ಉಪಮುಖ್ಯಮಂತ್ರಿಗಳ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

| Published : Mar 26 2025, 01:30 AM IST

ಸಾರಾಂಶ

ಸಂವಿಧಾನ ತಿದ್ದುಪಡಿ ಮಾಡಿ ಮುಸ್ಲಿಂರಿಗೆ ಗುತ್ತಿಗೆ ಕೆಲಸದಲ್ಲಿ 4% ಮೀಸಲಾತಿ ನೀಡುವುದಾಗಿ ಹೇಳಿಕೆ ನೀಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿಕೆ ಖಂಡನೆ

ದಾಂಡೇಲಿ: ಸಂವಿಧಾನ ತಿದ್ದುಪಡಿ ಮಾಡಿ ಮುಸ್ಲಿಂರಿಗೆ ಗುತ್ತಿಗೆ ಕೆಲಸದಲ್ಲಿ 4% ಮೀಸಲಾತಿ ನೀಡುವುದಾಗಿ ಹೇಳಿಕೆ ನೀಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿಕೆ ಖಂಡಿಸಿ, ನಗರದ ಬಿಜೆಪಿ ಮಂಡಲದಿಂದ ಡಿ.ಕೆ. ಶಿವಕುಮಾರ ಪ್ರತಿಕೃತಿ ದಹಿಸುವುದರ ಮೂಲಕ ನಗರದ ಛತ್ರಪತಿ ಶಿವಾಜಿ ಸರ್ಕಲ್ ದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ದಾಂಡೇಲಿ ಮಂಡಲದ ಅಧ್ಯಕ್ಷ ಬುದವಂತಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಟೊಸೂರ್, ಮಿಥನ‌ ನಾಯಕ, ರೋಶನ್ ನೇತ್ರಾವಳಿ, ಸುಧಾಕರ ರೆಡ್ಡಿ, ವಾಮನ ಮಿರಾಶಿ, ಹನುಮಂತ ರ್ಕಾಗಿ, ಸುಭಾಷ್ ಅರವೇಕರ, ವಿಷ್ಣು ವಾಜವೆ, ವಿಷ್ಣು ನಾಯರ್, ಪ್ರಶಾಂತ ಬಸುತೆಕರ್, ರೋಶನ್ ಜೀತ್ ವಿಜಯ ಕೊಲೇಕರ್, ಗೀತಾ ಶಿಕಾರಿಪುರ, ಪದ್ಮ ಜನ್ನು, ಮೇಘಾ‌ ಗೌಡ, ಲಕ್ಷ್ಮೀ ಕಿಲಾರಿ, ಅನ್ನಪೂರ್ಣ ಬಾಗಲಕೋಟ,ಮಾರತಿ ಕಾಮರೆಕರ್,ರವಿ ವಾಟ್ಲಕರ್, ವಿಷ್ಣು ಧಾರವಾಡಕರ್, ಏಕನಾಥ ವಾಟ್ಲಕರ್, ಚನ್ನಬಸಪ್ಪ ಮುರಗೋಡ, ಈರಯ್ಯಾ ಸಾಲಿಮಠ, ಪುನೀತ್ ನಾಯಕ, ಜ್ಯೋತಿ ತುಳಸೇಕರ್, ಮಂಜುನಾಥ ಶಟ್ಟಿ, ಪ್ರಮೋದ್ ಕದಂ, ಅರ್ಜುನ ಮಾಣೆ, ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಬಂಧುಗಳು ಮುಖಂಡರು ಉಪಸ್ಥಿತರಿದ್ದರು.