ಸಾರಾಂಶ
ರಾಮನಗರ: ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಬಿಡದಿ ಉಪನಗರ ಯೋಜನೆಗೆ ಅನುಮೋದನೆ ನೀಡಿ , ಈಗ ರೈತರ ಪರ ನಾವಿದ್ದೇವೆ ಎಂಬುದು ಭೂತದ ಬಾಯಲ್ಲಿ ಭಗವದ್ಗೀತೆ ಭಜಿಸಿದಂತೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್ ಪ್ರಶ್ನಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಡದಿ-ಬೈರಮಂಗಲ-ಕಂಚುಗಾರನಹಳ್ಳಿ ಗ್ರಾಮಗಳ ರೈತರ ಹೋರಾಟದ ಬೆಂಬಲಕ್ಕೆ ಬಂದು ಜನರಿಗೆ ನಾಟಕದ ಮಾತುಗಳನ್ನು ಹೇಳುವುದರಲ್ಲಿ ಅರ್ಥವಿಲ್ಲ. ಬಿಜೆಪಿ-ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ಪ್ರತಿ ಹಂತದಲ್ಲೂ ಸಚಿವ ಸಂಪುಟದ ಸಭೆಯಲ್ಲಿ ಬಿಡದಿ ಉಪನಗರ ವಿಚಾರವಾಗಿ ಆರ್.ಅಶೋಕ್ ಅವರು ಸಚಿವರಾಗಿದ್ದು, ನೀವು ಅನುಮೋದಿಸಿರುವ ಕೂಸೆ ಬಿಡದಿ ಉಪನಗರ ಯೋಜನೆಯಾಗಿದೆ ಎಂದು ತಿಳಿಸಿದ್ದಾರೆ.ಜಿಲ್ಲೆಯ ಉಸ್ತುವಾರಿ ಮತ್ತು ಉಪ ಮುಖ್ಯಮಂತ್ರಿಗಳಾಗಿದ್ದಾಗ ಅಶ್ವತ್ಥ ನಾರಾಯಣ ಅವರು 2021ರಲ್ಲಿ ಬಿಡದಿಯ 10 ಸಾವಿರ ಎಕರೆಯಲ್ಲಿ 1000 ಎಕರೆ ಕೆಐಎಡಿಬಿ ಭೂಸ್ವಾಧೀನವಾದ ಸಮಯದಲ್ಲಿ ನಿಮ್ಮ ಸಚಿವ ಸಂಪುಟದಲ್ಲೇ ಅನುಮೋದಿಸಿದ್ದೀರಿ. ಈಗ ನಿಮಗೆ ರೈತರು ನೆನಪಾದರೇ ಎಂದು ಅಶ್ವಥ ನಾರಾಯಣ ಅವರನ್ನು ಪ್ರಶ್ನಿಸಿದ್ದಾರೆ.
ಬಿಡದಿ ಉಪನಗರ ಯೋಜನೆಯನ್ನು ಅನುಮೋದಿಸಿ, ಯೋಜನೆ ರೂಪಿಸಿದ ಬಿಜೆಪಿ ನಾಯಕರೇ ನಿಮ್ಮ ಎರಡು ಮುಖದ ಹಿಂದಿನ ಉದ್ದೇಶ ರಾಜಕೀಯವೇ ಹೊರತು ಬೇರೇನೂ ಇಲ್ಲ. ಈ ನಾಟಕವನ್ನು ನಿಲ್ಲಿಸಿ ರೈತರಿಗೆ ಸತ್ಯ ಹೇಳಿ ಎಂದು ಗಾಣಕಲ್ ನಟರಾಜ್ ಆಗ್ರಹಿಸಿದ್ದಾರೆ.16ಕೆಆರ್ ಎಂಎನ್ 6.ಜೆಪಿಜಿ
ಗಾಣಕಲ್ ನಟರಾಜ್.