ಉಪರಾಷ್ಟ್ರಪತಿಗೆ ಅಪಹಾಸ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ

| Published : Dec 22 2023, 01:30 AM IST

ಸಾರಾಂಶ

ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಟಿಎಂಸಿ ಸಂಸದ ಕಲ್ಯಾಣ ಬ್ಯಾನರ್ಜಿ ಅಣಕಿಸಿ ಅಪಹಾಸ್ಯ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಮಾಜಿ ಸಚಿವ ಸಿ.ಸಿ. ಪಾಟೀಲ ಅವರ ನೇತೃತ್ವದಲ್ಲಿ ಗದಗ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಶಾಸಕ ಸಿ.ಸಿ. ಪಾಟೀಲ ನೇತೃತ್ವದಲ್ಲಿ ಕಾರ್ಯಕರ್ತರ ಆಕ್ರೋಶ

ಗದಗ: ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಟಿಎಂಸಿ ಸಂಸದ ಕಲ್ಯಾಣ ಬ್ಯಾನರ್ಜಿ ಅಣಕಿಸಿ ಅಪಹಾಸ್ಯ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಮಾಜಿ ಸಚಿವ ಸಿ.ಸಿ. ಪಾಟೀಲ ಅವರ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಶಾಸಕ ಸಿ.ಸಿ.ಪಾಟೀಲ ಮಾತನಾಡಿ, ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರನ್ನು ಟಿಎಂಸಿ ಸಂಸದ ಕಲ್ಯಾಣ ಬ್ಯಾನರ್ಜಿ ಅಣಕಿಸಿ ಅಪಹಾಸ್ಯ ಮಾಡಿರುವುದಕ್ಕೆ ವಿಷಾದ ವ್ಯಕ್ತಪಡಿಸಿ, ಚುನಾಯಿತ ಪ್ರತಿನಿಧಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರರು. ಆದರೆ, ಅದು ಅವರ ಘನತೆ, ಸೌಜನ್ಯವನ್ನು ಮೀರಬಾರದರು ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ, ವಿಪ ಸದಸ್ಯ ಎಸ್.ವಿ. ಸಂಕನೂರ, ಪಕ್ಷದ ಪ್ರಮುಖರಾದ ಎಂ.ಎಸ್. ಕರಿಗೌಡ್ರ, ಕಾಂತಿಲಾಲ ಬನ್ಸಾಲಿ, ಜಗನ್ನಾಥಸಾ ಭಾಂಡಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ರಾಮಪ್ಪ ಮೊರಬದ, ಮಂಜುನಾಥ ಮೆಣಸಗಿ, ಉಮೇಶಗೌಡ ಪಾಟೀಲ, ಅನಿಲ ಅಬ್ಬಿಗೇರಿ, ನಾಗರಾಜ ಕುಲಕರ್ಣಿ, ಅಶೋಕ ಸಂಕಣ್ಣವರ, ಶಿವು ಹಿರೇಮನಿಪಾಟೀಲ, ಭದ್ರೇಶ ಕುಸ್ಲಾಪೂರ, ಸಿದ್ದು ಪಲ್ಲೇದ, ಲಕ್ಷ್ಮಣ ದೊಡ್ಮನಿ, ಮಹಾಂತೇಶ ನಲವಡಿ, ಅಶೋಕ ಕುಡತಿನಿ, ಬೂದಪ್ಪ ಹಳ್ಳಿ, ಅಶೋಕ ಕರೂರ, ಈರ್ಷಾದ ಮಾನ್ವಿ, ನಾಸಿರ ನೆರಗಲ್, ಮಂಜುನಾಥ ತಳವಾರ, ಸುರೇಶ ಮರಳಪ್ಪನವರ, ಮಂಜುನಾಥ ಶಾತಗೇರಿ, ಮಂಜು ಮುಳಗುಂದ, ಪ್ರಶಾಂತ ನಾಯ್ಕರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ವಿಜಯಲಕ್ಷ್ಮೀ ಮಾನ್ವಿ, ಕಮಲಾಕ್ಷೀ ಗೊಂದಿ, ರೇಖಾ ಬಂಗಾರಶೆಟ್ಟರ, ಅಕ್ಕಮ್ಮ ವಸ್ತ್ರದ, ಸ್ವಾತಿ ಅಕ್ಕಿ, ರಾಚಯ್ಯ ಹೊಸಮಠ, ಅಪ್ಪಣ್ಣ ಟೆಂಗಿನಕಾಯಿ, ಶಾಮಿದಸಾಬ್ ನರಗುಂದ, ವಿನೋದ ಹಂಸನೂರ ಹಾಗೂ ಕಾರ್ಯಕರ್ತರು ಇದ್ದರು.