ಮಹಿಳೆಯರ ಸಬಲೀಕರಣಕ್ಕೆ ಬಿಜೆಪಿ ಬದ್ಧ: ಬಾಲಚಂದ್ರ ಜಾರಕಿಹೊಳಿ

| Published : Sep 09 2024, 01:35 AM IST

ಮಹಿಳೆಯರ ಸಬಲೀಕರಣಕ್ಕೆ ಬಿಜೆಪಿ ಬದ್ಧ: ಬಾಲಚಂದ್ರ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರು ಆರ್ಥಿಕವಾಗಿ ಮುಂದೆ ಬರಬೇಕಾದರೆ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಮಹಿಳೆಯರು ಆರ್ಥಿಕವಾಗಿ ಮುಂದೆ ಬರಬೇಕಾದರೆ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ತಾಲೂಕಿನ ಹುಣಶ್ಯಾಳ ಪಿವೈ ಗ್ರಾಮದಲ್ಲಿ ಗ್ರಾಪಂ ಸಹಯೋಗದಲ್ಲಿ ನೂತನವಾಗಿ ನಿರ್ಮಿಸಿದ ಎನ್‌ಆರ್‌ಎಂ ಒಕ್ಕೂಟದ ಕೊಠಡಿ ಮತ್ತು ಬಲಭೀಮ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿದ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರ ಕಲ್ಯಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವಾರು ಕಲ್ಯಾಣ ಕಾರ್ಯಕ್ರಮ ಜತೆಗೆ ರಾಜಕೀಯದಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸಲು ಮಸೂದೆ ಅಂಗೀಕರಿಸಿದೆ. ಇದು ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಯೊಳಗೆ ಮಹಿಳೆಯರಿಗೆ ಜಾಕ್ ಪಾಟ್ ಹೊಡೆಯಲಿದ್ದು, ವಿಧಾನಸಭೆ ಚುನಾವಣೆಯಲ್ಲಿ 74, ಲೋಕಸಭೆಯಲ್ಲಿ 180 ಜನ ಮಹಿಳೆಯರು ಶಾಸಕರು, ಸಂಸದರಾಗುವ ಯೋಗ ಬರಲಿದೆ. ಮಹಿಳೆಯರ ಕಲ್ಯಾಣ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲದ ರೂಪದಲ್ಲಿ ಪ್ರೋತ್ಸಾಹಧನವನ್ನು ನೀಡುತ್ತಿದ್ದು, ಇದನ್ನು ಪಡೆದುಕೊಂಡು ತಮ್ಮ ಆರ್ಥಿಕಮಟ್ಟ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಎನ್‌ಆರ್‌ಎಲ್‌ಎಂ ಯೋಜನೆಯಡಿ ಹುಣಶ್ಯಾಳ ಪಿವೈ ಗ್ರಾಮದ ಜಡಿ ಸಿದ್ಧೇಶ್ವರ ಮತ್ತು ಮಹಾಲಕ್ಷ್ಮೀ ಸ್ವ-ಸಹಾಯ ಸಂಘ ಮತ್ತು ಹೊಸಟ್ಟಿಗ್ರಾಮದ ಸರಸ್ವತಿ, ಮಹಾಲಕ್ಷ್ಮೀ, ಗಂಗಾಮಾತಾ ಮತ್ತು ಭುವನೇಶ್ವರಿ ಸ್ವ-ಸಹಾಯ ಸಂಘಗಳಿಗೆ ₹1.50 ಲಕ್ಷ ಸೇರಿದಂತೆ ಒಟ್ಟು ₹6 ಲಕ್ಷ ಮೊತ್ತದ ಪ್ರೋತ್ಸಾಹ ಧನದ ಚೆಕ್‌ ವಿತರಿಸಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ನಿಧಿ ಮತ್ತು ಮುಜರಾಯಿ ಇಲಾಖೆ ಅನುದಾನದಡಿ ₹15 ಲಕ್ಷ ವೆಚ್ಚದ ಸಮುದಾಯ ಭವನ ಮತ್ತು ಗ್ರಾಪಂಸಹಯೋಗದಲ್ಲಿ ₹16 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸಂಜೀವಿನಿ ಮಹಿಳಾ ಒಕ್ಕೂಟದ ನೂತನ ಕಟ್ಟಡವನ್ನು ಉದ್ಘಾಟಿಸಿದರು.

ಗ್ರಾಪಂ ಅಧ್ಯಕ್ಷ ಜಗದೀಶ ಡೊಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಪಿಕೆಪಿಎಸ್ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ತಾಪಂ ಇಒ ಫಕೀರಪ್ಪ ಚಿನ್ನನವರ, ಗ್ರಾಪಂ ಉಪಾಧ್ಯಕ್ಷೆ ಕಾಳವ್ವ ಗೌಡನ್ನವರ, ಪ್ರಮುಖರಾದ ಗೋಪಾಲ ಬಿಳ್ಳೂರ, ರವಿ ದೇಶಪಾಂಡೆ, ವೆಂಕನಗೌಡ ಪಾಟೀಲ, ಗೋವಿಂದಪ್ಪ ಗಿರಡ್ಡಿ, ಮುತ್ತೆಪ್ಪ ನಿಡಗುಂದಿ, ಪ್ರಕಾಶ ಪಾಟೀಲ, ಹನಮಂತ ಬಿಳ್ಳೂರ, ಪರಪ್ಪ ಕುಂಬಾರ, ಜಂಬು ಚಿಕ್ಕೋಡಿ, ಪಾಯಪ್ಪ ಉಪ್ಪಿನ, ತಿಮ್ಮಣ್ಣ ದೊಡ್ಡುಗೋಳ, ಭದ್ರಯ್ಯ ಜಕಾತಿಮಠ, ಸಿದ್ರಾಮ ಉಪಾಸಿ, ಮಾರುತಿ ಮೇತ್ರಿ, ಪಿಡಿಒ ಉದಯ ಬೆಳ್ಳುಂಡಗಿ, ಸಂಜೀವಿನಿ ಒಕ್ಕೂಟದ ವಲಯ ಮೇಲ್ವಿಚಾರಕ ಅಶೋಕ ಪೂಜೇರಿ, ಮಹಿಳಾ ಸ್ವ- ಸಹಾಯ ಸಂಘಗಳ ಪ್ರಮುಖರಾದ ರೇಣುಕಾ ಅಂಬಿ, ಸುವರ್ಣಾ ಕುಂಬಾರ, ಪಾರ್ವತಿ ಕುರಿ, ರುಕ್ಮವ್ವ ಹೊಸಮನಿ, ರೂಪಾ ಪಾಟೀಲ, ಪಾರ್ವತಿ ವಾಗ್ಮುಡೆ, ಗ್ರಾಪಂ ಸದಸ್ಯರು ಇದ್ದರು.