ತತ್ವ ಸಿದ್ಧಾಂತ ಹೊಂದಿರುವ ಪಕ್ಷ ಬಿಜೆಪಿ

| Published : Apr 07 2024, 01:52 AM IST

ಸಾರಾಂಶ

ಹೊಸಕೋಟೆ: ಬಿಜೆಪಿ ಪಕ್ಷ ಹಲ ಮಹನೀಯರ ತ್ಯಾಗದಿಂದ ಕಟ್ಟಲಾಗಿದ್ದು, ತನ್ನದೇ ಆದ ತತ್ವ ಸಿದ್ಧಾಂತ ಹೊಂದಿರುವ ಏಕೈಕ ಪಕ್ಷ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಲಚಂದ್ರ ತಿಳಿಸಿದರು.

ಹೊಸಕೋಟೆ: ಬಿಜೆಪಿ ಪಕ್ಷ ಹಲ ಮಹನೀಯರ ತ್ಯಾಗದಿಂದ ಕಟ್ಟಲಾಗಿದ್ದು, ತನ್ನದೇ ಆದ ತತ್ವ ಸಿದ್ಧಾಂತ ಹೊಂದಿರುವ ಏಕೈಕ ಪಕ್ಷ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಲಚಂದ್ರ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಬಿಜೆಪಿ ಬಾವುಟ ಹಾರಿಸಿ ಮಾತನಾಡಿದ ಅವರು, ದೇಶಭಕ್ತರನ್ನೆ ಒಳಗೊಂಡ ಹೊಸ ರಾಜಕೀಯ ಪಕ್ಷ ಜನ ಸಂಘದ ಮೂಲಕ ಬಿಜೆಪಿ ಪಕ್ಷ ಉದಯವಾಗಿ ಕೋಟ್ಯಂತರ ಸ್ವಯಂಸೇವಕರು, ದೇಶಭಕ್ತರು ಪಕ್ಷದಲ್ಲಿ ಕೆಲಸ ಮಾಡುವ ಮೂಲಕ ಬಿಜೆಪಿ ಪಕ್ಷದ ಮೂಲಕ ದೇಶ ಕಟ್ಟುವ ಕಾರ್ಯ ಮಾಡುತ್ತಿದ್ದಾರೆ. ಡಾ.ಶ್ಯಾಮ್ ಪ್ರಕಾಶ್ ಮುಖರ್ಜಿ ಹಾಗೂ ದೀನ ದಯಾಳ್ ಉಪಾಧ್ಯಯ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಪಕ್ಷ ಸಾಕಷ್ಟು ಗಟ್ಟಿಯಾಗಿ ನೆಲೆಯೂರಿದ್ದು ದೇಶ ರಕ್ಷಣೆಯ ದೊಡ್ಡ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿರುವುದು ಪಕ್ಷದ ಹೆಗ್ಗಳಿಕೆಯಾಗಿದೆ ಎಂಧರು.

ಬಿಜೆಪಿ ಓಬಿಸಿ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ತ.ರಾ.ವೆಂಕಟೇಶ್ ಮಾತನಾಡಿ, ದೇಶ ಸಂಕಷ್ಟದಲ್ಲಿದ್ದ ಸಂಧರ್ಭದಲ್ಲಿ ದೇಶ ಭಕ್ತಿಯ ಕಿಚ್ಚನ್ನು ಜನರಲ್ಲಿ ಮೂಡಿಸಲು ಉದಯವಾಗಿದ್ದೆ ಬಿಜೆಪಿ ಪಕ್ಷ. ಈಗ ದೇಶದಲ್ಲಿ ಬಿಜೆಪಿ ಪಕ್ಷ ಅತಿ ದೊಡ್ಡ ಪಕ್ಷವಾಗಿದೆ. ಕೋಟ್ಯಂತರ ಕಾರ್ಯರ್ತರ ಆಶಯಗಳನ್ನು ಈಡೇರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಯಶಸ್ವಿಯಾಗಿದ್ದು ಪಕ್ಷ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಾಕ್ಷಿಯಾಗಿದೆ. ಆದ್ದರಿಂದ ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷವನ್ನು ಮತ್ತಷ್ಟು ಬೆಳೆಸಲು ಶಕ್ತಿ ಮೀರಿ ಕೆಲಸ ಮಾಡಬೇಕು ಎಂದರು.

ಬಿಜೆಪಿ ತಾಲೂಕು ಕಾರ್ಯದರ್ಶಿ ಮುನಿನಂಜಪ್ಪ, ಬಿಜೆಪಿ ಮುಖಂಡ ಗಿಡ್ಡಪ್ಪನಹಳ್ಳಿ ರಾಮಮೂರ್ತಿ ಇದ್ದರು.ಫೋಟೋ: 6 ಹೆಚ್‌ಎಸ್‌ಕೆ 2

ಹೊಸಕೋಟೆ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಬಾಲಚಂದ್ರ, ಒಬಿಸಿ ಮಾಜಿ ಜಿಲ್ಲಾಧ್ಯಕ್ಷ ತ.ರಾ.ವೆಂಕಟೇಶ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.