ಬಿಜೆಪಿ -ಜೆಡಿಎಸ್‌ ಒಟ್ಟಾಗಿ ಬಿವೈಆರ್ ಗೆಲ್ಲಿಸುವೆವು: ಕ್ಷೇತ್ರ ಉಸ್ತುವಾರಿ ರಘುಪತಿ ಭಟ್

| Published : Apr 02 2024, 01:00 AM IST

ಬಿಜೆಪಿ -ಜೆಡಿಎಸ್‌ ಒಟ್ಟಾಗಿ ಬಿವೈಆರ್ ಗೆಲ್ಲಿಸುವೆವು: ಕ್ಷೇತ್ರ ಉಸ್ತುವಾರಿ ರಘುಪತಿ ಭಟ್
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ನಾಯಕರು, ಮಾಜಿ ಪ್ರಧಾನಿ ದೇವೇಗೌಡರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಇಚ್ಛೆಯಂತೆ ಈ ಸಮನ್ವಯ ಚುನಾವಣೆ. ಹೊಂದಾ ಣಿಕೆಯ ಸಂಬಂಧ ಹೆಚ್ಚಿದೆ. ಎಲ್ಲ ಸಭೆ, ಸಮಾರಂಭಗಳಲ್ಲಿ ಸಮನ್ವಯತೆ ಸಾಧಿಸುತ್ತಿದ್ದೇವೆ. ನೇರ ಸ್ಪರ್ಧೆಗೆ ಹಲವು ಸೂತ್ರಗಳ ಮಾಡಿದ್ದೇವೆ. ಅಭ್ಯರ್ಥಿ ರಾಘವೇಂದ್ರರ ಎಲ್ಲ ಪ್ರಚಾರದ ವಸ್ತುಗಳಲ್ಲಿ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಎಂದಿರುತ್ತೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಷ್ಟ್ರೀಯ ನಾಯಕರ ಒಪ್ಪಂದದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರರನ್ನು ಒಟ್ಟಾಗಿ ಗೆಲ್ಲಿಸುತ್ತೇವೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಸ್ತುವಾರಿ ರಘುಪತಿ ಭಟ್ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್ ಈಗ ಎನ್‌ಡಿಎ ಮೈತ್ರಿಕೂಟದಲ್ಲಿದೆ. ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಹೊಂದಾಣಿಕೆಯಾಗಿದ್ದರೂ ಕೂಡ ಬೂತ್ ಮಟ್ಟದಲ್ಲಿ ಈ ಹೊಂದಾಣಿಕೆಗೆ ಸ್ಪಷ್ಟ ರೂಪ ಬಂದಿರಲಿಲ್ಲ. ಶಿವಮೊಗ್ಗ ಗ್ರಾಮಾಂತರ ಪ್ರದೇಶದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಇದ್ದದು ನಿಜ. ಆದರೆ, ಅದೆಲ್ಲ ಈಗ ಕರಗಿ ನಾವು ಒಟ್ಟಾಗಿದ್ದೇವೆ ಎಂದು ಹೇಳಿದರು.

ರಾಷ್ಟ್ರೀಯ ನಾಯಕರು, ಮಾಜಿ ಪ್ರಧಾನಿ ದೇವೇಗೌಡರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಇಚ್ಛೆಯಂತೆ ಈ ಸಮನ್ವಯ ಚುನಾವಣೆ. ಹೊಂದಾ ಣಿಕೆಯ ಸಂಬಂಧ ಹೆಚ್ಚಿದೆ. ಎಲ್ಲ ಸಭೆ, ಸಮಾರಂಭಗಳಲ್ಲಿ ಸಮನ್ವಯತೆ ಸಾಧಿಸುತ್ತಿದ್ದೇವೆ. ನೇರ ಸ್ಪರ್ಧೆಗೆ ಹಲವು ಸೂತ್ರಗಳ ಮಾಡಿದ್ದೇವೆ. ಅಭ್ಯರ್ಥಿ ರಾಘವೇಂದ್ರರ ಎಲ್ಲ ಪ್ರಚಾರದ ವಸ್ತುಗಳಲ್ಲಿ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಎಂದಿರುತ್ತೆ. ಕಮಲದ ಗುರುತಲ್ಲಿ ಸ್ಪರ್ಧೆ. ಮನೆ ಮನೆ ಪ್ರಚಾರ ಎರಡೂ ಪಕ್ಷಗಳ ಕಾರ್ಯಕರ್ತರು ಮಾಡಲಿದ್ದಾರೆ ಎಂದು ತಿಳಿಸಿದರು.

