ಕಾಂಗ್ರೆಸ್ ಸರ್ಕಾರದ ಹೆಸರು ಕೆಡಿಸಲು ಬಿಜೆಪಿ-ಜೆಡಿಎಸ್‌ ಹುನ್ನಾರ

| Published : Oct 05 2024, 01:34 AM IST

ಕಾಂಗ್ರೆಸ್ ಸರ್ಕಾರದ ಹೆಸರು ಕೆಡಿಸಲು ಬಿಜೆಪಿ-ಜೆಡಿಎಸ್‌ ಹುನ್ನಾರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ತಾಕತ್ತು ಇಲ್ಲ, 136 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಸರ್ಕಾರದ ಹೆಸರು ಕೆಡಿಸಲು ಹುನ್ನಾರ ಮಾಡುತಿದ್ದಾರೆ ಎಂದು ಕೆಪಿಸಿಸಿ ರಾಜ್ಯ ಸಂಯೋಜಕ ಸದುಗೌಡ ಪಾಟೀಲ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ತಾಕತ್ತು ಇಲ್ಲ, 136 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಸರ್ಕಾರದ ಹೆಸರು ಕೆಡಿಸಲು ಹುನ್ನಾರ ಮಾಡುತಿದ್ದಾರೆ ಎಂದು ಕೆಪಿಸಿಸಿ ರಾಜ್ಯ ಸಂಯೋಜಕ ಸದುಗೌಡ ಪಾಟೀಲ ಕಿಡಿಕಾರಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲ ಮಾಡಲು ಸಾಧ್ಯವಾಗಿರಲಿಲ್ಲ. ಕೋಟಿ ಕೋಟಿ ಕೊಟ್ಟು ಶಾಸಕರನ್ನು ಖರೀದಿಸುವ ಪ್ರಯತ್ನ ಮಾಡಿ ಸೋತು ಸುಣ್ಣವಾಗಿದ್ದಾರೆ. ಅವರ ಪ್ರಯತ್ನ ವಿಫಲವಾದ ಕಾರಣ ರಾಜ್ಯಪಾಲರನ್ನು ಕಪಿಮುಷ್ಠಿಯಲ್ಲಿಟ್ಟುಕೊಂಡು ರಾಜ್ಯ ಭವನವನ್ನು ಪಕ್ಷದ ಕಾರ್ಯಾಲಯದಂತೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡುತ್ತಾರೆ ಎಂದರು. ಪವಿತ್ರ ರಾಜ್ಯ ಭವನ ಇಂದು ಅಪವಿತ್ರವಾಗುತ್ತಿದೆ. ಪ್ರಜಾಪ್ರಭುತ್ವ ಕಗ್ಗೋಲೆಯಾಗುತ್ತಿದೆ. ಬಿಜೆಪಿಯವರ ಕೈಗೊಂಬೆಯಾಗಿಟ್ಟುಕೊಂಡಿರುವ ರಾಜ್ಯಪಾಲರು ಇದ್ದರೇ, ನಮ್ಮ ಹತ್ತಿರ ಅಂಬೇಡ್ಕರ್‌ವರ ಪವಿತ್ರ ಸಂವಿಧಾನವಿದೆ. ಸಿಎಂ ಸಿದ್ದರಾಮಯ್ಯನವರು ತಪ್ಪು ಮಾಡಿಲ್ಲ ಎಂದರು.172 ರಡಿ ತನಿಖೆ ಮಾಡಲು ಆದೇಶ ನೀಡಿದ ಮಾತ್ರಕ್ಕೆ ತಪ್ಪು ಮಾಡಿದ್ದಾರೆಂದಲ್ಲ ಕಾನೂನಿನ ಸಮರದಲ್ಲಿ ಮುಂದಿನ ದಿನಗಳಲ್ಲಿ ಖಂಡಿತಾ ನಮಗೆ ಜಯ ಸಿಗಲಿದೆ. ಸತ್ಯ ಯಾವತಿದ್ರು ಹೊರ ಬರಲೇ ಬೇಕಲ್ಲವೆ? ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ. ಕೇಂದ್ರ ಸಚಿವ ಕುಮಾರಸ್ವಾಮಿ ಮೇಲೆ ಎಫ್.ಐ.ಆರ್ ಆಗಿದ್ದು, ಅವರು ಜಾಮೀನಿನ ಮೇಲೆ ಇದ್ದಾರೆ. ಅವರು ರಾಜೀನಾಮೆ ಕೊಟ್ಟಿದ್ದಾರೆಯೇ? ಇದು ಅವರಿಗೆ ಅನ್ವಯವಾಗುವುದಿಲ್ಲವೇ? ತನಿಖೆ ಹಂತದಲ್ಲಿಯೇ ರಾಜೀನಾಮೆ ಕೊಡಬೇಕೆನ್ನುವ ಬಿಜೆಪಿ ವಾದಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ ಏನೆಂದು ಕೇಳಿನೊಡಿ. ಅವರನ್ನ ಮೊದಲು ರಾಜೀನಾಮೆ ಕೊಡಿಸಿ ನೈತಿಕತೆಯನ್ನು ಉಳಿಸಿಕೊಳ್ಳಿ. ಸಿದ್ದರಾಮಯ್ಯನವರು ನಮ್ಮ ಸರ್ಕಾರ ಯಾವುದೇ ತನಿಖೆಗೆ ಹಿಂಜರಿಯುವ ಮಾತೇ ಇಲ್ಲಾ. ಕರ್ನಾಟಕದ ಜನರ ಆಶೀರ್ವಾದ ಸಿದ್ದರಾಮಯ್ಯನವರ ಮೇಲಿದೆ ಜತೆಗೆ ಕಾರ್ಯಕರ್ತರ ಪಡೆ ಮುಂದಿನ ಕಾನೂನಿನ ಹೋರಾಟಕ್ಕೆ ಸಿದ್ಧವಾಗಿದೆ ಎಂದರು.