ಸಾರಾಂಶ
ಬಿಜೆಪಿ ಬಡವರ, ರೈತರ ಹಾಗೂ ದೀನದಲಿತರಿಗೆ ಸಾಮಾಜಿಕ ನ್ಯಾಯ ನೀಡಿದೆ. ನನ್ನ ಮೇಲೆ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯಿಟ್ಟು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುವವರಿಗೆ ಸದಾ ಪಕ್ಷದ ಹೃದಯದ ಬಾಗಿಲು ತೆರೆದಿದೆ ಎಂದು ಬಿಜೆಪಿ ಅಭ್ಯರ್ಥಿ ರಾಜೂಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಹುಣಸಗಿ
ಬಿಜೆಪಿ ಬಡವರ, ರೈತರ ಹಾಗೂ ದೀನದಲಿತರಿಗೆ ಸಾಮಾಜಿಕ ನ್ಯಾಯ ನೀಡಿದೆ. ನನ್ನ ಮೇಲೆ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯಿಟ್ಟು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುವವರಿಗೆ ಸದಾ ಪಕ್ಷದ ಹೃದಯದ ಬಾಗಿಲು ತೆರೆದಿದೆ ಎಂದು ಬಿಜೆಪಿ ಅಭ್ಯರ್ಥಿ ರಾಜೂಗೌಡ ಹೇಳಿದರು.ಪಟ್ಟಣದಲ್ಲಿ ನಡೆದ ಬಿಜೆಪಿ ಸೆರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಅಧಿಕಾರದಲ್ಲಿರುವ ಹುಣಸಗಿ ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಶ್ರಮಸಿದ್ದೇನೆ. ಈ ಬಾರಿ ಚುನಾವಣೆ ಕುತೂಹಲದಿಂದ ಕೂಡಿದ್ದು, ಕಾರ್ಯಕರ್ತರೆಲ್ಲರೂ ಒಗ್ಗೂಡಿ ಈಗಿನಿಂದಲೇ ಪಕ್ಷದ ಹಾಗೂ ನನ್ನ ಅಭಿವೃದ್ಧಿ ಕೆಲಸಗಳನ್ನು ಪ್ರತಿ ಮನೆ ಮನೆಗೆ ತಲುಪಿಸಿಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಈ ವಿಧಾನಸಭೆ ಉಪ ಚುನಾವಣೆಯಲ್ಲಿ ಆಶೀರ್ವದಿಸಿ ಶಾಸಕನನ್ನಾಗಿಸಿದರೆ ಮತಕ್ಷೇತ್ರವನ್ನು ಅಭಿವೃದ್ಧಿಪಡಿಸುವೆ. ಪಕ್ಷದ ಕಾರ್ಯಕರ್ತರು ನನ್ನ ಜೀವಾಳವಾಗಿದ್ದು, ನನ್ನ ಹಾಗೂ ಪಕ್ಷದ ಮೇಲೆ ವಿಶ್ವಾಸವನ್ನಿಟ್ಟು ಪಕ್ಷ ಸೇರಿದ ಪ್ರತಿಯೊಬ್ಬರಿಗೂ ಸದಾ ನಾನು ಚಿರರುಣಿಯಾಗಿರುವೆ ಎಂದು ಹೇಳಿದರು.ಈ ವೇಳೆ ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಬಿಜೆಪಿ ಮಂಡಲ ಅಧ್ಯಕ್ಷ ಸಂಗಣ್ಣ ಸಾಹು ವೈಲಿ, ಮುಖಂಡರಾದ ವಿರೇಶ ಸಾಹು ಚಿಂಚೋಳಿ, ತಿಪ್ಪಣ್ಣ ಸಾಹು ಚಂದಾ, ಸಿದ್ದಣ್ಣ ಸಾಹು ಅಂಕಲಕೋಟಿ, ಬಿ.ಎಲ್. ಹಿರೇಮಠ, ಅಮರಣ್ಣ ದೇಸಾಯಿ, ಗುರಲಿಂಗಪ್ಪ ಸಜ್ಜನ್, ಭೀಮನಗೌಡ ಕುಪ್ಪಿ, ರುದ್ರಪ್ಪ ಬೂದಿಹಾಳ, ಚಂದ್ರಶೇಖರ ದೇಸಾಯಿ, ರಾಜಶಂಕರ ದೇಸಾಯಿ, ರಾಜು ದೇಸಾಯಿ, ಕಿರಣ ದೇಸಾಯಿ, ನಾಗಪ್ಪ ಕಾರಗನೂರ, ಅಂಬ್ರಯ್ಯಸ್ವಾಮಿ ದೇಸಾಯಿಗುರು, ಶಿರುದ್ರ ದೇಸಾಯಿ ಸೇರಿದಂತೆ ಇತರರಿದ್ದರು.