ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ

| Published : Oct 01 2024, 01:20 AM IST

ಸಾರಾಂಶ

BJP membership registration campaign launched

ಕನ್ನಡಪ್ರಭ ವಾರ್ತೆ ಶಹಾಪುರ

ಹೋತಪೇಠ ಮತ್ತು ಕನ್ಯಾಕೋಳೂರು ಗ್ರಾಮಗಳಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ನಡೆಯಿತು. ಈ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ, ಕಾರ್ಯಕರ್ತರು ಹಾಗೂ ಮುಖಂಡರು ಜವಾಬ್ಧಾರಿ ತೆಗೆದುಕೊಂಡು ಬೂತ್ ಮಟ್ಟದಲ್ಲಿ ಬಿಜೆಪಿ ನೋಂದಣಿ ಮಾಡಿಸಲು ಚುರುಕಾಗಿ ಕೆಲಸ ಮಾಡಬೇಕೆಂದು ತಿಳಿಸಿದರು. ಗ್ರಾಮದ‌ ಕಾರ್ಯಕರ್ತರನ್ನು ಬಿಜೆಪಿ ಸದಸ್ಯರಾಗಿಸಿ ಸದಸ್ಯತ್ವ ನೀಡಲಾಯಿತು. ವಿಧಾನ ಪರಿಷತ್ ಸದಸ್ಯರಾದ ಶಶಿಲ್‌ ನಮೋಶಿ, ಬಿಜೆಪಿ ಹಿರಿಯ ಮುಖಂಡರಾದ ಬಸವರಾಜಪ್ಪಗೌಡ ವಿಭೂತಿಹಳ್ಳಿ, ಮಂಡಲ ಅಧ್ಯಕ್ಷರಾದ ತಿರುಪತಿ ಹತ್ತಿಕಟಿಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಕಾಮಾ, ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ಕಂದಕೂರ, ಜಿಲ್ಲಾ ಕಾರ್ಯದರ್ಶಿ ದಾಮು ಬಿ. ಪವಾರ, ಸದಸ್ಯತ್ವ ಅಭಿಯಾನ ಸಂಚಾಲಕ ಕರಬಸಪ್ಪ ಸಾಹು ಬಿರಾಳ, ಸಿದ್ದ‌ನಗೌಡ ಕನ್ಯಾಕೋಳೂರು ಇದ್ದರು.

------

30ವೈಡಿಆರ್2: ಶಹಾಪುರ ತಾಲೂಕಿನ ಹೋತಪೇಠ ಮತ್ತು ಕನ್ಯಾಕೋಳೂರು ಗ್ರಾಮಗಳಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ನಡೆಯಿತು.