ಸಾರಾಂಶ
BJP membership registration expedited
-ಹೊಳಲ್ಕೆರೆ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನ
----ಕನ್ನಡಪ್ರಭ ವಾರ್ತೆ ಸಿರಿಗೆರೆ
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ಚುರುಕುಗೊಳಿಸುವಂತೆ ಉಸ್ತುವಾರಿ ಹಾಗೂ ಶಿವಮೊಗ್ಗ ಶಾಸಕ ಚನ್ನಬಸಪ್ಪ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ನೋಂದಣಿ ಮಾಡಿಸಲು ನಿಯೋಜಿತರಾಗಿರುವ ಶಾಸಕರು ಇಂದು ಕ್ಷೇತ್ರದ ಹಲವು ಕಡೆ ಬಿರುಸಾಗಿ ಕಾರ್ಯಕ್ರಮ ನಡೆಸಿದರು. ಸಿರಿಗೆರೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಈಗಿರುವ ಸದಸ್ಯತ್ವ ನೋಂದಣಿ ಪ್ರಮಾಣವನ್ನು ಎಲ್ಲರೂ ಒಟ್ಟುಗೂಡಿ ಹೆಚ್ಚಿಸಬೇಕು ಎಂದರು.
ದೇಶದ ಎಲ್ಲೆಡೆ ಪ್ರಧಾನಿ ಮೋದಿಯವರ ಸರ್ಕಾರದ ಕಾರ್ಯಕ್ರಮಗಳು, ಅವರು ತರುತ್ತಿರುವ ಯೋಜನೆಗಳಿಗೆ ವ್ಯಾಪಕ ಬೆಂಬಲ ಇದೆ. ಸರ್ಕಾರದ ಯೋಜನೆಗಳ ಕುರಿತ ಮಾಹಿತಿಯನ್ನು ಮನೆಮನೆಗೆ ತಲುಪಿಸುವ ಹೊಣೆಗಾರಿಕೆ ಕಾರ್ಯಕರ್ತರ ಮೇಲಿದೆ. ಅದನ್ನು ಅರಿತು ಕಾರ್ಯಕರ್ತರು ಕೆಲಸ ನಿರ್ವಹಿಸಬೇಕೆಂದರು.ಸಭೆಯಲ್ಲಿ ಭರಮಸಾಗರ ಮಂಡಲ ಅಧ್ಯಕ್ಷ ಶೈಲೇಶ್ ಕುಮಾರ್, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಕೆ.ಬಿ. ಮೋಹನ್, ಕಾರ್ಯದರ್ಶಿ ಸಂದೀಪ್ ಹಂಚಿನಮನೆ, ಮಂಡಲ ಪ್ರಧಾನ ಕಾರುದರ್ಶಿ ಬಸವರಾಜ್, ಪಂಚಾಕ್ಷರಯ್ಯ ಚೇತನ್, ಹರೀಶ್, ಬಸವರಾಜ್, ರವಿ, ಸಿದ್ದೇಶ್ ಭಾಗಿಯಾಗಿದ್ದರು.
-----ಫೋಟೊ: ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನವು ಶಿವಮೊಗ್ಗ ಶಾಸಕ ಚನ್ನಬಸಪ್ಪ ಉಪಸ್ಥಿತಿಯಲ್ಲಿ ಆರಂಭವಾಯಿತು.