ಶರಾವತಿ ಸಂತ್ರಸ್ತರಿಗೆ ವಿಷ ಹಾಕಿದ್ದೇ ಬಿಜೆಪಿ

| Published : May 09 2025, 12:33 AM IST

ಸಾರಾಂಶ

ಶಿವಮೊಗ್ಗ: ಅಧಿಕಾರದಲ್ಲಿದ್ದಾಗ ಶರಾವತಿ ಮುಳುಗಡೆ ಸಂತ್ರಸ್ತರಿಗೆ ವಿಷ ಹಾಕಿದ್ದೇ ಬಿಜೆಪಿಯವರು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.

ಶಿವಮೊಗ್ಗ: ಅಧಿಕಾರದಲ್ಲಿದ್ದಾಗ ಶರಾವತಿ ಮುಳುಗಡೆ ಸಂತ್ರಸ್ತರಿಗೆ ವಿಷ ಹಾಕಿದ್ದೇ ಬಿಜೆಪಿಯವರು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಸಂಸದ ರಾಘವೇಂದ್ರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಮಾಡಿದ್ದಾರೆ. ಮೇ 9ರಂದು ಮಧು ಬಂಗಾರಪ್ಪ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಅಧಿಕಾರಿಗಳ ಜೊತೆಗೆ ಸಭೆ ನಿಗದಿಯಾಗಿದೆ. ಅದು ಗೊತ್ತಾಗಿಯೇ ಬಿಜೆಪಿಯವರು ಸಭೆ ಮಾಡಿದ್ದಾರೆ ಎಂದು ದೂರಿದರು.ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಕೊಡದೇ ವಂಚಿಸಿರುವುದೇ ಬಿಜೆಪಿ. ಈಗ ನಮ್ಮ ಸರ್ಕಾರ ಒಂದು ಹಂತಕ್ಕೆ ಅದನ್ನು ತಂದಿದ್ದೇವೆ. ಸಿದ್ದರಾಮಯ್ಯ ಸರ್ಕಾರದ ನೇತೃತ್ವದಲ್ಲಿ ಹಕ್ಕುಪತ್ರ ಕೊಟ್ಟೇ ಕೊಡುತ್ತೇವೆ. ಆದರೆ ಇದೇ ಹಾಲಪ್ಪ, ಅಶೋಕ ನಾಯ್ಕ, ಆರಗ ಜ್ಞಾನೇಂದ್ರ ಎಲ್ಲಾ ಸೇರಿ ರೈತರಿಗೆ ಮೋಸ ಮಾಡಿದ್ದಾರೆ. ರಾಘವೇಂದ್ರ ಸಂಸತ್‌ನಲ್ಲಿ ಐದು ನಿಮಿಷ ಮಾತನಾಡಿದ್ದು, ಬಿಟ್ಟರೆ ಬೇರೆ ಏನೂ ಮಾಡಿಲ್ಲ ಎಂದು ಕಿಡಿಕಾರಿದರು.ನಮ್ಮ ಸರ್ಕಾರ 9000 ಜನರಿಗೆ ಹಕ್ಕುಪತ್ರ ನೀಡಲು ಸಿದ್ಧವಾಗಿದೆ. 9000 ರೈತರ ಸರ್ವೆ ಜೊತೆಗೆ ಉಳಿದವರ ಸರ್ವೆಯೂ ಬಹಳಷ್ಟಿದೆ. ಅವರಿಗೂ ಹಕ್ಕು ಪತ್ರ ಕೊಡುವಂತಾಗಬೇಕು. ಎಲ್ಲಾ ದೇಶ 10ಜಿ ಹೋಗಿದ್ದಾರೆ. ನಾವಿನ್ನೂ 3ಜಿ ಯಲ್ಲಿದ್ದೇವೆ. 21ನೇ ಶತಮಾನದಲ್ಲೂ ನಮ್ಮ ಸಾಗರ ತಾಲೂಕಿನಲ್ಲಿ ನೆಟ್‌ವರ್ಕ್ ಇಲ್ಲ. ನಾಲ್ಕು ಬಾರಿ ಸಂಸದರಾಗಿ ಏನು ಮಾಡುತ್ತಿದ್ದೀರಿ ಎಂದು ಸಂಸದ ಬಿ.ವೈ ರಾಘವೇಂದ್ರ ಅವರನ್ನು ಪ್ರಶ್ನಿಸಿದರು.

