ಹಿರೇಕೆರೂರಲ್ಲಿ ಬಿಜೆಪಿಯಿಂದ ವಿಜಯ ಸಿದ್ಧಿ ವಿಶೇಷ ಪೂಜೆ

| Published : May 11 2025, 01:17 AM IST

ಸಾರಾಂಶ

ಆಪರೇಷನ್ ಸಿಂದೂರ ಹಿನ್ನೆಲೆಯಲ್ಲಿ ನಮ್ಮ ಸೈನಿಕರು ವಿಜಯಶಾಲಿಯಾಗಲಿ ಎಂದು ಪ್ರಾರ್ಥಿಸಿ, ಮಾಜಿ ಸಚಿವ ಬಿ.ಸಿ. ಪಾಟೀಲ ನೇತೃತ್ವದಲ್ಲಿ ಬಿಜೆಪಿ ವತಿಯಿಂದ ಹಿರೇಕೆರೂರು ಪಟ್ಟಣದ ದುರ್ಗಾದೇವಿ ದೇವಸ್ಥಾನದಲ್ಲಿ ವಿಜಯ ಸಿದ್ಧಿ ವಿಶೇಷ ಪೂಜೆ ನಡೆಸಲಾಯಿತು.

ಹಿರೇಕೆರೂರು: ಆಪರೇಷನ್ ಸಿಂದೂರ ಹಿನ್ನೆಲೆಯಲ್ಲಿ ನಮ್ಮ ಸೈನಿಕರು ವಿಜಯಶಾಲಿಯಾಗಲಿ ಎಂದು ಪ್ರಾರ್ಥಿಸಿ, ಮಾಜಿ ಸಚಿವ ಬಿ.ಸಿ. ಪಾಟೀಲ ನೇತೃತ್ವದಲ್ಲಿ ಬಿಜೆಪಿ ವತಿಯಿಂದ ಪಟ್ಟಣದ ದುರ್ಗಾದೇವಿ ದೇವಸ್ಥಾನದಲ್ಲಿ ವಿಜಯ ಸಿದ್ಧಿ ವಿಶೇಷ ಪೂಜೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಮಾಜಿ ಸಚಿವ ಬಿ.ಸಿ. ಪಾಟೀಲ, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರವಾಸಿ ತಾಣದಲ್ಲಿ ಏ. 22ರಂದು ನಡೆದಿದ್ದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂದೂರ ಹೆಸರಿನ ಕಾರ್ಯಾಚರಣೆಯನ್ನು ಮೇ 6, 7ರ ಮಧ್ಯರಾತ್ರಿ ಆರಂಭಿಸಿದೆ. ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದೊಳಗಿರುವ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ಒಂಭತ್ತು ನೆಲೆಗಳಲ್ಲಿರುವ 21 ಉಗ್ರರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಲಾಗಿದೆ. ನಮ್ಮ ಮಿಲಿಟರಿ ಪಡೆ ಯಾವ ನಾಗರಿಕರಿಗೂ ತೊಂದರೆ ಮಾಡದೆ ನಿಖರ ಗುರಿಯಿಟ್ಟು ಉಗ್ರರನ್ನು ಸದೆ ಬಡಿದಿದೆ. ಪಾಕಿಸ್ತಾನ ಭಾರತದ ತಂಟೆಗೆ ಬಂದರೆ ಏನಾಗಲಿದೆ ಎಂಬುದನ್ನು ನಮ್ಮ ಸೈನಿಕರು ತೋರಿಸಿದ್ದಾರೆ. ಅಂತಹ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಲು ಮತ್ತು ಅವರ ಜೀವಗಳ ರಕ್ಷಣೆಗೆ ದುರ್ಗಾದೇವಿಗೆ ಪ್ರಾರ್ಥಿಸಿ, ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದರು.

ಬಿಜೆಪಿ ಮಂಡಲದ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷ ಜಗದೀಶ ದೊಡ್ಡಗೌಡ್ರ, ಮುಖಂಡರಾದ ಉಮೇಶ ಬಣಕಾರ, ಪರಮೇಶಪ್ಪ ಹಲಗೇರಿ, ದುರುಗೇಶ ತಿರಕಪ್ಪನವರ, ಲಕ್ಷ್ಮಣ ಪೂಜಾರ, ಚನ್ನಬಸಪ್ಪ ಮಾಳಗಿ, ಬಸವರಾಜ ಅರಕೇರಿ, ಉಮೇಶ ಬಣಕಾರ, ಹುಚ್ಚಪ್ಪ ಚೌಟಗಿ, ಪ್ರವೀಣ ತಳವಾರ, ಜೀತೇಂದ್ರ ಅಂಗಡಿ, ಶಂಕರನಾಯಕ ಲಮಾಣಿ, ನಾಗರಾಜ ರಾಯನಗೌಡ್ರ, ಚಂದ್ರು ಸುಣಗಾರ, ನಾಗರಾಜ ಬಣಕಾರ ಇತರರಿದ್ದರು.