ಸೈನಿಕರ ಒಳಿತಿಗಾಗಿ ಬಿಜೆಪಿಯಿಂದ ಪೂಜೆ ಸಲ್ಲಿಕೆ

| Published : May 10 2025, 01:11 AM IST

ಸಾರಾಂಶ

ನಮ್ಮ ಹೆಣ್ಣು ಮಕ್ಕಳ ಸಿಂದೂರ ಅಳಿಸಿದ ಪಾಕ್‌ ಉಗ್ರರನ್ನು ಆಪರೇಷನ್‌ ಸಿಂದೂರ ಮೂಲಕ ಅವರಲ್ಲಿಗೆ ನುಗ್ಗಿ ಹೊಡೆದುರಿಳಿಸಿದ ನಮ್ಮ ಸೈನಿಕರಿಗೆ ದೇವರು ಯಾವಾಗಲೂ ಒಳಿತು ಮಾಡಲೆಂದು ಪ್ರಾರ್ಥಿಸಿದರು.

ಹರಪನಹಳ್ಳಿ: ಆಪರೇಷನ್‌ ಸಿಂದೂರ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ ಭಾರತೀಯ ಸೈನಿಕರಿಗೆ ಹಾಗೂ ಪ್ರದಾನಿ ಮೋದಿಗೆ ಒಳಿತಾಗಲಿ ಎಂದು ಬಿಜೆಪಿ ಮಂಡಲದಿಂದ ಪಟ್ಟಣದ ಹಳೆಬಸ್‌ ನಿಲ್ದಾಣದ ಪ್ರಸಿದ್ಧ ವೀರಭದ್ರೇಶ್ವರ ದೇವಾಲಯದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

ನಮ್ಮ ಹೆಣ್ಣು ಮಕ್ಕಳ ಸಿಂದೂರ ಅಳಿಸಿದ ಪಾಕ್‌ ಉಗ್ರರನ್ನು ಆಪರೇಷನ್‌ ಸಿಂದೂರ ಮೂಲಕ ಅವರಲ್ಲಿಗೆ ನುಗ್ಗಿ ಹೊಡೆದುರಿಳಿಸಿದ ನಮ್ಮ ಸೈನಿಕರಿಗೆ ದೇವರು ಯಾವಾಗಲೂ ಒಳಿತು ಮಾಡಲೆಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಕೆ. ಲಕ್ಷ್ಮಣ, ಹಿರಿಯ ಮುಖಂಡ ಆರುಂಡಿ ನಾಗರಾಜ, ಬಾಗಳಿ ಕೊಟ್ರೇಶಪ್ಪ, ಎಸ್.ಪಿ.ಲಿಂಬ್ಯಾನಾಯ್ಕ, ಕಣವಿಹಳ್ಳಿ ಮಂಜುನಾಥ, ಓಂಕಾರಗೌಡ, ಮಂಜನಾಯ್ಕ, ಎಸ್.ಕೆಂಚಪ್ಪ, ಮೈದೂರು ಮಲ್ಲಿಕಾರ್ಜುನ, ವಕೀಲ ಲಿಂಗಾನಂದ, ಕಡತಿ ರಮೇಶ, ಕಡೆಮನಿ ಸಂಗಮೇಶ, ಬೆಣ್ಣಿಹಳ್ಳಿ ಸಿದ್ದನಗೌಡ, ಜವಳಿ ಮಹೇಶ, ಪ್ರಾಣೇಶ, ಬಾರಿಕರ ರವಿ, ಜಟ್ಟಪ್ಪ, ಗೌಳಿ ಯಲ್ಲಪ್ಪ, ಟೀ ಸ್ಟಾಲ್‌ ರಮೇಶ, ರೇಖಮ್ಮ, ಸ್ಪಪ್ನ ಮಲ್ಲಿಕಾರ್ಜುನ, ಮೇಘನಾಯ್ಕ ಇತರರು ಪಾಲ್ಗೊಂಡಿದ್ದರು.