ಚನ್ನರಾಯಪಟ್ಟಣ: ತಾಲೂಕು ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಸಿ.ಆರ್ ಚಿದಾನಂದ್ ರವರ 37ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ತಾಲೂಕಿನಾಧ್ಯಂತ ನಾನಾ ಕಡೆ ಆಚರಿಸಲಾಯಿತು.ಪಟ್ಟಣದ ೪೦ ಅಡಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅಭಿಮಾನಿಗಳು ವಿಶೇಷ ಪೂಜೆಯನ್ನ ನೆರವೇರಿಸಿ ಬೃಹತ್ ಗಾತ್ರದ ಹೂವಿನ ಹಾರವನ್ನು ಚಿದಾನಂದ್ ರವರಿಗೆ ಹಾಕಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನ ಆಚರಿಸಿದರು. ನಂತರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಹುಟ್ಟುಹಬ್ಬವನ್ನ ಆಚರಿಸಿ ತಾಲೂಕಿನಲ್ಲಿ ಬಿಜೆಪಿ ಪಕ್ಷವನ್ನ ಸದೃಢವಾಗಿ ಕಟ್ಟಲು ಚಿದಾನಂದ್ ಅವರ ಪರಿಶ್ರಮ ಸಾಕಷ್ಟಿದ್ದು ಅವರಿಗೆ ದೇವರು ಆರೋಗ್ಯ ಐಶ್ವರ್ಯ ಅಧಿಕಾರವನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಹೊಸಕೊಪ್ಪಲಿನ ಶಕ್ತಿಮಠದ ಬಸವೇಶ್ವರ ಚೈತನ್ಯ ಸ್ವಾಮೀಜಿಗಳ ಆಶೀರ್ವಾದ ಪಡೆದ ಚಿದಾನಂದ್ ಕುಟುಂಬದವರು ನಂತರ ಹೊಸ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣದ, ಮೈಸೂರು ರಸ್ತೆ ಸೇರಿದಂತೆ ನಾನಾ ಕಡೆಯ ಆಟೋ ಚಾಲಕರ ಸಂಘದವರು ಚಿದಾನಂದ್ ಅವರನ್ನು ಕರೆಸಿ ಗೌರವಿಸಿದರು.ಪಟ್ಟಣದ ನವೋದಯ ವೃತ್ತದ ಬಳಿ ಡಿವೈಎಸ್‌ಪಿ ಕುಮಾರ್ ಅವರು ಬೈಕ್ ಚಾಲಕರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸುವ ಮೂಲಕ ಚಿದಾನಂದ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.ಡಾ.ರಾಜಕುಮಾರ್ ಧಾಮ ಹಾಗೂ ಡಾ. ಪುನೀತ್ ರಾಜಕುಮಾರ್ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ಅರ್ಥಪೂರ್ಣವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಸಿ. ಆರ್. ಚಿದಾನಂದ್ ಅವರು ನಂತರ ಮಕ್ಕಳಿಗೆ ಕೇಕ್ ಹಾಗೂ ಸಿಹಿ ವಿತರಿಸಿ ಮಾತನಾಡಿ ತಾಲೂಕಿನ ಜನತೆಯ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ ಅವರು ನೀಡುವ ಪ್ರೀತಿಯನ್ನ ನಾನು ಎಂದಿಗೂ ಮರೆಯುವುದಿಲ್ಲ, ತಾಲೂಕಿನಲ್ಲಿ ಬಿಜೆಪಿ ಪಕ್ಷವನ್ನ ಸದೃಢವಾಗಿ ಕಟ್ಟಲು ಶ್ರಮಿಸುವುದಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದಮ್ಮನಿಂಗಲ ರವಿ, ಮಂಜು ಗುಂಡಶೆಟ್ಟಿಹಳ್ಳಿ, ಜಗದೀಶ್‌ಕೆರೆಬೀದಿ, ಆನಂದ್, ಹರೀಶ್, ಜಯರಾಂಮಾರೇನಹಳ್ಳಿ, ವಿಶ್ವ, ರಮೇಶ್, ಲಿಖಿತ್, ನಾಗೇಶ್, ಗಿರೀಶ್ ಕೆಂಬಾಳು, ರಾಕೇಶ್ ಮತ್ತಿತರಿದ್ದರು.
ಬಿಜೆಪಿ ಮುಖಂಡ ಚಿದಾನಂದ್ ಹುಟ್ಟುಹಬ್ಬ ಆಚರಣೆ
ಬಿಜೆಪಿ ಪಕ್ಷವನ್ನ ಸದೃಢವಾಗಿ ಕಟ್ಟಲು ಚಿದಾನಂದ್ ಅವರ ಪರಿಶ್ರಮ ಸಾಕಷ್ಟಿದ್ದು ಅವರಿಗೆ ದೇವರು ಆರೋಗ್ಯ ಐಶ್ವರ್ಯ ಅಧಿಕಾರವನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಹೊಸಕೊಪ್ಪಲಿನ ಶಕ್ತಿಮಠದ ಬಸವೇಶ್ವರ ಚೈತನ್ಯ ಸ್ವಾಮೀಜಿಗಳ ಆಶೀರ್ವಾದ ಪಡೆದ ಚಿದಾನಂದ್ ಕುಟುಂಬದವರು ನಂತರ ಹೊಸ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣದ, ಮೈಸೂರು ರಸ್ತೆ ಸೇರಿದಂತೆ ನಾನಾ ಕಡೆಯ ಆಟೋ ಚಾಲಕರ ಸಂಘದವರು ಚಿದಾನಂದ್ ಅವರನ್ನು ಕರೆಸಿ ಗೌರವಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.