ಸಾರಾಂಶ
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ
ಕನ್ನಡಪ್ರಭ ವಾರ್ತೆ, ಕೊಪ್ಪಕಾಂಗ್ರೆಸ್ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಬಿವೃದ್ಧಿ ಕಾರ್ಯಗಳಾಗಿವೆ. ಇದನ್ನು ಸಹಿಸದ ಬಿಜೆಪಿ ಸುಳ್ಳು ಸುದ್ದಿಗಳಮೂಲಕ ಜನರ ದಾರಿ ತಪ್ಪಿಸುವ ಸಲುವಾಗಿ ಮಾ.೧೦ರಂದು ನರಸಿಂಹರಾಜಪುರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಕೆಪಿಸಿಸಿ ಸದಸ್ಯ ಎಚ್.ಎಂ. ನಟರಾಜ್ ಹೇಳಿದರು.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡರ ಗೆಲುವನ್ನು ಸಹಿಸದ ಮಾಜಿ ಶಾಸಕ ಡಿ.ಎನ್. ಜೀವರಾಜ್ ಕಾಂಗ್ರೆಸ್ ಶಾಸಕರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಜೀವರಾಜ್ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡರ ಮೇಲೆ ಸುಳ್ಳು ಆರೋಪ ಮಾಡುತ್ತಿರುವುದು ಇದೆ ಮೊದಲಲ್ಲ ಎಂದರು.ಜಯಪುರದಲ್ಲಿ ೫೦ ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ₹೧.೨ ಕೋಟಿ ಅನುದಾನ, ತಾಲೂಕಿಗೆ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಮಂಜೂರು, ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ₹೨.೪೩ ಕೋಟಿ ಶಾಲೆಗಳ ಹೆಚ್ಚುವರಿ ಕೊಠಡಿ ನಿರ್ಮಿಸಲು ₹೫೫ ಲಕ್ಷ ಲೋಕೋಪಯೋಗಿ ರಸ್ತೆಗಾಗಿ ₹೭೫ ಕೋಟಿ ಕ್ಷೇತ್ರದ ೩ ಪಟ್ಟಣದ ಅಭಿವೃದ್ಧಿಗಾಗಿ ₹೬.೮೪ ಕೋಟಿ ಕ್ಷೇತ್ರದ ಎಲ್ಲ ಧಾರ್ಮಿಕ ಶ್ರದ್ಧಾ ಕೇಂದ್ರದ ಅಭಿವೃದ್ಧಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ₹೪ ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು. ಮುಖಂಡ ಎಚ್.ಎಂ ಸತೀಶ್ ಮಾತನಾಡಿ, ಕ್ಷೇತ್ರಕ್ಕೆ ಬಿಜೆಪಿ ಸಂಸದರ ಮತ್ತು ವಿಧಾನ ಪರಿಷತ್ (ಶಿಕ್ಷಕರ ಕ್ಷೇತ್ರ) ಸದಸ್ಯರ ಕೊಡುಗೆ ಏನು ಎಂದು ಮೊದಲು ತಿಳಿಸಬೇಕು ಎಂದು ಸವಾಲೆಸೆದರು.ಮುಖಂಡರಾದ ಚೇತನ್, ಶಶಿಕುಮಾರ್, ಅನ್ನಪೂರ್ಣ ನರೇಶ್, ಎಚ್.ಎಸ್. ಇನೇಶ್, ಸತೀಶ್ ನಾಯ್ಕ, ಬರ್ಕತ್ ಆಲಿ, ಕೀರ್ತನ್, ಸಂದೀಪ್, ಶ್ರೀಧರ್ ಹಾಗೂ ಇತರರಿದ್ದರು.