ಸಾರಾಂಶ
ಗದಗ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಿ.ಕೆ.ಎಚ್. ಪಾಟೀಲರ ಹೆಸರು ನಾಮಕರಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದನ್ನು ವಿರೋಧಿಸಿ ಮಹಾವಿದ್ಯಾಲಯಕ್ಕೆ ಬೇರೆಯವರ ಹೆಸರನ್ನು ಇಡಬೇಕೆಂದು ಒತ್ತಾಯಿಸಿ ನಗರ ಬಿಜೆಪಿ ವತಿಯಿಂದ ರಾಜ್ಯಪಾಲರಿಗೆ ಪತ್ರ ಬರೆಯುವುದರ ಮುಖಾಂತರ ಪತ್ರ ಚಳವಳಿಯನ್ನು ಪ್ರಾರಂಭಿಸಲಾಯಿತು.
ಗದಗ: ಗದಗ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಿ.ಕೆ.ಎಚ್. ಪಾಟೀಲರ ಹೆಸರು ನಾಮಕರಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದನ್ನು ವಿರೋಧಿಸಿ ಮಹಾವಿದ್ಯಾಲಯಕ್ಕೆ ಬೇರೆಯವರ ಹೆಸರನ್ನು ಇಡಬೇಕೆಂದು ಒತ್ತಾಯಿಸಿ ನಗರ ಬಿಜೆಪಿ ವತಿಯಿಂದ ರಾಜ್ಯಪಾಲರಿಗೆ ಪತ್ರ ಬರೆಯುವುದರ ಮುಖಾಂತರ ಪತ್ರ ಚಳವಳಿಯನ್ನು ಪ್ರಾರಂಭಿಸಲಾಯಿತು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಮಾತನಾಡಿ, ನಗರದಲ್ಲಿ ಈಗಾಗಲೇ ಜಿಲ್ಲಾ ಕ್ರೀಡಾಂಗಣಕ್ಕೆ, ರೈತ ಭವನಕ್ಕೆ, ರಸ್ತೆಗಳಿಗೆ, ಬಡಾವಣೆಗಳಿಗೆ, ಸರ್ಕಲ್‌ಗಳಿಗೆ ದಿ.ಕೆ.ಎಚ್. ಪಾಟೀಲರ ಹೆಸರನ್ನು ಇಟ್ಟಿದ್ದು ಮತ್ತೆ ಈ ರಾಜ್ಯ ಕಾಂಗ್ರೆಸ್ ಸರ್ಕಾರ ಕ್ಯಾಬಿನೆಟ್‌ನಲ್ಲಿ ಗದಗ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಕೆ.ಎಚ್. ಪಾಟೀಲರ ಹೆಸರನ್ನು ಇಡಲು ತೀರ್ಮಾನಿಸಿದೆ. ಈ ಮಹಾವಿದ್ಯಾಲಯಕ್ಕೆ ಕೆ.ಎಚ್. ಪಾಟೀಲರ ಹೆಸರನ್ನು ಇಡದೆ ಪಂ. ಪುಟ್ಟರಾಜ ಗವಾಯಿಗಳ ಹೆಸರನ್ನಾಗಲಿ ಅಥವಾ ಬೇರೆ ಯಾವುದೇ ಪ್ರಮುಖ ವ್ಯಕ್ತಿಗಳ ಹೆಸರನ್ನು ಇಡಬೇಕೆಂದು ಒತ್ತಾಯಿಸಿದರು.ವಾರ್ಡ ನಂ. 23ರ ರಿಂದ ಪತ್ರ ಚಳವಳಿ ಪ್ರಾರಂಭವಾಗಿದ್ದು, ಗದಗ ತಾಲೂಕಿನ ಎಲ್ಲ ಭಾಗಗಳಿಂದ ಪತ್ರ ಚಳುವಳಿ ನಡೆಯಲಿದೆ ಎಂದರು.ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ, ನಗರ ಘಟಕದ ಅಧ್ಯಕ್ಷ ಸುರೇಶ ಮರಳಪ್ಪನವರ, ಗಂಗಾಧರ ಮೇಲಗಿರಿ, ಸಿದ್ಲಿಂಗಪ್ಪ ಅರಳಿ, ಬಸವರಾಜ ಹಡಪದ, ಸುರೇಶ ಗುಂಜಾಳ, ಶಂಕರ ನೀರಲಕೇರಿ, ಬಸವರಾಜ ಮಡಿವಾಳರ, ಪಂಚಾಕ್ಷರಿ ಅಂಗಡಿ, ಸುರೇಶ ಮಾಳವಾಡ, ಆದರ್ಶ ಬಳಗಾನೂರ, ಸುರೇಶ ಹೆಬಸೂರ, ವಿಶ್ವನಾಥ ಸಫಾರೆ, ಶ್ರೀಕಾಂತ ಕಟವಟೆ, ಮಂಜುನಾಥ ಕಾಟಗಿ, ಮುತ್ತು ಜಾಲಗಾರ ಹಾಗೂ ಪ್ರಮುಖರು ಇದ್ದರು.