ಸಾರಾಂಶ
ಗೌರಿಬಿದನೂರು: ಭಾರತೀಯ ಜನತಾ ಪಕ್ಷ ದೇಶದ ಬಹುದೊಡ್ಡ ರಾಷ್ಟ್ರೀಯ ಪಕ್ಷವಾಗಿದ್ದು, ದೇಶಾದ್ಯಂತ ಪಕ್ಷದ ಸದಸ್ಯತ್ವ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಹೇಳಿದರು ನಗರದ 9 ನೇ ವಾರ್ಡ್ ನಲ್ಲಿ ಬಿಜೆಪಿ ಪಕ್ಷದ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಮನೆ ಮನೆಗೆ ತೆರಳಿ ಸದಸ್ಯತ್ವ ನೋಂದಣಿ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಮಹಾಶಕ್ತಿ ಕೇಂದ್ರ, ಶಕ್ತಿಕೇಂದ್ರಗಳ ಪ್ರಮುಖರು ಇನ್ನಷ್ಟು ಚುರುಕಾಗಬೇಕು ಎಂದರು.
ನೋಂದಣಿಗೆ ಮನೆ ಮನೆಗೆ ಭೇಟಿಬೂತ್ ಅಧ್ಯಕ್ಷರು ಹಾಗೂ ತಂಡದವರ ಮೇಲೆ ಹೆಚ್ಚಿನ ಜವಾಬ್ದಾರಿಯಿದ್ದು ತಮ್ಮ ತಂಡದೊಂದಿಗೆ ಗ್ರಾಮ ಹಾಗೂ ನಗರ ಮನೆ ಮನೆಗೆ ಭೇಟಿ ನೀಡಿ ಸದಸ್ಯರ ನೋಂದಣಿ ಮಾಡಬೇಕು ಮೊದಲಿಗೆ ತಾವು ಸ್ವತಃ ಸದಸ್ಯತ್ವ ಪಡೆದುಕೊಂಡು ಬಳಿಕ ತಮ್ಮ ಮನೆಯ ಸದಸ್ಯರು ಮತ್ತು ಗ್ರಾಮಸ್ಥರ ಹೆಸರನ್ನು ನೋಂದಾಯಿಸಿ ಬೇಕು ಎಂದು ತಿಳಿಸಿದರು ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ರವರು ಮಾತನಾಡಿ ಪಕ್ಷದ ಸದಸ್ಯತ್ವ ಪಡೆದವರಿಗೆ ಪಕ್ಷವೂ ಸೂಕ್ತ ಸ್ಥಾನಮಾನ ಮತ್ತು ಪ್ರಾತಿನಿಧ್ಯ ಕಲ್ಪಿಸುತ್ತದೆ ಹೆಚ್ಚು ಸದಸ್ಯರನ್ನು ನೋಂದಾಯಿಸಿದ ಕಾರ್ಯಕರ್ತರಿಗೆ ಪಕ್ಷವು ಪರಿಗಣನೆಗೆ ತೆಗೆದುಕೊಳ್ಳುವುದರಿಂದ ಕಾರ್ಯಕರ್ತರು ಹೆಚ್ಚೆಚ್ಚು ಸದಸ್ಯರನ್ನು ಸೇರ್ಪಡೆ ಮಾಡಬೇಕು ಎಂದು ತಿಳಿಸಿದರು.
ಮಿಸ್ಡ್‌ಕಾಲ್ ಮೂಲಕ ನೋಂದಣಿನಗರ ಘಟಕದ ಅಧ್ಯಕ್ಷ ಮಾರ್ಕೆಟ್ ಮೋಹನ್ ಮಾತನಾಡಿ ದೂರವಾಣಿ 8800002024 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡುವ ಮೂಲಕ ಸದಸ್ಯತ್ವ ಪಡೆಯಬಹುದು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಪಕ್ಷದ ಸದಸ್ಯರಾಗಲು ಅರ್ಹತೆ ಹೊಂದಿದ್ದಾರೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮುರಳಿಧರ್, ನಗರ ಪ್ರಧಾನ ಕಾರ್ಯದರ್ಶಿ ವೇಣು ಮಾದವ್ , ಉಪಾಧ್ಯಕ್ಷ ವೆಂಕಟಾದ್ರಿ, ಅನೀಲ್ ಕುಮಾರ್, ಈಶ್ವರ್,ಮಣೆಕಂಠ, ಮಾರುತಿ, ಭರತ್, ಅಧಿತ್ಯ ಮಂಜುನಾಥ್, ಮಧು, ನಾಗೇಶ್ ರಾಘವೇಂದ್ರ ಭಾಗ್ಯಮ್ಮ ಜಯಂತಿ ರೂಪ ಮುಂತಾದವರು ಉಪಸ್ಥಿತರಿದ್ದರು,