ಸಾರಾಂಶ
ಜಾತಿ ಜನಗಣತಿಯ ಬಿಜೆಪಿ ವಿರೋಧಿಸುವುದಿಲ್ಲ. ಆದರೆ ಜಾತಿಜನಗಣತಿ ವೈಜ್ಞಾನಿಕವಾಗಿ ಆಗಬೇಕೆಂಬುದೇ ನಮ್ಮ ನಿಲುವು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು. ಶುಕ್ರವಾರ ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿಯನ್ನು ಕಾಂಗ್ರೆಸ್ ತಮ್ಮ ಹಿಂದಿನ ಅಧಿಕಾರ ಅವಧಿಯಲ್ಲಿ ಮಾಡಬಹುದಾಗಿತ್ತು. ಆಗ ಸುಮ್ಮನಿದ್ದು ಈಗ ಮುನ್ನಲೆಗೆ ತರುವ ಯತ್ನ ಮಾಡುತ್ತಿದೆ. ಜಾತಿ ಜನಗಣಿತಿಯ ಕಾಂಗ್ರೆಸ್ ನ ಒಕ್ಕಲಿಗ, ಲಿಂಗಾಯಿತ ಸಚಿವರೇ ವಿರೋಧಿಸಿದ್ದಾರೆ ಎಂದರು.
ಚಿತ್ರದುರ್ಗ: ಜಾತಿ ಜನಗಣತಿಯ ಬಿಜೆಪಿ ವಿರೋಧಿಸುವುದಿಲ್ಲ. ಆದರೆ ಜಾತಿಜನಗಣತಿ ವೈಜ್ಞಾನಿಕವಾಗಿ ಆಗಬೇಕೆಂಬುದೇ ನಮ್ಮ ನಿಲುವು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು. ಶುಕ್ರವಾರ ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿಯನ್ನು ಕಾಂಗ್ರೆಸ್ ತಮ್ಮ ಹಿಂದಿನ ಅಧಿಕಾರ ಅವಧಿಯಲ್ಲಿ ಮಾಡಬಹುದಾಗಿತ್ತು. ಆಗ ಸುಮ್ಮನಿದ್ದು ಈಗ ಮುನ್ನಲೆಗೆ ತರುವ ಯತ್ನ ಮಾಡುತ್ತಿದೆ. ಜಾತಿ ಜನಗಣಿತಿಯ ಕಾಂಗ್ರೆಸ್ ನ ಒಕ್ಕಲಿಗ, ಲಿಂಗಾಯಿತ ಸಚಿವರೇ ವಿರೋಧಿಸಿದ್ದಾರೆ ಎಂದರು.
ಈ ಸಲ ದಸರಾ ಆಚರಣೆಯಲ್ಲಿ ಚಾಮುಂಡೇಶ್ವರಿಗೆ ಅಪಮಾನ ಮಾಡಲಾಗಿದೆ. ದಸರಾ ಆಚರಣೆ ವೇಳೆ ಕೇವಲ ರಾಜಕೀಯ ಭಾಷಣ ವಿಜೃಂಭಿಸಿವೆ. ಸರ್ಕಾರ ಪತನ, ರಾಜೀನಾಮೆ ಬಗ್ಗೆಯೇ ಭಾಷಣ ಕೇಳಿಬಂದಿವೆ. ಉದ್ಘಾಟಿಸಿದವರು ಸಾಹಿತಿಯೋ ಯಾರೋ ಎಂಬುದು ಗೊತ್ತಿಲ್ಲ. ಕೇಂದ್ರದ ವಿರುದ್ಧ ಟೀಕಿಸಿ ಭಾಷಣ ಮಾಡಿದ್ದಾರೆ. ಚಾಮುಂಡಿ ಆರಾಧನೆ, ಮೈಸೂರು ಸಂಸ್ಕೃತಿ ಬಿಟ್ಟು ಇದು ರಾಜಕೀಯ ದಸರಾವಾಗಿದೆ ಎಂದು ಟೀಕಿಸಿದರು.ಸಚಿವ ಬೋಸ್ ರಾಜ್ ಹೇಳಿಕೆಗೆ ತೀವ್ರ ಅಕ್ರೋಶಗೊಂಡ ಅಶೋಕ್, ಮುಡಾ ಹಗರಣದ ಸೈಟ್ ಬೆಲೆ 80-90ಲಕ್ಷ ಎಂದೇ ಭಾವಿಸಿದ್ದೆವು. ಸಿಎಂ ಹಿಂದೆ ನಿಂತ ವ್ಯಕ್ತಿ 62 ಕೋಟಿ ಹೇಳಿದ್ದರು. ನಿಮ್ಮ ಹಿಂಬಾಲಕರೇ ನಿಮಗೆ ಖೆಡ್ಡಾ ತೋಡಿದ್ದಾರೆ ಎಂದು ಅಶೋಕ್ ಹೇಳಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))