ಜೆಡಿಎಸ್‌ನ ಒಂದೂ ಮತಗಳು ಬೇರೆ ಕಡೆ ಹೋಗದ ರೀತಿಯಲ್ಲಿ ಗ್ರಾಮಾಂತರ ಸಭೆ ಆಗಿದೆ. ಗ್ರಾಪಂ, ಜಿ.ಪಂ.ಮಟ್ಟದಲ್ಲಿ ಪ್ರಚಾರ ವ್ಯವಸ್ಥಿತವಾಗಿ ನಡೆಯಲಿದೆ. ಬೂತ್ ಮಟ್ಟದಲ್ಲಿಯೂ ಜೊತೆಯಾಗಿ ಕಾರ್ಯಕರ್ತರು ಪ್ರಚಾರ ಮಾಡಿ ದೊಡ್ಡ ಲೀಡ್ ರಾಘವೇಂದ್ರರಿಗೆ ತಂದು ಕೊಡಲಿದ್ದೇವೆ ಎಂದರು.ಪ್ರಚಾರ ಆರಂಭ:

ಶಾಸಕಿ ಶಾರದಾ ಪೂರ್ಯಾನಾಯ್ಕ ಮಾತನಾಡಿ, ಹೈಕಮಾಂಡ್ ಆದೇಶದ ಮೇರೆಗೆ ಜೆಡಿಎಸ್ ಪ್ರಬಲವಾಗಿರೋ ಪ್ರದೇಶದಲ್ಲಿ ನನ್ನ ಕ್ಷೇತ್ರ ಕೂಡ ಜವಾಬ್ದಾರಿಯುತವಾಗಿದೆ. ಭಯವಿಲ್ಲದೇ ಸಮನ್ವಯ ಹೋರಾಟ ಹರಿಗೆ ವಾರ್ಡಿನಿಂದ ಪ್ರಚಾರ ಆರಂಭಿಸಿದ್ದೇನೆ. ಮೂರು ಬಾರಿ ಸಂಸದರಾಗಿರುವ ರಾಘವೇಂದ್ರ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಬೆಂಬಲಿಸಲು ಎಲ್ಲರೂ ತೀರ್ಮಾನ ಮಾಡಿದ್ದೇವೆ ಎಂದರು.

ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕ, ಜೆಡಿಎಸ್‌ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ವಿಧಾನ ಪರಿಷತ್‌ ಎಸ್.ಎಲ್.ಭೋಜೇಗೌಡ, ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನ ಕುಮಾರ್, ಕೆ.ಜಿ.ಕುಮಾರ ಸ್ವಾಮಿ, ಡಾ.ಧನಂಜಯ ಸರ್ಜಿ, ರಾಮಕೃಷ್ಣ, ಗೀತಾ, ಎಸ್.ಚಂದ್ರಶೇಖರ್ , ಜಿ.ಇ.ವಿರೂಪಾಕ್ಷಪ್ಪ, ಕಾಂತರಾಜ್‌ ಮತ್ತಿತರರಿದ್ದರು.----------------------------------

ಪೋಟೊ: 01ಎಸ್ಎಂಜಿಕೆಪಿ03: ರಘುಪತಿ ಭಟ್