ಮತದಾರರಿಗೆ ಸುಳ್ಳು ಬರವಸೆ ನೀಡುತ್ತಿರುವ ಬಿಜೆಪಿ

| Published : Jun 02 2024, 01:45 AM IST

ಮತದಾರರಿಗೆ ಸುಳ್ಳು ಬರವಸೆ ನೀಡುತ್ತಿರುವ ಬಿಜೆಪಿ
Share this Article
  • FB
  • TW
  • Linkdin
  • Email

ಸಾರಾಂಶ

ಸುರಪುರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ವಿಧಾನ ಪರಿಷತ್ ಈಶಾನ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪರ ಪ್ರಚಾರ ಸಭೆ ಜರುಗಿತು.

ಕನ್ನಡಪ್ರಭ ವಾರ್ತೆ ಸುರಪುರ

ಬಿಜೆಪಿಯವರು ಮತದಾರರಿಗೆ ಸುಳ್ಳು ಬರವಸೆ ನೀಡುವ ಮೂಲಕ ಸಮಯ ಕಳೆದಿದ್ದಾರೆ ಎಂದು ಕಾಂಗ್ರಸ್‌ ಮುಖಂಡ ರಾಜಾ ವೇಣುಗೋಪಾಲ ನಾಯಕ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ವಿಧಾನ ಪರಿಷತ್ ಈಶಾನ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಬಸವರಾಜ ಪಾಟೀಲ್ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ಬಡವರ ಏಳಿಗೆಗೆ ಒತ್ತು ನೀಡುವಲ್ಲಿ ಸ್ಪಂದಿಸುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ವಿಧಾನ ಪರಿಷತ್ ಈಶಾನ್ಯ ಪದವೀಧರರ ಕ್ಷೇತ್ರ ಅಭ್ಯರ್ಥಿಗೆ ಮತ ನೀಡಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಠ್ಠಲ.ವಿ.ಯಾದವ, ಶಾಂತಗೌಡ, ರಾಜಾ ಸುಶಾಂತ ನಾಯಕ, ಕೆಪಿಸಿಸಿ ಸದಸ್ಯರಾದ ಸಿದ್ದಣ್ಣ ಮಲಗಲದಿನ್ನಿ, ಗುಂಡಪ್ಪ ಸೊಲ್ಲಾಪುರ, ನಿಂಗರಾಜ ಬಾಚಿಮಟ್ಟಿ, ಪ್ರಕಾಶ ಗುತ್ತೇದಾರ, ಮಲ್ಲಣ್ಣ ಸಾಹು ಮುಧೋಳ, ಚನ್ನಯ್ಯ ಸ್ವಾಮಿ ಹಿರೇಮಠ, ಭೀಮರಾಯ ಮೂಲಿಮನಿ, ಬಾಪುಗೌಡ ಪಾಟೀಲ್, ಆರ್.ಎಂ.ರೇವಡಿ, ಅಬ್ದುಲ್ ಗಫರ್ ನಗನೂರಿ, ಅಬ್ದುಲ್ ಆಲೀಂ ಗೋಗಿ, ವೆಂಕಟೇಶ ಹೊಸಮನಿ, ಆದಪ್ಪ ಹೊಸಮನಿ ಸೇರಿ ಹಲವರಿದ್ದರು.