ್ರಹಿಸಲಾಯಿತು. ಯುವ ಮೋರ್ಚಾ ಅಧ್ಯಕ್ಷ ರಜತ ಬದ್ದಿ, ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ಪಕ್ಷದ ಪದಾಧಿಕಾರಿಗಳಾದ ಜಿ.ಎನ್. ಗಾಂವ್ಕರ, ಸೋಮೇಶ್ವರ ನಾಯ್ಕ, ವಿನೋದ ತಳೇಕರ, ರವಿ ದೇವಡಿಗ, ವಿಠ್ಠು ಶೆಳ್ಕೆ, ಹಿರಿಯ ವಕೀಲರಾದ ಗಣೇಶ ಪಾಟಣಕರ, ಅರುಣ ಶೆಟ್ಟಿ, ರಾಜೇಶ ಭಟ್ಟ, ಸುಧೀರ ಆಚಾರಿ, ನಾಗಾರ್ಜುನ ಬದ್ದಿ, ಉದಯ ಮಂಡಗೋಡ್ಲಿ, ವಿಜು ಅಂಕೋಲೆಕರ ಉಪಸ್ಥಿತರಿದ್ದರು.