ಸಾಗರ ತಾಲೂಕಿನ ತುಮರಿ ಭಾಗದಲ್ಲಿ ನೆಟ್‌ವರ್ಕ್ ಇಲ್ದೆ ಜನ ಸಾಯುತ್ತಿದ್ದಾರೆ. ನಾಲ್ಕು ಬಾರಿ ಎಂಪಿಯಾಗಿ ರಾಘವೇಂದ್ರ ನೀವು ಏನ್ ಮಾಡ್ತಾ ಇದ್ದೀರಾ. ಇಷ್ಟು ಕೆಟ್ಟ ಪರಿಸ್ಥಿತಿಯಲ್ಲಿ ನಾವು ಇದ್ದೀವಿ. ಕೈ ಮುಗಿದು ಕೇಳ್ತೀವಿ ನೆಟ್‌ವರ್ಕ್ ಹಾಕಿ ಜನರಿಗೆ ಒಳ್ಳೆಯದು ಮಾಡಿ. ಯಾಕೆ ಆ ಭಾಗದ ಜನ ಏನ್ ಪಾಪ ಮಾಡಿದ್ದಾರೆ. ಇದು ತಲೆತಗ್ಗಿಸುವ ವಿಚಾರ ಕೂಡಲೇ ಸಂಸದರೇ ನೆಟ್ವರ್ಕ್ ಸರಿಪಡಿಸಿ ಎಂದು ಆಗ್ರಹಿಸಿದರು.ಸಾಗರ ಹಾಗೂ ಹೊಸನಗರದಲ್ಲಿ ರೈಲ್ವೆ ಇಲಾಖೆಯವರು ಅಂಡರ್ ಪಾಸ್ ಮಾಡಿದ್ದಾರೆ. ರಸ್ತೆ ಕೆಟ್ಟು ಕೆರ ಹಿಡಿದಿದೆ. ಮಳೆ ಬಂದರೆ ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ನಿಲ್ಲುತ್ತದೆ. ನಾವು ಕಾಮಗಾರಿ ಮಾಡಲು ಮುಂದಾದರೆ ರೈಲ್ವೆ ಇಲಾಖೆಯುವರು ಕಾಮಗಾರಿ ಮಾಡಲು ನಮಗೂ ಬಿಡುತ್ತಿಲ್ಲ. ಅವರು ಮಾಡುತ್ತಿಲ್ಲ. ಈ ಬಗ್ಗೆ ಸಂಸದರು ಗಮನ ಹರಿಸಬೇಕು ಎಂದರು.ಹೈವೆ ರಸ್ತೆ ಕಾಮಗಾರಿಯನ್ನು ಬೇಗ ಮುಗಿಸಿಲ್ಲ, ಕಳೆದ 12-13 ವರ್ಷಗಳಿಂದ ಹೈವೆ ರಸ್ತೆ ಕಾಮಗಾರಿ ನಡೆಯುತ್ತಿದೆ. ಎಂಪಿಯವರು ಅವರ ಕಾಲೇಜು ತನಕ ರಸ್ತೆ ಕಾಮಗಾರಿ ಮಾಡಿಸಿಕೊಂಡಿದ್ದಾರೆ. ಸಂಪೂರ್ಣಗೊಳ್ಳಲು ಎಷ್ಟು ವರ್ಷ ಕಾಯಬೇಕೋ ಗೊತ್ತಿಲ್ಲ, ಶೀಘ್ರದಲ್ಲೇ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯಿರಿ: ಬೇಳೂರು

ಶಿವಮೊಗ್ಗ: ಆಪರೇಷನ್ ಸಿಂದೂರಕ್ಕೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಿದೆ. ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯಿರಿ. ಈ ಸಲ ಪಾಕಿಸ್ತಾನದ ದರ್ಪ ಮುಕ್ತಾಯವಾಗಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಪಾಕಿಸ್ತಾನದ ಪ್ರಜೆಗಳನ್ನು ಇಲ್ಲಿಂದ ಹೊರದಬ್ಬಬೇಕು. ಕಾಂಗ್ರೆಸ್‌ನವರು ಪಾಕ್ ಪರ ಎಂದು ಬಿಜೆಪಿ ಬಿಂಬಿಸುತ್ತಿದೆ. ನಮ್ಮ ಇಂದಿರಾಗಾಂಧಿ ಇದ್ದಾಗಲೇ ಪಾಕ್‌ಗೆ ತಕ್ಕಪಾಠ ಕಲಿಸಿದ್ದಾರೆ. ಯುದ್ಧದಲ್ಲಿ ಮೋದಿಜಿಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲವಿದೆ. ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯಿರಿ. ಪಾಕಿಸ್ತಾನಕ್ಕೆ ಜೈ ಎಂದಿರುವ ನಟಿ ರಾಖಿಸಾವಂತರನ್ನು ಭಾರತಕ್ಕೆ ಬಾರದಂತೆ ನೋಡಿಕೊಳ್ಳಿ ಎಂದು ಹರಿಹಾಯ್ದರು.ಮೋದಿ ಅವರು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು. ಪಾಕಿಸ್ತಾನವನ್ನು ಬೆಂಬಲಿಸುವ ಕೆಟ್ಟ ಹುಳುಗಳು ದೇಶದಲ್ಲಿದ್ರೆ ಅವರಿಗೆ ಗುಂಡಿಕ್ಕಿ ಕೊಲ್ಲಬೇಕು. ಪಾಕಿಸ್ತಾನದವರಿಗೆ ಇಲ್ಲಿ ಜಾಗ ಇಲ್ಲ, ಇಂದಿರಾ ಗಾಂಧಿ ಪಾಕಿಸ್ತಾನವನ್ನು ಪುಡಿ ಪುಡಿ ಮಾಡಿದ್ರು, ಇಲ್ಲಿ ಯಾರನ್ನು ಉಳಿಸಿಕೊಳ್ಳಬಾರದು. ನಮ್ಮ ಬೆಂಬಲ ಸಂಪೂರ್ಣ ಸಹಕಾರ ಇದೆ. ಪಾಕಿಸ್ತಾನಕ್ಕೆ ಗುಂಡಿಕ್ಕಿ ಹೊಡೆದು ಪುಡಿ ಪುಡಿ ಮಾಡಿ, ನಿಮ್ಮನ್ನು ಯಾರು ತಡೆಯೊಲ್ಲ ಎಂದರು.ಪಾಕಿಸ್ತಾನದವರನ್ನು ರಾಜ್ಯದಿಂದ ಕಳಿಸಲು ಕಾಂಗ್ರೆಸ್ ಸರ್ಕಾರ ಮೀನಾಮೇಷ ಮಾಡುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಪಾಕಿಸ್ತಾನದವರೇನು ಸಿದ್ದರಾಮಯ್ಯ ಅವರ ಬೀಗರ, ಅವರನ್ನು ಇಲ್ಲಿ ಇಟ್ಟಿಕೊಳ್ಳೋಕೆ ಎಂದು ಹೇಳಿದರು.ನೀವು ಎಂಪಿ ಅಲ್ವಾ, ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿ ಕೂಡಲೇ ದೇಶದಲ್ಲಿರುವ ಪಾಕಿಸ್ತಾನದವರನ್ನು ಹೊರಹಾಕಿ, ಅದನ್ನ ಬಿಟ್ಟು ಹೇಳಿಕೆ ಕೊಡುವುದು ಸರಿಯಲ್ಲ. ನಿಮ್ಮ ಹೇಳಿಕೆಯನ್ನ ಖಂಡಿಸುತ್ತೇನೆ, ಎನ್‌ಐಎ ತಂಡ ಕರೆಸಿಕೊಂಡು ಹೊರಹಾಕಿ, ಪಾಕಿಸ್ತಾನದವರನೇ ನಮ್ಮ ಸಂಬಂಧಿಕರ, ಸೋದರ ಮಾವ ಅಲ್ಲ, ಚಟಕೋಸ್ಕರ ಕೊಟ್ಟ ಹೇಳಿಕೆ ಸರಿಯಲ್ಲ ಎಂದರು.ರಾಜ್ಯದಲ್ಲಿರುವವರನ್ನು ಹೊರಹಾಕಿ ಎಂದು ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡಿ. ಅದನ್ನು ಬಿಟ್ಟು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಜಕೀಯ ಮಾಡೋದು ಸರಿಯಲ್ಲ. ದ್ವೇಷದ ರಾಜಕಾರಣವನ್ನು ಬಿಜೆಪಿಯವರು ಕೈಬಿಡಬೇಕು. ಮಂಗಳೂರಿನಲ್ಲಿ ನಡೆದ ಕೊಲೆಗಳಿಂದ ಜನರಿಗೆ ತೊಂದರೆ ಆಗಿದೆ. ಕೊಲೆಮಾಡಿದವರನ್ನ ಅರೆಸ್ಟ್ ಮಾಡಿ ಒಳಗೆ ಹಾಕಬೇಕು. ಅದು ಬಿಟ್ಟು ರಾಜಕೀಯ ಮಾಡೋದು ಸರಿಯಲ್ಲ ಎಂದರು.