ಸಾರಾಂಶ
ಭಾವನಾತ್ಮಕ ವಿಚಾರ ಮತ್ತು ಜನರನ್ನು ಸಾಯಿಸಿ ರಾಜಕಾರಣ ಮಾಡುವ ಡಿಎನ್‌ಎ ಬಿಜೆಪಿಯದ್ದಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಭಾವನಾತ್ಮಕ ವಿಚಾರ ಹಾಗೂ ಜನರನ್ನು ಸಾಯಿಸಿ ರಾಜಕಾರಣ ಮಾಡುವ ಡಿಎನ್ ಎ ಬಿಜೆಪಿಯದ್ದಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಜನರನ್ನು ಸಾಯಿಸಿ ರಾಜಕಾರಣ ಮಾಡುತ್ತಿದೆ. ಈ ಕಾರಣದಿಂದಲೇ 17 ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದ್ದೀರಿ ಎಂದು ಹೇಳಿದರು.
ಬಿಜೆಪಿ ಬೆಂಬಲಿಗ ವಿನಯ್ ಸೋಮಯ್ಯ ಆತ್ಮಹತ್ಯೆ ಮೂರು ಡೆತ್ ನೋಟ್ ವಾಟ್ಸಪ್ ಹೋಗಿದೆ. ಈ ಪ್ರಕರಣದ ಪ್ರಥಮ ವರದಿ ಬರಲಿ. ನಂತರ ಸಿಬಿಐಗೆ ಕೊಡೋಣ. ಬಿಜೆಪಿ ಸಾವಿನ ಮನೆಯಲ್ಲಿ ರಾಜಕಾರಣ ಮಾಡುವ ವ್ಯವಸ್ಥೆಯನ್ನು ಬೀದಿ ಬೀದಿಯಲ್ಲಿ ಹೇಳುತ್ತೇವೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಆದಷ್ಟು ಬೇಗ ಸತ್ಯಾಂಶ ಹೊರ ಬರಲಿದ್ದು, ಬಿಜೆಪಿಯ ಮುಖವಾಡ ಬಯಲಾಗಲಿದೆ ಎಂದು ಹೇಳಿದರು.ಜಿಲ್ಲೆಯ ಇಬ್ಬರು ಶಾಸಕರಿಂದ ಕೊಡಗಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಕಳೆದ ಎರಡು ವರ್ಷದಲ್ಲಿ ಕೊಡಗಿನ ಅಭಿವೃದ್ಧಿಗೆ 2000 ಕೋಟಿ ಬಂದಿದೆ ಇದಕ್ಕೆ ದಾಖಲೆಯನ್ನು ನಾವು ನೀಡುತ್ತೇವೆ ಎಂದು ಹೇಳಿದರು.
ಕೇಂದ್ರದಿಂದ ವಕ್ಫ್ ಬಿಲ್ ತಿದ್ದುಪಡಿ ಮಾಡಲಾಗಿದೆ. ಇದು ಸಂಪೂರ್ಣವಾದ ಮುಸ್ಲಿಂ ವಿರೋಧಿ ತಿದ್ದುಪಡಿಯಾಗಿದ್ದು, ಮುಸ್ಲಿಂರ ಆಸ್ತಿಯನ್ನು ಸರ್ಕಾರದ ಸುಪರ್ದಿಗೆ ತರುವ ಹುನ್ನಾರವಾಗಿದೆ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಂಜುನಾಥ್ ಕುಮಾರ್ ಪ್ರಮುಖರಾದ ರಫೀಕ್ ಕೋಳುಮಂಡ, ಪಿ.ಎ. ಹನೀಫ್ ಇದ್ದರು.