ದೇವನಹಳ್ಳಿ: ಎಸ್‌ಐಆರ್ ಮೂಲಕ ಪ್ರತೀ ಕ್ಷೇತ್ರದಲ್ಲಿ ಕನಿಷ್ಠ ೨೫ ಸಾವಿರ ಮತದಾರರನ್ನು ಕಡಿತಗೊಳಿಸಲು ಬಿಜೆಪಿ ಹುನ್ನಾರ ನಡೆಸಿದ್ದರೆ ಬಡವರನ್ನು ಅಲ್ಪಸಂಖ್ಯಾತ ಮುಸ್ಲಂರನ್ನು ಪರಿಶಿಷ್ಟ ಜಾತಿಯ ಮತದಾರರನ್ನು ಸೂಕ್ತ ದಾಖಲೆಗಳಿಲ್ಲ ಎಂಬ ಕಾರಣ ನೀಡಿ ತೆಗೆಯುತ್ತಾರೆ. ಈ ಬಗ್ಗೆ ನಮ್ಮ ಬಿಎಲ್ಎಗಳು ಸಂಪೂರ್ಣ ಜಾಗೃತಿ ವಹಿಸಬೇಕು ಎಂದು ಸಚಿವ ಕೆ.ಎಚ್.ಮುನಿಯಪ್ಪ ಕರೆ ನೀಡಿದರು

ದೇವನಹಳ್ಳಿ: ಎಸ್‌ಐಆರ್ ಮೂಲಕ ಪ್ರತೀ ಕ್ಷೇತ್ರದಲ್ಲಿ ಕನಿಷ್ಠ ೨೫ ಸಾವಿರ ಮತದಾರರನ್ನು ಕಡಿತಗೊಳಿಸಲು ಬಿಜೆಪಿ ಹುನ್ನಾರ ನಡೆಸಿದ್ದರೆ ಬಡವರನ್ನು ಅಲ್ಪಸಂಖ್ಯಾತ ಮುಸ್ಲಂರನ್ನು ಪರಿಶಿಷ್ಟ ಜಾತಿಯ ಮತದಾರರನ್ನು ಸೂಕ್ತ ದಾಖಲೆಗಳಿಲ್ಲ ಎಂಬ ಕಾರಣ ನೀಡಿ ತೆಗೆಯುತ್ತಾರೆ. ಈ ಬಗ್ಗೆ ನಮ್ಮ ಬಿಎಲ್ಎಗಳು ಸಂಪೂರ್ಣ ಜಾಗೃತಿ ವಹಿಸಬೇಕು ಎಂದು ಸಚಿವ ಕೆ.ಎಚ್.ಮುನಿಯಪ್ಪ ಕರೆ ನೀಡಿದರು.

ತಾಲೂಕಿನ ಚಪ್ರಕಲ್ ಬಳಿಯ ಮನ್ವಂತರ ಸಭಾಂಗಣದಲ್ಲಿ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್‌ನ ಎಲ್ಲಾ ಮುಖಂಡರು ಹಾಗೂ ಪದಾಧಿಕಾರಿಗಳು, ಬೂತ್ ಅಧ್ಯಕ್ಷರು, ಬೂತ್ ಸಮಿತಿ ಸದಸ್ಯರು, ಬಿಎಲ್ಓ ೨ಗಳ ಬೂತ್ ಮಟ್ಟದ ಕಾರ್ಯಗಾರ, ಬೂತ್ ಸದೃಢ ಸಂಘಟನೆ ಮತ್ತು ಎಐಆರ್ ಕುರಿತ ಸಂಪನ್ಮೂಲ ವಿಷಯ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪಕ್ಷದ ಮುಖಂಡರಾಗಲಿ, ಕಾರ್ಯಕರ್ತರ ಆಗಲಿ ತುಂಬಾ ಶಿಸ್ತಿನಿಂದ ಪ್ರತಿಯೊಬ್ಬರು ಪ್ರತಿಯೊಂದು ಸಭೆ ಸಮಾರಂಭಗಳಲ್ಲಿ ಸಂಘಟಿತರಾಗಬೇಕು. ತಮಿಳುನಾಡಿನಲಿ ಕೇರಳದಲ್ಲಿ ಅವರು ಏನೂ ಮಾಡಲಾಗಲಿಲ್ಲ. ಆದರೆ ನಮ್ಮ ರಾಜ್ಯದಲ್ಲಿ ಅವರು ಪ್ರತಿಪಕ್ಷವಾಗಿ ಸಮೀಪದಲ್ಲಿಯೇ ಇದ್ದಾರೆ. ನಮಗೆ ಈ ಪರಿಷ್ಕರಣೆಯಲ್ಲಿ ಶೇ.೧೦ರಷ್ಟು ಹೋದರೂ ನಾವು ಗೆಲ್ಲುವುದು ಕಷ್ಡವಾಗಲಿದೆ. ಹಾಗಾಗಿ ೨೫ ಪರ್ಸೆಂಟ್ ಅವರು ತೆಗೆಯುವುದರಲ್ಲಿ ನಮ್ಮದು ಶೇ. ೫ಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಬಿಎಲ್‌ಎ ೨ಗಳು ಪ್ರತಿ ಬೂತ್‌ನಲ್ಲಿ ನಮ್ಮ ಮತಗಳು ಶೇ.೯೫ ಇರುವಂತೆ ನೋಡಿಕೊಳ್ಳಿ ಆಗ ಮಾತ್ರ ಮುಂದಿನ ದಿನಗಳಲ್ಲಿ ಪಕ್ಷದ ಗೆಲುವು ಖಚಿತ ಎಂದು ಸಲಹೆ ನೀಡಿದರು.

