ಸಾರಾಂಶ
ರಾಮನಗರ: ಸೀರೆಗಳು ತುಂಬಿದ್ದ ವಾಹನವನ್ನು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದ ದ್ಯಾವರಸೇಗೌಡನ ದೊಡ್ಡಿ ರಸ್ತೆಯಲ್ಲಿರುವ ಒಕ್ಕಲಿಗರ ಭವನದಲ್ಲಿರುವ ಖಾಸಗಿ ಗೋದಾಮು ಬಳಿ ಮಂಗಳವಾರ ರಾತ್ರಿ ನಡೆದಿದೆ.
ರಾಮನಗರ: ಸೀರೆಗಳು ತುಂಬಿದ್ದ ವಾಹನವನ್ನು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದ ದ್ಯಾವರಸೇಗೌಡನ ದೊಡ್ಡಿ ರಸ್ತೆಯಲ್ಲಿರುವ ಒಕ್ಕಲಿಗರ ಭವನದಲ್ಲಿರುವ ಖಾಸಗಿ ಗೋದಾಮು ಬಳಿ ಮಂಗಳವಾರ ರಾತ್ರಿ ನಡೆದಿದೆ.
ಕಾಂಗ್ರೆಸ್ ಪಕ್ಷದವರು ಮತದಾರರಿಗೆ ಹಂಚಲು ವಾಹನದಲ್ಲಿ ಸೀರೆಗಳನ್ನು ತಂದು ಗೋದಾಮಿನಲ್ಲಿ ಸಂಗ್ರಹಿಸಿ ಇಟ್ಟಿದ್ದಾರೆ ಎಂದು ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ.ಸೀರೆಗಳಿದ್ದ ವಾಹನವನ್ನು ಹಿಡಿದ ಕಾರ್ಯಕರ್ತರು, ಚಾಲಕ ಮತ್ತು ಗೋದಾಮು ಸಿಬ್ಬಂದಿಯನ್ನು ವಿಚಾರಿಸಿದ್ದಾರೆ. ಅವರಿಂದ ಸೂಕ್ತ ಉತ್ತರ ಸಿಗದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರು ಜಮಾಯಿಸಿದರು. ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಯೋಗೇಶ್ವರ್ ಕುರಿತು ಗಂಡಸ್ತನದ ಬಗ್ಗೆ ಮಾತನಾಡುವ ಕಾಂಗ್ರೆಸ್ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ರವರು ಮತದಾರರಿಗೆ ಹಂಚಲು ಸೀರೆ ತರಿಸಿದ್ದಾರೆ. ಅವರು ಯಾವ ಸೀಮೆ ಗಂಡಸು ಎಂದೆಲ್ಲ ಪ್ರಶ್ನಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಸೀರೆಗಳನ್ನು ಸಂಗ್ರಹಿಸಿದ್ದ ಸ್ಥಳಕ್ಕೆ ಬಂದ ಡಿವೈಎಸ್ಪಿ ದಿನಕರ ಶೆಟ್ಟಿ, ರಾಮನಗರ ಪುರ ಠಾಣೆ ಪಿಎಸ್ ಐ ಆಕಾಶ್ ಸೇರಿದಂತೆ ಸ್ಥಳೀಯ ಚುನಾವಣಾ ಸಿಬ್ಬಂದಿ ಭೇಟಿ ನೀಡಿದರು. ಸೀರೆಗಳನ್ನು ಪರಿಶೀಲಿಸಿ ಗೋದಾಮು ಸಿಬ್ಬಂದಿಯಿಂದ ಸೀರೆಗಳನ್ನು ತಂದಿರುವುದಕ್ಕೆ ಸಂಬಂಧಿಸಿದ ರಸೀತಿ ಸೇರಿದಂತೆ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.19ಕೆಆರ್ ಎಂಎನ್ 14.ಜೆಪಿಜಿಸೀರೆಗಳು ದಾಸ್ತಾನಿದ್ದ ಗೋದಾಮು