ಬಿಜೆಪಿ ಶಾಸಕರ ಅವಧಿಯಲ್ಲಿಯೇ ಸಾವಿರಾರು ಎಕರೆ ಜಮೀನು ಬಿಜೆಪಿ ಕಾರ್ಯಕರ್ತರಿಗೆ ನೀಡಿದ್ದಾರೆ. ಅರ್ಹ ಫಲಾನುಭವಿಗಳಿಗೆ ಜಮೀನು ಇಲ್ಲವೇ ಸೈಟ್ ನೀಡಿಲ್ಲ.
ಕನ್ನಡಪ್ರಭ ವಾರ್ತೆ ಮಾಲೂರು
ಬೆಂಗಳೂರಿನ ಕೋಗಿಲು ವಿಚಾರದಲ್ಲಿ ಕೆಲವರು ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದು, ಪರಿಶಿಷ್ಟ ಜಾತಿಗೆ ಸೇರಿದ್ದಾರೆ ಎಂಬ ಕಾರಣದಿಂದ ಬಿಜೆಪಿ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ ಎಂದು ಸಚಿವ ರಾಮಲಿಂಗರೆಡ್ಡಿ ಹೇಳಿದರು.ಅವರು ತಾಲೂಕಿನ ಲಿಂಗಾಪುರದಲ್ಲಿ ದಿ.ವಿಕ್ರಂ ಚಾರಿಟಬಲ್ ಟ್ರಸ್ಟ್ ವತಿಯಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಟ್ಟಪ್ಪ ನೇತೃತ್ವದಲ್ಲಿ ದಿ.ವಿಕ್ರಂ ಹುಟ್ಟುಹಬ್ಬದ ಅಂಗವಾಗಿ ವಾಹನ ಸವಾರರಿಗೆ ಹೆಲ್ಮಟ್ ವಿತರಣೆ, ಅಂಗನವಾಡಿ ಕಾರ್ಯಕರ್ತರಿಗೆ ಸೀರೆ ವಿತರಣೆ, ಪ್ರತಿಭಾವಂತ ಮಕ್ಕಳಿಗೆ ಲ್ಯಾಪ್ ಟಾಪ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಬಿಜೆಪಿ ಶಾಸಕರ ಅವಧಿಯಲ್ಲಿಯೇ ಸಾವಿರಾರು ಎಕರೆ ಜಮೀನು ಬಿಜೆಪಿ ಕಾರ್ಯಕರ್ತರಿಗೆ ನೀಡಿದ್ದಾರೆ. ಅರ್ಹ ಫಲಾನುಭವಿಗಳಿಗೆ ಜಮೀನು ಇಲ್ಲವೇ ಸೈಟ್ ನೀಡಿಲ್ಲ. ಇದಕ್ಕೆಲ್ಲಾ ಸಿಬಿಐ ತನಿಖೆಯಾದರೆ ಸತ್ಯ ಹೊರಬರಲಿದೆ ಎಂದ ಸಚಿವರು ಬಿಜೆಪಿ ಮುಖಂಡರು ದೊಡ್ಡ ದೊಡ್ಡ ಬಂಗಲೆಗಳಲ್ಲಿ ವಾಸವಾಗಿದ್ದು, ಬಡವರ ಕಷ್ಟ ಅವರಿಗೇನೂ ಗೊತ್ತು ಎಂದು ಪ್ರಶ್ನಿಸಿದರು.ಕೋಗಿಲು ಸಮೀಪ ವಾಸವಾಗಿರುವವರನ್ನು ಬಿಜೆಪಿಯವರು ಬಾಂಗ್ಲಾ ದೇಶದವರು ಎನ್ನುತ್ತಾರೆ. ಅವರು ಬಾಂಗ್ಲಾದವರಾದರೆ ಅವರು ಏನು ಮಾಡುತ್ತಿದ್ದರು. ಅವರನ್ನು ಏಕೆ ಇಲ್ಲಿ ಬಿಟ್ಟರು. ಕೇಂದ್ರದಲ್ಲಿ ಅವರದೆ ಆದ ಸರ್ಕಾರವಿದೆ. ಬಾಂಗ್ಲಾ ದೇಶದವರು ಆದರೆ ಅವರನ್ನು ಕರೆದುಕೊಂಡು ಹೋಗಿ ಬಿಟ್ಟುಬಂದು ಬಿಡಿ. ಅಲ್ಲಿಂದ ಅವರು ಅಕ್ರಮವಾಗಿ ಬಂದಿದ್ದರೆ ಜೈಲಿಗೆ ಹಾಕಿ. ನಾವೇನೂ ಬೇಡ ಎನ್ನುವುದಿಲ್ಲ. ಅಲ್ಲಿರುವವರು ರಾಜ್ಯದವರಾದರೆ ಮನೆ ನೀಡುವ ಬಗ್ಗೆ ಮುಖ್ಯಮಂತ್ರಿಗಳು ಹೇಳಿದ್ದಾರೆ. ಲ್ಯಾಂಡ್ ಗ್ರಾಂಟ್ ಕಮಿಟಿಗೆ ಶಾಸಕರು ಅಧ್ಯಕ್ಷರಾಗಿದ್ದು, ಈ ಹಿಂದೆ ಬಹುತೇಕ ಮಂದಿ ಬಿಜೆಪಿ ಶಾಸಕರ ಅವಧಿಯಲ್ಲಿಯೇ ಸಾವಿರಾರು ಎಕರೆ ಜಮೀನು ಅವರ ಕಾರ್ಯಕರ್ತರಿಗೆ ಮಂಜೂರು ಮಾಡಿದ್ದಾರೆ. ಅರ್ಹ ಫಲಾನುಭವಿಗಳಿಗೆ ಜಮೀನು ಇಲ್ಲವೇ ಸೈಟ್ ನೀಡಿಲ್ಲ ಎಂದು ಬಿಜೆಪಿ ಪಕ್ಷದವರನ್ನು ಪ್ರಶ್ನಿಸಿದ ಅವರು, ರಾಜ್ಯದಲ್ಲಿರುವ 224 ಶಾಸಕರ ಪೈಕಿ ನಂಜೇಗೌಡ ಅವರು ಸರ್ಕಾರದಿಂದ ಹೆಚ್ಚಿನ ಅನುಮಾನಗಳನ್ನು ಮಂಜೂರು ಮಾಡಿಸಿಕೊಳ್ಳುವಲ್ಲಿ ಮೊದಲಿಗರಾಗಿದ್ದಾರೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಲಿಂಗಾಪುರ ಕಿಟ್ಟಣ್ಣ ಅವರ ಕಾರ್ಯ ಶ್ಲಾಘನೀಯ ಎಂದರು.ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಲಿಂಗಾಪುರ ಕಿಟ್ಟಣ್ಣನ ಮಗನಾದ ದಿ.ವಿಕ್ರಮ್ ಬೈಕ್ ಅಪಘಾತದಲ್ಲಿ ಮೃತಪಟ್ಟ ಹಿನ್ನಲೆಯಲ್ಲಿ ಆತನ ಹೆಸರಿನಲ್ಲಿ ಪ್ರತಿವರ್ಷ ಒಂದೊಂದು ರೀತಿಯ ಸಮಾಜ ಸೇವಾ ಕಾರ‍್ಯವನ್ನು ಮಾಡುತ್ತಿದ್ದಾರೆ. ಕಳೆದ ವರ್ಷ 4 ಆ್ಯಂಬುಲೆನ್ಸ್‌ಗಳನ್ನು ನೀಡಿದ್ದಾರೆ. ತಾಲೂಕಿನಲ್ಲಿರುವ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ‍್ಯಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗಾಪುರ ಕಿಟ್ಟಣ್ಣ (ಕಿಟ್ಟಿ), ಶೆಟ್ಟಿಹಳ್ಳಿ ರಾಮಮೂರ್ತಿ, ತಹಸೀಲ್ದಾರ್ ಎಂ.ವಿ.ರೂಪ, ತಾಪಂ ಇಒ ಕೃಷ್ಣಪ್ಪ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ವಿಜಯ ನರಸಿಂಹ, ಸಹಕಾರ ಸಂಘದ ನಿರ್ಧೇಶಕ ಗೋವರ್ಧನ್ ರೆಡ್ಡಿ, ಚನ್ನರಾಯಪ್ಪ, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ, ನಾರಾಯಣ್, ಮಾಜಿ ಉಪಾಧ್ಯಕ್ಷೆ ವಿಜಯಲಕ್ಷಿ ಕೃಷ್ಣಪ್ಪ, ಗ್ಯಾರಂಟಿ ಸಮಿತಿಯ ಅಶ್ವಥ್ ರೆಡ್ಡಿ, ಜಾಕೀರ್ ಖಾನ್, ಶಬ್ಬೀರ್ ಉಲ್ಲಾ, ಮಂಜಣ್ಣ, ಬಗರ್ ಹುಕಂ ಅಧ್ಯಕ್ಷ ಹನುಮಂತಪ್ಪ, ಕನ್ನಡಸೇನೆ ಪ್ರ.ಕಾರ್ಯದರ್ಶಿ ಚಾಕನಹಳ್ಳಿ ನಾಗರಾಜ್, ಸುರೇಶ್‌ಕುಮಾರ್, ಹನುಮಂತಪ್ಪ, ರಾಜಣ್ಣ, ಕೋಮುಲ್ ನಿಧೇರ್ಶಕ ಶ್ರೀನಿವಾಸ್, ಮುರುಳಿಧರ್, ಮಹಾಲಕ್ಷ್ಮಿ , ಪ್ರಗತಿ ಶ್ರೀನಿವಾಸ್, ಗ್ರಾಪಂ ಅಧ್ಯಕ್ಷರಾದ ಮುರುಗೇಶ್, ಮುನೇಗೌಡ, ಮೈಲಾಂಡಹಳ್ಳಿ ನಾರಾಯಣಸ್ವಾಮಿ, ನಾಗರಾಜ್ ರೆಡ್ಡಿ, ಅಂಜನಿ ಸೋಮಣ್ಣ, ಡಾ.ಕಿರಣ್ ಸೋಮಣ್ಣ ಹಾಜರಿದ್ದರು.