ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಆಡಳಿತದ ಧೋರಣೆ ಖಂಡಿಸಿ, ವಿವಿಧ ಸೌಲಭ್ಯಕ್ಕಾಗಿ ಆಗ್ರಹಿಸಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ನೇತೃತ್ವದಲ್ಲಿ ಸೋಮವಾರ ಬಿಜೆಪಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಅರಳಿಕಟ್ಟಿ ವೃತ್ತದಿಂದ ಮುಖ್ಯರಸ್ತೆಯ ಮೂಲಕ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ತಹಸೀಲ್ದಾರ್‌ ಕಚೇರಿವರೆಗೆ ತೆರಳಿ ತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರುರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಆಡಳಿತದ ಧೋರಣೆ ಖಂಡಿಸಿ, ವಿವಿಧ ಸೌಲಭ್ಯಕ್ಕಾಗಿ ಆಗ್ರಹಿಸಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ನೇತೃತ್ವದಲ್ಲಿ ಸೋಮವಾರ ಬಿಜೆಪಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಅರಳಿಕಟ್ಟಿ ವೃತ್ತದಿಂದ ಮುಖ್ಯರಸ್ತೆಯ ಮೂಲಕ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ತಹಸೀಲ್ದಾರ್‌ ಕಚೇರಿವರೆಗೆ ತೆರಳಿ ತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಶಾಲಾ ಮಕ್ಕಳಿಗೆ ಕಳಪೆ ಮಟ್ಟದ ಶೂ ವಿತರಣೆ, ವಿವಿಧ ಪಿಂಚಣಿಯನ್ನು ಸ್ಥಗಿತಗೊಳಿಸಿರುವುದು, ಸಮಪರ್ಕ ವಿದ್ಯುತ್ ಪೂರೈಕೆ ಇಲ್ಲದಿರುವುದು, ಶಾಲಾ ಮಕ್ಕಳಗೆ ಬಸ್‌ ವ್ಯವಸ್ಥೆ, ಸುಸಜ್ಜಿತ ರಸ್ತೆ ನಿರ್ಮಿಸದ ಹೊತ್ತ ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.ತಹಸೀಲ್ದಾರ ಕಚೇರಿ ಮುಂಬಾಗದಲ್ಲಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ವಂದೇ ಮಾತರಂ ಗೀತೆಯ ಎಲ್ಲಾ ಸಾಲುಗಳನ್ನು ಹಾಡುವ ಮತ್ತು ಗೌರವಿಸುವ ವಿಷಯದಲ್ಲಿ ಪಾರ್ಲಿಮೆಂಟ್ ಕಾಯ್ದೆ ಹಾಗೂ ನಿಯಮಗಳಿದ್ದರೂ ಕಾಂಗ್ರೆಸ್ ಸರ್ಕಾರ ಅದನ್ನು ಉಲ್ಲಂಘಿಸಿ ಇಲ್ಲಿಯೂ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಬರಗಾಲ ಘೋಷಣೆ ಮಾಡಿದೆ ಅಷ್ಟೆ ಅದರ ಸಿದ್ದತೆ ಇಲ್ಲ. ಸಮರ್ಪಕ ವಿದ್ಯುತ್ ಪೂರೈಕೆಯಿಲ್ಲ ಮತ್ತು ನಮ್ಮ ತಾಲೂಕಿನಲ್ಲಿ ನಮ್ಮ ಅವಧಿಯಲ್ಲಿ ಬಸ್ ಡಿಪೋ ಕಟ್ಟಡಕ್ಕೆ ಭೂಮಿಪೂಜೆ ಮಾಡಲಾಗಿತ್ತು. ಆದರೆ ಈಗ ಉದ್ಘಾಟನೆಗೊಂಡಿದ್ದರೂ ಬಸ್ ಡಿಪೋಗೆ ಬೇಕಾದಷ್ಟು ನೂತನ ಬಸ್‌ಗಳ ಸೌಲಭ್ಯವಿಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಕೆರೆ ತುಂಬಿಸುವ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ, ವಿಧ ಸಾಮಾಜಿಕ ಯೋಜನೆಗಳ ಪಿಂಚಣಿಯನ್ನು ಸ್ಥಗಿತಗೊಳಿಸಿದ್ದು, ವಯೋವೃದ್ದರು, ವಿಧವೆಯರು ಸಂಕಷ್ಠಕ್ಕೆ ಸಿಲುಕಿದ್ದಾರೆ. ಇವೆಲ್ಲ ತೊಂದರೆ ಸರ್ಕಾರಕ್ಕೆ ಗೊತ್ತಾಗುವದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಹಸೀಲ್ದಾರ್‌, ಹೆಸ್ಕಾಂ, ನೀರಾವರಿ, ಕೆಎಸ್ಆರ್ಟಿಸಿ ಅಧಿಕಾರಿಗಳು ಸೇರಿ ಆಯಾ ಇಲಾಖೆಗಳಿಗೆ ಸಂಬಂಧಿಸಿದ ಅಧಿಕಾರಿಗಳ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಸೂಚಿಸಿದ್ದು, ಅದಕ್ಕೆ ಅಧಿಕಾರಿಗಳು ಸಮಯಾವಕಾಶದ ಮೂಲಕ ಸಮಸ್ಯೆಗೆ ಪರಿಹಾರ ಒದಗಿಸುವದಾಗಿ ಹೇಳಿದರು. ಮಂಡಲ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಮುಖಂಡರಾದ ಲಕ್ಷ್ಮೀ ಇನಾಮದಾರ, ಬಸನಗೌಡ ಸಿದ್ರಾಮನಿ, ರಾಜು ಹೊಸಟ್ಟಿ ಮುಂತಾದವರು ಮಾತನಾಡಿದರು.

ಮುಖಂಡರಾದ ಚನ್ನಬಸಪ್ಪ ಮೊಕಾಶಿ, ಸಂದೀಪ ದೇಶಪಾಂಡೆ, ಲಾವಣ್ಯಾ ಶಿಲೇದಾರ, ರಾಧಾ ಕಾದ್ರೋಳ್ಳಿ, ಸರಸ್ವತಿ ಹೈಬತ್ತಿ, ಬಸವರಾಜ ಮಾತನವರ, ಈರಣ್ಣ ಹಲಕಿ, ಶಂಕರ ಹಳೆಮನಿ, ದೇವೆಂದ್ರ ಪಾಗಾದ, ಶ್ಯಾಮ ಶಿಲೇದಾರ, ಈರಣ್ಣಾ ವಾರದ, ಬಾಬುಗೌಡ ಪಾಟೀಲ, ಲಕ್ಷ್ಮೀ ಬಡಿಗೇರ, ಪಾರ್ವತಿ ಸರಪಳಿ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.