ಸಾರಾಂಶ
ಕನ್ನಡಪ್ರಭ ವಾರ್ತೆ ವಾಡಿ
ಬಿಜೆಪಿ ಸದಸ್ಯತ್ವ ಅಭಿಯಾನ ಕೇವಲ ಪಕ್ಷದ ಸದಸ್ಯತ್ವವನ್ನು ದುಪ್ಪಟ್ಟು ಮಾಡುವ ಉದ್ದೇಶ ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಆಂದೋಲನಕ್ಕೆ ಬಲ ನೀಡುವುದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.ಯಾದಗಿರಿ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕಲಬುರಗಿ ಹೋಗುವಾಗ ಇಲ್ಲಿನ ಬಲರಾಮ ಚೌಕದಲ್ಲಿ ಜಮಾಯಿಸಿದ ಕಾರ್ಯಕರ್ತರನ್ನು ಭೇಟಿಯಾಗಿ ಮಾತನಾಡಿದ ಅವರು, ಈ ಐತಿಹಾಸಿಕ ಅಭಿಯಾನದಿಂದ ರಾಷ್ಟ್ರಮಟ್ಟದಿಂದ ಹಿಡಿದು ರಾಜ್ಯ, ಜಿಲ್ಲೆ, ಗ್ರಾಮ ಮತ್ತು ಬೂತ್ ಮಟ್ಟದವರೆಗೆ ಪಕ್ಷವನ್ನು ಸಂಘಟಿಸುವುದಾಗಿದೆ. ಈ ಮೂಲಕ ಪ್ರತಿ ಬೂತ್ ಗಳಲ್ಲಿ ಈ ಅಭಿಯಾನ ದಿಂದ ಚುನಾವಣೆ ಗೆಲ್ಲಲು ಬಲ ಸಿಕ್ಕಂತಾಗುತ್ತದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಕಾರ್ಯಪ್ರವೃತ್ತರಾಗ ಬೇಕಾಗಿದೆ ಎಂದು ಹೇಳಿದರು.
ಇದೆ ವೇಳೆ ಪಟ್ಟಣದ ಬಲರಾಮ ಚೌಕ್‌ನಲ್ಲಿ ಹನುಮಾನ ನಗರದ ನಿವಾಸಿ ವಿಜಯ ಕುಮಾರ ರಾಠೋಡರಿಗೆ ಬಿಜೆಪಿ ಸದಸ್ಯತ್ವ ನೊಂದಾಯಿಸಿ ಪಕ್ಷದ ಕಾರ್ಯಕರ್ತರಿಗೆ ಸದಸ್ಯತ್ವ ಅಭಿಯಾನದಲ್ಲಿ ಸಕ್ರಿಯವಾಗುವಂತೆ ಕರೆ ನೀಡಿದರು.ಈ ಸಂಧರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ, ಮಾಜಿ ಸಚಿವ ರಾಜೂಗೌಡ, ಶಾಸಕರಾದ ಬಸವರಾಜ ಮತ್ತಿಮೂಡ್, ಡಾ.ಅವಿನಾಶ ಜಾಧವ, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ, ಅಮರನಾಥ ಪಾಟೀಲ,ಪಿ ರಾಜು, ಮುಖಂಡರಾದ ಚಂದು ಪಾಟೀಲ, ನಿತೀನ್ ಗುತ್ತೇದಾರ, ವಿಠಲ ವಾಲ್ಮೀಕ ನಾಯಕ, ವಾಡಿ ಅಧ್ಯಕ್ಷ ವೀರಣ್ಣ ಯಾರಿ, ರಾಮು ರಾಠೋಡ, ಹಣಮಂತ ಚವ್ಹಾಣ, ಹರಿ ಗಲಾಂಡೆ,ರವಿ ಸಿಂದಗಿ, ಆನಂದ ಇಂಗಳಗಿ, ರಾಜು ಪವಾರ, ರವಿ ಜಾಧವ, ಹೀರಾ ನಾಯಕ ಪಾಲ್ಗೊಂಡಿದ್ದರು.