ದೇವನಹಳ್ಳಿ ಬ್ಲಾಕ್ ಅಧ್ಯಕ್ಷ ಕೆ.ಸಿ.ಮಂಜುನಾಥ್ ಮಾತನಾಡಿ, ಪಕ್ಷದ ಎಲ್ಲಾ ಕಾರ್ಯಕರ್ತರು ಬಿಎಲ್‌ಎ -೨ಗಳು ಜನರ ಮತ ಪಡೆಯಲು ಜವಾಬ್ದಾರಿಯುತ ಕಾರ್ಯಸಂಘಟನೆ ಮಾಡಿ, ಚುನಾವಣೆ ಬಂದರೂ ಬರದಿದ್ದರೂ ಸದಾ ಜನಸೇವೆ ಮತ್ತು ದೇಶ ಸೇವೆಗೆ ಸಿದ್ದರಾಗಿ, ಜನರ ಮತವನ್ನು ಕದಿಯಬೇಡಿ. ಮತ ನೀಡುವ ಜನರ ಹೃದಯವನ್ನು ಗೆಲ್ಲಿ, ದೇಶ ಸೇವೆಗಾಗಿ ನಾವು ಸಬಲರಾಗಲು ಗೆಲವು ಅಗತ್ಯ ಎಂದು ಹೇಳಿದರು.

ಸಭೆಯಲ್ಲಿ ತರಬೇತುದಾರ ವಾಸು, ಬಯಪ ಅಧ್ಯಕ್ಷ ವಿ.ಶಾಂತಕುಮಾರ್, ಬಯಪ ನಿದೇರ್ಶಕರಾದ ಸಿ.ಪ್ರಸನ್ನಕುಮಾರ್, ವಿ.ಮಂಜುನಾಥ್, ತೂಬಗೆರೆ ರಂಗಪ್ಪ, ಪಟಾಲಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಬಿ.ರಾಜಣ್ಣ, ತಾಲೂಕು ಅಧ್ಯಕ್ಷ ಸಿ.ಜಗನ್ನಾಥ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಿತ್ತರಹಳ್ಳಿ ರಮೇಶ್, ಕೆಪಿಸಿಸಿ ಯುವ ಘಟಕದ ಕಾರ್ಯದರ್ಶೀ ಕೆ.ಆರ್. ನಾಗೇಶ , ಎ,ಚಿನ್ನಪ್ಪ, ಬಮೂಲ್ ನಿರ್ದೇಶಕ ಎಸ್.ಪಿ.ಮುನಿರಾಜು, ಬೊಮ್ಮವಾರ ಸೋಮಶೇಖರ್ ಮುಂತಾದವರಿದ್ದರು.

೦೩ ದೇವನಹಳ್ಳಿ ಚಿತ್ರಸುದ್ದಿ ೦೧

ಎಸ್.ಐಆರ್ ಬಗ್ಗೆ ಬಿಎಲ್‌ಎ 2ಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಸಚಿವ ಕೆಎಚ್. ಮುನಿಯಪ್ಪ ಮಾತನಾಡಿದರು.