ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಹತ್ತಾರು ವರ್ಷಗಳಿಂದ ದೇವಾಲಯವಿದ್ದ ಜಾಗ, ತರಕಾರಿ, ಹೂವು, ಹಣ್ಣು ಮಾರಾಟಗಾರಿಗೆ ಆಶ್ರಯವಾಗಿದ್ದ ಸಿದ್ಧಿವಿನಾಯಕ ಮಾರುಕಟ್ಟೆ ಜಾಗವನ್ನು ಮಂಗಳೂರಿನ ಕಣಚೂರು ಇಸ್ಲಾಮಿಕ್ ಎಜ್ಯುಕೇಷನ್ ಟ್ರಸ್ಟ್ ಗೆ ಸೇರಿದ ವ್ಯಕ್ತಿಗಳಿಗೆ ಮಾಲ್ ಕಟ್ಟಲು ಗುತ್ತಿಗೆ ನೀಡುವ ಮೂಲಕ ತುಮಕೂರು ನಗರದಲ್ಲಿ ಲ್ಯಾಂಡ್ ಜಿಹಾದ್‌ಗೆ ಬಿಜೆಪಿ ಶಾಸಕರು ಬೆಂಬಲವಾಗಿ ನಿಂತಿದ್ದಾರೆ ಎಂದು ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ. ಹಿಂದುಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಗರದ ಹೃದಯ ಭಾಗದಲ್ಲಿರುವ ನೂರಾರು ಕೋಟಿ ಬೆಲೆ ಬಾಳುವ ಜಾಗವನ್ನು ಮುಸ್ಲಿಂ ವ್ಯಕ್ತಿಗಳಿಗೆ ಲೀಸ್ ನೀಡುವ ಮೂಲಕ ಲ್ಯಾಂಡ್ ಜಿಹಾದ್‌ಗೆ ಇದುವರೆಗೂ ಆಡಳಿತ ನಡೆಸಿರುವ ಎಲ್ಲಾ ಸರಕಾರಗಳು ಪೈಪೋಟಿ ನಡೆಸಿವೆ. ವಕ್ಫ್ ಬೋರ್ಡ್ ರೀತಿ, ಹಿಂದೂಗಳಿಗೆ ಸೇರಿದ ಗಣೇಶ ದೇವಾಲಯವಿರುವ ಮೂಲತಃ ಉದ್ಯಾನವನಕ್ಕೆ ಮೀಸಲಿಟ್ಟ ಜಾಗವನ್ನು ಬರೆದುಕೊಡಲು ಮುಂದಾಗಿವೆ. ಇದಕ್ಕೆ ಶ್ರೀರಾಮಸೇನೆ ಸೇರಿದಂತೆ ಹಿಂದೂಪರ ಸಂಘಟನೆಗಳ ಒಕ್ಕೂಟ ಎಂದಿಗೂ ಅವಕಾಶ ನೀಡುವುದಿಲ್ಲ. ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಶಾಸಕರು, ಸಚಿವರು ಎಲ್ಲರನ್ನು ಬೆತ್ತಲೆ ಮಾಡುತ್ತೇವೆ ಎಂದು ಆಕ್ರೋಶ ಹೊರಹಾಕಿದರು.ಬಜರಂಗದಳ ತುಮಕೂರು ವಿಭಾಗದ ಸಂಚಾಲಕ ಮಂಜು ಭಾರ್ಗವ ಮಾತನಾಡಿ, 1952ರಲ್ಲಿ ತುಮಕೂರು ನಗರದ ವಿನಾಯಕನಗರದಲ್ಲಿನ ಸದರಿ ಜಾಗವನ್ನು ಉದ್ಯಾನವನಕ್ಕೆಂದು ಅಂದಿನ ಪುರಸಭೆಯ ಸಾಮಾನ್ಯ ಸಭೆಯ ನಿರ್ಣಯದಂತೆ ಕಾಯ್ದಿರಿಸಲಾಗಿತ್ತು. ತದನಂತರ ಎಪಿಎಂಸಿಯವರು ಸದರಿ ಜಾಗವನ್ನು ತರಕಾರಿ, ಹೂವು, ಹಣ್ಣು, ದಿನಸಿ ಮಾರುಕಟ್ಟೆ ಮಾಡಲು ಬಿಟ್ಟುಕೊಡುವಂತೆ ಕೋರಿದಾಗ,ಅವರಿಗೆ ಹಸ್ತಾಂತರಿಸಲಾಯಿತು. ಹತ್ತಾರು ವರ್ಷಗಳ ಕಾಲ ಮಾರುಕಟ್ಟೆ ನಡೆದು, ಕಿರಿದಾಗುತ್ತಾ ಬಂದಾಗ ಮಾರುಕಟ್ಟೆಯನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಿದ ನಂತರ, ಆ ಜಾಗದಲ್ಲಿದ್ದ ಗಣೇಶನ ಮೂರ್ತಿ ಪೂಜೆ ಪುನಃಸ್ಕಾರಗಳು ನಡೆಯತ್ತಿದ್ದು, ಸದರಿ ಜಾಗದ ಬಗ್ಗೆ ನಗರಪಾಲಿಕೆ ಮತ್ತು ಎಪಿಎಂಸಿ ನಡುವೆ ಜಟಾಪಟಿ ಇದ್ದು, ನ್ಯಾಯಾಲಯದ ಮೆಟ್ಟಿಲು ಸಹ ಹತ್ತಲಾಗಿದೆ. ನ್ಯಾಯಾಲಯದಲ್ಲಿ ತೀರ್ಪು ಬಾಕಿ ಇರುವಾಗಲೇ ನಗರಾಭಿವೃದ್ಧಿ ಇಲಾಖೆ, ಕೃಷಿ ಮಾರುಕಟ್ಟೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ, ಖಾಲಿ ಇದ್ದ ಸಿದ್ದಿವಿನಾಯಕ ಮಾರುಕಟ್ಟೆ ಜಾಗವನ್ನು ಸ್ಮಾರ್ಟ್ ಸಿಟಿಯಿಂದ ಮಾಲ್ ಕಟ್ಟಲು ಬಿಟ್ಟುಕೊಡಲು ಹೈಲೆವಲ್ ಕಮೀಟಿನಲ್ಲಿ ಒಪ್ಪಿಗೆ ನೀಡಿರುತ್ತಾರೆ ಎಂದರು.ಆದರೆ ಸದರಿ ಜಾಗದಲ್ಲಿ ಇದ್ದ ಸಿದ್ದಿವಿನಾಯಕ ದೇವಾಲಯವನ್ನು 2021ರಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮತ್ತು ಅಧಿಕಾರಿಗಳು ಪಿಪಿಪಿ ಮಾಡಲ್‌ನಲ್ಲಿ ಮುಸ್ಲಿಂ ಎಜ್ಯುಕೇಷನ್ ಟ್ರಸ್ಟ್ ಹಾಗೂ ಇನ್ನಿತರ ಸಂಸ್ಥೆಗಳ ನಡೆಸುವ ನಿರ್ಮಾಣ ಸಂಸ್ಥೆಗೆ 30 ವರ್ಷಗಳಿಗೆ ಲೀಸ್‌ಗೆ ನೀಡಲು ಮುಂದಾಗಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಜಿ, ಹಿಂದೂ ರಾಷ್ಟ್ರ ಸಂಕಲ್ಪ ಸಮಿತಿಯ ರಾಜ್ಯ ಸಂಚಾಲಕ ಮಾರಣ್ಣ ಪಾಳೇಗಾರ್, ಭಾರತೀಯ ಹಿಂದೂ ಸನಾತನ ಪ್ರತಿಷ್ಠಾನ ಸಂಕಲ್ಪ ಸಮಿತಿಯ ಮುನೇಗೌಡ, ಹಿಂದೂ ಕನ್ನಡಿಗರ ವೇದಿಕೆ ಹಿಮೇಶ ದೇಸಾಯಿ, ಅಜಾದ್ ಬ್ರಿಗೇಡ್ ನ ರಾಜ್ಯಾಧ್ಯಕ್ಷ ಗಜೇಂದ್ರ ಸಿಂಗ್, ಹಿಂದೂ ಜಾಗೃತಿ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವು ಭಗತ್,ರಾಷ್ಟ್ರ ರಕ್ಷಣ ಸೇನೆಯ ರಾಜ್ಯಾಧ್ಯಕ್ಷ ಸುರೇಶಗೌಡ, ಹಿಂದೂ ಜನಜಾಗೃತಿ ಸಮಿತಿಯ ವೆಂಕಟೇಶ್, ಭಜರಂಗ ಸೇನೆಯ ಸುನಿಲ್‌ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.