ಬಿಜೆಪಿಯಿಂದ ಪಂಜಿನ ಮೆರವಣಿಗೆ

| Published : Apr 05 2025, 12:50 AM IST

ಸಾರಾಂಶ

ತಿಲಕ ಚೌಕಿನಿಂದ ಅಂಬೇಡ್ಕರ್ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಿತು.

ಯಲ್ಲಾಪುರ: ತಾಲೂಕಿನ ಮದನೂರಿನಲ್ಲಿ ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆಗೆ ಆಗ್ರಹಿಸಿ ತಾಲೂಕು ಬಿಜೆಪಿ ಘಟಕವು ಗುರುವಾರ ರಾತ್ರಿ ಪಟ್ಟಣದ ತಿಲಕ ಚೌಕಿನಿಂದ ಅಂಬೇಡ್ಕರ್ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಿತು.

ಹೇಯ ಕೃತ್ಯವನ್ನು ಅಂಬೇಡ್ಕರ್ ವೃತ್ತದಲ್ಲಿ ಖಂಡಿಸಿ, ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಮದನೂರಿನ ಘಟನೆ ಹಿಂದೂ ಸಮಾಜಕ್ಕೆ ಹಾಕಿದ ಸವಾಲು. ಇದನ್ನು ಸಮಾಜ ಸಮರ್ಥವಾಗಿ ಎದುರಿಸಲು ಸಿದ್ಧವಾಗಿದೆ. ಯಲ್ಲಾಪುರದಲ್ಲಿ ಪೈಶಾಚಿಕ ಕೃತ್ಯ ನಡೆದಾಗ ದೂರು ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನಲ್ಲಿ ಭಯಾನಕ ವಾತಾವರಣ ನಿರ್ಮಾಣವಾಗಿದೆ. ರಾಜ್ಯದ ಉದ್ದಗಲಕ್ಕೂ ಮತಾಂಧರಿಗೆ ಬೆಂಬಲ ನೀಡುವ ಕಾಂಗ್ರೆಸ್ ಆಡಳಿತ, ಶಾಸಕರು, ಅಧಿಕಾರಶಾಹಿ ಇರುವುದೇ ಇದಕ್ಕೆ ಕಾರಣ. ಮೈಮರೆತರೆ ಘಟನೆ ಮರೆ ಮಾಚಿ ಹೋಗುತ್ತದೆ. ರಾಜ್ಯ ಸರ್ಕಾರ ಸೂಕ್ತವಾಗಿ ಸ್ಪಂದಿಸಬೇಕು ಎಂದರು.

ವೆಂಕಟರಮಣ ಬೆಳ್ಳಿ, ಎಸ್ಸಿ ಮೋರ್ಚಾ ಅಧ್ಯಕ್ಷೆ ಶ್ಯಾಮಿಲಿ ಪಾಟಣಕರ, ನಟರಾಜ ಗೌಡರ್, ಸೋಮೇಶ್ವರ ನಾಯ್ಕ, ಉಮೇಶ ಭಾಗ್ವತ್, ರಾಮು ನಾಯ್ಕ, ಶ್ಯಾಮಿಲಿ ಪಾಟಣಕರ್, ರಾಘವೇಂದ್ರ ಭಟ್ಟ, ನಾಗರಾಜ ಕವಡಿಕೆರೆ, ರಜತ ಬದ್ದಿ, ಕಲ್ಪನಾ ನಾಯ್ಕ, ಆದಿತ್ಯ ಗುಡಿಗಾರ, ಗೋಪಾಲಕೃಷ್ಣ ಗಾಂವ್ಕರ್, ರವಿ ದೇವಡಿಗ, ವಿನೋದ ತಳೇಕರ್, ವಿ.ಎನ್. ಭಟ್ಟ ಇದ್ದರು.

ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ರವಿ ಕೈಟ್ಕರ್ ನಿರ್ವಹಿಸಿದರು. ಮಹಿಳಾ ಮೋರ್ಚಾ ಅಧ್ಯಕ್ಷೆ ಶೃತಿ ಹೆಗಡೆ ವಂದಿಸಿದರು.

ಮದನೂರು ಅಪ್ರಾಪ್ತೆ ಮೇಲೆ ಆತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯಿಂದ ಪಂಜಿನ ಮೆರವಣಿಗೆ ನಡೆಯಿತು.