ನರಸಿಂಹರಾಜಪುರಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಧರ್ಮ, ಧರ್ಮಗಳ ನಡುವೆ, ಜಾತಿ, ಜಾತಿಗಳ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಕ್ಷೇತ್ರ ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಕಾರಗದ್ದೆ ಆರೋಪಿಸಿದರು.

- ಕಾಂಗ್ರೆಸ್ ಕಚೇರಿಯ ಯುವ ಸಮ್ಮಿಲನದಲ್ಲಿ ಕಾರ್ತೀಕ್ ಕಾರ್ಗದ್ದೆ ಆರೋಪ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಧರ್ಮ, ಧರ್ಮಗಳ ನಡುವೆ, ಜಾತಿ, ಜಾತಿಗಳ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಕ್ಷೇತ್ರ ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಕಾರಗದ್ದೆ ಆರೋಪಿಸಿದರು.ಭಾನುವಾರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಯುವ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜೆಪಿಯವರು ಅಧಿಕಾರಕ್ಕಾಗಿ ತಮ್ಮ ಆಸ್ತಿಗಳನ್ನು ವೃದ್ಧಿಸಿ ಕೊಳ್ಳುವುದಕ್ಕಾಗಿ ಯುವ ಮನಸ್ಸಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಜಾತಿ, ಜಾತಿಗಳ ನಡುವೆ ಪ್ರೀತಿ ಸೇತುವೆ ನಿರ್ಮಿಸುವ ಬದಲು ಕಂದಕ ಸೃಷ್ಠಿಸುತ್ತಿದ್ದಾರೆ. ದೇಶಕ್ಕೆ ಜಾತಿ, ಮತ ಬೇದವಿಲ್ಲದೆ ಅಹಿಂಸಾ ಮಾರ್ಗದ ಮೂಲಕ ಸ್ವಾಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿ ಅವರ ಬಗ್ಗೆ ಯುವಕರಲ್ಲಿ ದ್ವೇಷಿಸುವ ಮನಸ್ಥಿತಿ ಬೆಳೆಸಲಾಗುತ್ತಿದೆ. ಇದನ್ನು ಯುವಜನಾಂಗ ಅರಿತುಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಪ್ರಸಿದ್ಧ ಆರ್ಥಿಕ ತಜ್ಞರೆಂದು ವಿಶ್ವವೇ ಪೂಜಿಸುವ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಹಿಯಾಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

70 ವರ್ಷಗಳ ಕಾಲ ಭಾರತದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್ ಸರ್ಕಾರ ಕಟ್ಟಿರುವ ಹಲವಾರು ಅಣೆಕಟ್ಟುಗಳು, ಶಿಕ್ಷಣ ಸಂಸ್ಥೆಗಳನ್ನು ಬಗ್ಗೆ ಗೇಲಿ ಮಾಡುತ್ತಿರುವ ಪ್ರಧಾನಿಯನ್ನು ಯುವ ಸಮೂಹ ಪ್ರಶ್ನಿಸಬೇಕು. ಚಿನ್ನದ ಬೆಲೆ ಏರಿಕೆ ಯಾಗುತ್ತಿರುವ ಬಗ್ಗೆ ರೂಪಾಯಿ ಮೌಲ್ಯ, ಅಭಿವೃದ್ಧಿ ಕುಸಿತವಾಗುತ್ತಿರುವ ಬಗ್ಗೆ ಪ್ರಶ್ನಿಸಬೇಕು. ಅಭಿವೃದ್ಧಿ ಆಧಾರಿತ ರಾಜ ಕಾರಣ ಮಾಡದೆ ಧರ್ಮಾಧಾರಿತ ರಾಜಕಾರಣ ಮಾಡುವ ಮೂಲಕ ಯುವ ಮನಸ್ಸುಗಳನ್ನು ಒಡೆಯುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದರು.ಕೆಡಿಪಿ ಸದಸ್ಯ ಅಧ್ಯಕ್ಷ ಕೆ.ವಿ. ಸಾಜು ಮಾತನಾಡಿ, ಯುವಕರು ಕಾಂಗ್ರೆಸ್ ನ ತತ್ವ ಸಿದ್ಧಾಂತಗಳನ್ನು ಅರಿತು ದೇಶಕಟ್ಟಲು ಕೈಜೋಡಿಸಬೇಕು ಎಂದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜುಬೇದಾ ಮಾತನಾಡಿ, ಬಿಜೆಪಿ ಸಮಾಜದಲ್ಲಿ ಜಾತಿ, ಜಾತಿಗಳ ನಡುವೆ ಕಿತ್ತಾಡಿಸುವ ಕೆಲಸ ಮಾಡುತ್ತಿದೆ. ಯುವಕರಿಂದ ಮಾತ್ರ ಸಮೃದ್ಧಿ ದೇಶ ಕಟ್ಟಲು ಸಾಧ್ಯವಾಗುತ್ತದೆ ಎಂದರು.

ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಮಾತನಾಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಹೆಸರು ಬದಲಿಸಿ ಮಹಾತ್ಮಗಾಂಧೀಜಿಗೆ ಅವಮಾನ ಮಾಡುವ ಕೆಲಸ ಮಾಡುತ್ತಿದ್ದು ಇದರ ವಿರುದ್ಧ ಯುವಕರು ಧ್ವನಿ ಎತ್ತಬೇಕು. ಧರ್ಮಾತೀತವಾಗಿ ದೇಶ ಕಟ್ಟುವ ಕೆಲಸ ಮಾಡಬೇಕು ಎಂದರು.ಪಟ್ಟಣ ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಮಾತನಾಡಿದರು. ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶ್ರೀಜಿತ್ ಗೌಡ ದಂಡಿನಮಕ್ಕಿ, ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರತನ್ ಗೌಡ ಅರಗಿ, ಕೊಪ್ಪ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜೇಶ್ ಬೀಳುವ, ಮೊಹಮ್ಮದ್ ತಯೀಬ್, ಅಕ್ಸಿರ, ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ವಿ.ಉಪೇಂದ್ರ, ತಾಲೂಕು ಕಾಂಗ್ರೆಸ್ ಘಟಕ ಉಪಾಧ್ಯಕ್ಷ ಬೆನ್ನಿ ಇದ್ದರು.