ಸಾರಾಂಶ
ಸದಸ್ಯತ್ವ ಅಭಿಯಾನದ ಉದ್ದೇಶ ಬಿಜೆಪಿಗೆ ಹೆಚ್ಚು ಹೆಚ್ಚು ಸಾರ್ವಜನಿಕ ಬೆಂಬಲವನ್ನು ಹೆಚ್ಚಿಸುವುದು ಹಾಗೂ ಬಿಜೆಪಿಯು ರಾಷ್ಟ್ರ ನಿರ್ಮಾಣದ ಉತ್ಸಾಹದೊಂದಿಗೆ ದೇಶದ ಜನರನ್ನು ಸಂಪರ್ಕಿಸುವುದು ಹಾಗೂ ಸಂಘಟಿಸುವುದಾಗಿದೆ.
ಭಟ್ಕಳ: ಇಲ್ಲಿನ ಬಿಜೆಪಿ ಮಂಡಲ ಮತ್ತು ಒಬಿಸಿ ಮೋರ್ಚಾ ವತಿಯಿಂದ ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಬಿಜೆಪಿಯ ಸದಸ್ಯತ್ವ ಅಭಿಯಾನ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಂಡಲದ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಸದಸ್ಯತ್ವ ಅಭಿಯಾನದ ಉದ್ದೇಶ ಬಿಜೆಪಿಗೆ ಹೆಚ್ಚು ಹೆಚ್ಚು ಸಾರ್ವಜನಿಕ ಬೆಂಬಲವನ್ನು ಹೆಚ್ಚಿಸುವುದು ಹಾಗೂ ಬಿಜೆಪಿಯು ರಾಷ್ಟ್ರ ನಿರ್ಮಾಣದ ಉತ್ಸಾಹದೊಂದಿಗೆ ದೇಶದ ಜನರನ್ನು ಸಂಪರ್ಕಿಸುವುದು ಹಾಗೂ ಸಂಘಟಿಸುವುದಾಗಿದೆ.2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವುದು ಅಗತ್ಯವಿದೆ. ಆದ್ದರಿಂದ ಪ್ರಜ್ಞಾವಂತ 18 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು 8800002024 ನಂಬರಿಗೆ ಮಿಸ್ಸ್ಡ್ ಕಾಲ್ ಮಾಡಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಬಿಜೆಪಿಯ ಸದಸ್ಯರಾಗಿ ವಿಶ್ವದಲ್ಲಿಯೇ ಅತಿದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿಯನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಈಶ್ವರ ನಾಯ್ಕ, ಜಿಲ್ಲಾ ಕಾರ್ಯದರ್ಶಿಗಳಾದ ಸುಬ್ರಾಯ ದೇವಾಡಿಗರ, ಶ್ರೀಕಾಂತ್ ನಾಯ್ಕ, ಜಿಲ್ಲಾ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತಾರಾಮ್, ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ನಾಯ್ಕ, ಶ್ರೀಧರ ನಾಯ್ಕ, ಮುಖಂಡರಾದ ರಾಜೇಶ ನಾಯ್ಕ, ಒಬಿಸಿ ಮೋರ್ಚಾದ ತಾಲೂಕು ಅಧ್ಯಕ್ಷ ಉಮೇಶ್ ನಾಯ್ಕ, ಸುರೇಶ ನಾಯ್ಕ, ಜಗದೀಶ್ ನಾಯ್ಕ, ಯಶೋಧರ ನಾಯ್ಕ, ರಾಘವೇಂದ್ರ ನಾಯ್ಕ, ಮಾರುತಿ ನಾಯ್ಕ, ಚಂದ್ರು ಗೊಂಡ, ವಿಜೇತ್ ಶೆಟ್ಟಿ, ವಿಜಯಾ ನಾಯ್ಕ, ವಿಷ್ಣು ನಾಯ್ಕ ಹಾಗೂ ಕಾರ್ಯಕರ್ತರಿದ್ದರು. ಮಾಲಾ ಹುಲ್ಸವಾರ ಹೇಳಿಕೆ ಸತ್ಯಕ್ಕೆ ದೂರಕಾರವಾರ: ಬಿಜೆಪಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಬೆಲೆ ಇಲ್ಲ ಎಂಬ ಮಾಲಾ ಹುಲ್ಸವಾರ ಹೇಳಿಕೆ ಸತ್ಯಕ್ಕೆ ದೂರ ಹಾಗೂ ಖಂಡನೀಯ ಎಂದು ಬಿಜೆಪಿ ಪರಿಶಿಷ್ಟ ಜಾತಿ, ಪಂಗಡ ಮೋರ್ಚಾ ಆಧ್ಯಕ್ಷರು, ನಗರಸಭೆ ಸದಸ್ಯರು ತಿಳಿಸಿದ್ದಾರೆ.
ವಾರ್ಡ್ ಸಂಖ್ಯೆ ೨೧ರಲ್ಲಿ ಚುನಾವಣೆಗೆ ಸ್ಪರ್ಧಿಸಿದಾಗ ಅಲ್ಲಿನ ಜನರು ಹಾಗೂ ಬಿಜೆಪಿ ಕಾರ್ಯಕರ್ತರು ಪ್ರಚಂಡ ಬಹುಮತದಿಂದ ಆರಿಸಿ ಕಳುಹಿಸಿದ್ದನ್ನು ಮಾಲಾ ಹುಲಸ್ವಾರ್ ಮರೆಯಬಾರದು. ಮಾಲಾ ಹುಲ್ಸವಾರ ಅವರಿಗೆ ಪಕ್ಷ ಯಾವ ಅನ್ಯಾಯವನ್ನೂ ಮಾಡಿಲ್ಲ. ಬಿ.ಎಸ್. ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷಗಿದ್ದಾಗ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರ ಮನವಿ ಮೇರೆಗೆ ಮಾಲಾ ಹುಲ್ಸವಾರ ಮನೆಗೆ ಆಗಮಿಸಿ ತಿಂಡಿ ತಿಂದು ಅವರನ್ನು ಸೌಹಾರ್ದಯುತವಾಗಿ ಕಂಡಿದ್ದು ಮಾಲಾ ಹುಲ್ಸವಾರ ಅವರಿಗೆ ನೆನಪಿರಬೇಕು ಎಂದಿದ್ದಾರೆ.ಪಕ್ಷದ ತತ್ವ ಸಿದ್ಧಾಂತವನ್ನು, ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ಹೇಳಿಕೆ ನೀಡುವ ಹಿಂದಿನ ಮರ್ಮ ಏನು ಎನ್ನುವುದನ್ನು ಪ್ರಶ್ನಿಸಬೇಕಾಗಿದೆ. ಬಿಜೆಪಿಗೆ ಮಾಲಾ ಹುಲ್ಸವಾರ ಏನು ಕೊಡುಗೆ ನೀಡಿದ್ದಾರೆ ಎನ್ನುವುದನ್ನು ಅವರೆ ಹೇಳಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.