ಮಾಲೂರು.: ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಗಳಲ್ಲಿ ಬಿಜೆಪಿ ವಿಜಯಪಥ ತುಳಿದಿರುವ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಬಿಜೆಪಿ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ ನೇತೃತ್ವದಲ್ಲಿ ನಗರದ ಮಹಾರಾಜ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ ಮಾತನಾಡಿ, ಇಂದಿನ ಗೆಲವು ಬಿಜೆಪಿಗರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ. ಏಕೆಂದರೆ ೩೪ ವರ್ಷ ಕಮ್ಯುನಿಸ್ಟ್ ಹಾಗೂ ೧೫ ವರ್ಷ ದೀದಿ ಕೈನಲ್ಲಿ ಪಶ್ವಿಮ ಬಂಗಾಳ ನಲುಗಿ ಹೋಗಿತ್ತು. ಅರಾಜಕತೆ, ಗೊಂಡಯಿಸಂನಿಂದ ಬಂಗಾಳ ಜನತೆ ಶೋಷಣೆಗೆ ಒಳಗಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಚರಿಷ್ಮ ಹಾಗೂ ಅಮಿತ್ ಷಾರ ಚಾಣುಕ್ಯ ನಡೆ ಇಂದು ಬಂಗಾಳ ಜನತೆಗೆ ನಿಜವಾದ ಸ್ವಾತಂತ್ರ್ಯ ತಂದು ಕೊಟ್ಟಿದೆ ಎಂದ ಟಿ.ಬಿ.ಕೆ.ಮುಂದಿನ ಚುನಾವಣೆಯಲ್ಲಿ ನಮ್ಮ ರಾಜ್ಯದಲ್ಲೂ ಕಮಲ ಆರಳಿಸುವ ಮೂಲಕ ನರೇಂದ್ರ ಮೋದಿ ಅವರ ಆಶಯವಾಗಿರುವ ಕಾಂಗ್ರೆಸ್ ಮುಕ್ತ ದೇಶಕ್ಕೆ ನಾವು ಕಾಣಿಕೆ ನೀಡಲಿದ್ದೇವೆ ಎಂದರು,ಬಿಜೆಪಿ ಮುಖಂಡರಾದ ದೊಡ್ಡಿ ರಾಜಪ್ಪ,ವೇಣುಗೋಪಾಲ್, ನಾಗರಾಜ್, ವೇಮನ, ವಾಟರ್ ನಾರಾಯಣಸ್ವಾಮಿ, ಜುಟ್ಟು ಕೃಷ್ಣ, ಭೈರೇಗೌಡ, ಯಾದವ್, ಅಮುದಾ ವೇಣು ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು.
ಮೂರು ರಾಜ್ಯದಲ್ಲಿ ಬಿಜೆಪಿ ಮುನ್ನಡೆ: ವಿಜಯೋತ್ಸವ
ಇಂದಿನ ಗೆಲವು ಬಿಜೆಪಿಗರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ. ಏಕೆಂದರೆ ೩೪ ವರ್ಷ ಕಮ್ಯುನಿಸ್ಟ್ ಹಾಗೂ ೧೫ ವರ್ಷ ದೀದಿ ಕೈನಲ್ಲಿ ಪಶ್ವಿಮ ಬಂಗಾಳ ನಲುಗಿ ಹೋಗಿತ್ತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.