ಜಿಂಕೆ ಹೆಸರಲ್ಲಿ ನನ್ನ ಪ್ರತಿಷ್ಠೆಗೆ ಧಕ್ಕೆ ತರಲು ಬಿಜೆಪಿ ಯತ್ನ

| Published : May 04 2024, 01:33 AM IST

ಜಿಂಕೆ ಹೆಸರಲ್ಲಿ ನನ್ನ ಪ್ರತಿಷ್ಠೆಗೆ ಧಕ್ಕೆ ತರಲು ಬಿಜೆಪಿ ಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ಜಿಂಕೆ ಸಾಕಿದ್ದಾರೆ, ಅದು ಮಾಡಿದ್ದಾರೆ, ಇದು ಮಾಡಿದ್ದಾರೆಂದೆಲ್ಲಾ ನನ್ನನ್ನೇ ಗುರಿಯಾಗಿಸಿಕೊಂಡು ಪ್ರತಿಷ್ಠೆಗೆ ಧಕ್ಕೆ ತರಲು ಬಿಜೆಪಿ ಅಪಪ್ರಚಾರ ಮಾಡಿದ್ದರು. ಅಂಥವರಿಗೆ ನ್ಯಾಯಾಲಯದಲ್ಲೇ ಉತ್ತರ ಸಿಕ್ಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದ್ದಾರೆ.

- ನಂಗೆ ಡ್ಯಾಮೇಜ್‌ ಮಾಡಲು ಬಂದ ಬಿಜೆಪಿಯವ್ರೇ ಡ್ಯಾಮೇಜಾದ್ರು-ಎಸ್ಸೆಸ್ ಮಲ್ಲಿಕಾರ್ಜುನ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಜಿಂಕೆ ಸಾಕಿದ್ದಾರೆ, ಅದು ಮಾಡಿದ್ದಾರೆ, ಇದು ಮಾಡಿದ್ದಾರೆಂದೆಲ್ಲಾ ನನ್ನನ್ನೇ ಗುರಿಯಾಗಿಸಿಕೊಂಡು ಪ್ರತಿಷ್ಠೆಗೆ ಧಕ್ಕೆ ತರಲು ಬಿಜೆಪಿ ಅಪಪ್ರಚಾರ ಮಾಡಿದ್ದರು. ಅಂಥವರಿಗೆ ನ್ಯಾಯಾಲಯದಲ್ಲೇ ಉತ್ತರ ಸಿಕ್ಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಜಿಲ್ಲಾ ವಕೀಲರ ಸಂಘದ ಭವನದಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಪರ ಮತಯಾಚಿಸಿ, ಎದುರಾಳಿಗಳಿಗೆ ಮಾತಿನ ಚಾಟಿ ಬೀಸಿದರು. ಜಿಂಕೆ ಸಾಕಣೆ ಹೆಸರಲ್ಲಿ ನನ್ನ ಪ್ರತಿಷ್ಟೆಗೆ ಡ್ಯಾಮೇಜ್ ಮಾಡಲು ಬಂದ ಬಿಜೆಪಿಯವರೇ ಡ್ಯಾಮೇಜ್ ಆದರು ಎಂದರು.

ಕೋವಿಡ್ ಲಸಿಕೆ ವಿತರಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಎಸಗಿದ್ದು ಬಿಜೆಪಿಯವರು. ಇದಕ್ಕೆ ಚಿಕ್ಕಬುಳ್ಳಾಪುರದ ಮಾಜಿ ಸಚಿವ ಸುಧಾಕರ್ ಸುಳ್ಳು ಬಿಲ್‌ಗಳೇ ಸಾಕ್ಷಿ. ದಾವಣಗೆರೆ ಜಿಲ್ಲೆಯಲ್ಲೂ ಕೋವಿಡ್ ಲಸಿಕೀಕರಣದಲ್ಲಿ ಬಡರೋಗಿಗಳು, ಕಷ್ಟದಲ್ಲಿ ಇರುವವರನ್ನು ನೋಡದೇ, ಬಿಜೆಪಿಯವರು ರಾಜಕಾರಣ ಮಾಡಿದರು. ಅದನ್ನೆಲ್ಲಾ ಬಿಟ್ಟು, ಜಿಲ್ಲೆಯ ಅಭಿವೃದ್ಧಿ ಕಡೆ ಗಮನಹರಿಸಿ ಎಂದು ಸಲಹೆ ನೀಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನರಿಗೂ ವಕೀಲರು ಮತ ನೀಡಿ, ಸಂಸದರಾಗಿ ಆಯ್ಕೆ ಮಾಡಿ, ಲೋಕಸಭೆಗೆ ಕಳಿಸಬೇಕು ಎಂದು ಮನವಿ ಮಾಡಿದರು.

ಸಂಘದ ಅಧ್ಯಕ್ಷ ಎಲ್.ಎಚ್.ಅರುಣಕುಮಾರ, ಹಿರಿಯ ವಕೀಲರಾದ ಅನೀಸ್ ಪಾಷ, ರಾಮಚಂದ್ರ ಕಲಾಲ್‌, ಆವರಗೆರೆ ಪರಮೇಶ, ಬಿ.ಎಂ. ಹನುಮಂತಪ್ಪ, ಲೋಕಿಕೆರೆ ಪ್ರದೀಪ, ರಂಗಸ್ವಾಮಿ, ಭಾಗ್ಯಲಕ್ಷ್ಮಿ, ಲಕ್ಕಪ್ಪ, ರಜ್ವಿಖಾನ್, ಜಗದೀಶ, ಶಿವಾನಂದಪ್ಪ, ಬಸವರಾಜ, ವಿ.ಗೋಪಾಲ, ನಜೀರ್, ಶ್ಯಾಮ್‌, ಅಬ್ದುಲ್ ಖಾದರ್, ಎ.ಎಂ.ಹೆಗಡೆ, ಗುರುಬಸವರಾಜ ಇತರರು ಇದ್ದರು.

- - - ಬಾಕ್ಸ್‌ ಕೋಟ್‌ ಬೆಂಗಳೂರು ಹೈಕೋರ್ಟ್, ಬಳ್ಳಾರಿಯ ಜಿಲ್ಲಾ ನ್ಯಾಯಾಲಯ ಮಾದರಿಯಲ್ಲಿ ದಾವಣಗೆರೆಯಲ್ಲೂ ನ್ಯಾಯಾಲಯ ಸಂಕೀರ್ಣ ನಿರ್ಮಿಸುವ ಕನಸನ್ನು ಬಿಜೆಪಿಯವರು ಹಾಳು ಮಾಡಿದರು. ಮುಂದಿನ ದಿನಗಳಲ್ಲಿ ಕೆಎಚ್‌ಬಿ ಕಾಲನಿಯಲ್ಲಿ ಕೋರ್ಟನ್ನು ಉತ್ತಮವಾಗಿ ಅಭಿವೃದ್ಧಿಪಡಿಸಲಾಗುವುದು. ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು

- ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ

- - - -3ಕೆಡಿವಿಜಿ14, 15, 16:

ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನರಿಗೆ ವಕೀಲರ ಬೆಂಬಲ ವ್ಯಕ್ತಪಡಿಸುವ ಸಭೆಯಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮತಯಾಚಿಸಿದರು.