ಘಟಪ್ರಭ ನದಿಯಲ್ಲಿ ನೀರೇ ಇಲ್ಲ. ಇದರಿಂದ ಜನ ಜಾನುವಾರುಗಳ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಕೂಡಲೇ ನದಿಗೆ ನೀರು ಹರಿಸುವಂತೆ ಒತ್ತಾಯಿಸಿ ಬಿಜೆಪಿ ಮುಧೋಳ ನಗರ ಹಾಗೂ ಗ್ರಾಮೀಣ ಮಂಡಳದ ವತಿಯಿಂದ ಶುಕ್ರವಾರ ಸಂಜೆ ತಹಸೀಲ್ದಾರ್‌ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಮುಧೋಳ

ಬಿಜೆಪಿ ಯುವ ಧುರೀಣ ಅರುಣ ಕಾರಜೋಳ ಮಾತನಾಡಿ, ಹಿಡಕಲ್ ಡ್ಯಾಂ ನಲ್ಲಿ ಸಾಕಷ್ಟು ನೀರಿದ್ದರೂ ನದಿಗೆ ಹಾಗೂ ಕಾಲುವೆಗೆ ಏಕೆ ನೀರು ಬಿಡುತ್ತಿಲ್ಲ, ಕೂಡಲೇ ನೀರು ಬಿಡಬೇಕೆಂದು ಆಗ್ರಹಿಸಿದರು.

ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಸಂಗಣ್ಣ ಕಾತರಕಿ, ಮುಖಂಡರಾದ ನಾಗಪ್ಪ ಅಂಬಿ, ಎಸ್.ಎಸ್.

ಅಕ್ಕಿಮರಡಿ ಮಾತನಾಡಿ, 20 ದಿನಗಳಿಂದ ನದಿ ಬತ್ತಿ ಹೋಗಿದೆ. ಈ ಭಾಗದ ಜನ ಜಾನುವಾರುಗಳಿಗೆ ನೀರಿನ ತೊಂದರೆ ಉಂಟಾಗಿದೆ. ನೀರು ಬತ್ತಿದ್ದರೂ ಸ್ಥಳೀಯ ಶಾಸಕರು ಗಮನ ಹರಿಸದಿರುವುದು ದುರ್ದೈವದ ಸಂಗತಿ. ಶೀಘ್ರದಲ್ಲಿ ನೀರು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು, ಹೆಸ್ಕಾಂನವರು 7 ತಾಸು ಬದಲು 6 ತಾಸ್ ಮಾತ್ರ ವಿದ್ಯುತ್ ನೀಡುತ್ತಿದ್ದು, ಸರ್ಕಾರ ಹಾಗೂ ಸ್ಥಳೀಯ ಶಾಸಕರು ಜನರ ಕಷ್ಟಗಳಿಗೆ ಸ್ಪಂದಿಸಬೇಕು ಒತ್ತಾಯಿಸಿದರು. ಡಾ.ರವಿ ನಂದಗಾಂವ, ಶ್ರೀಶೈಲ ಚಿನ್ನಣ್ಣವರ, ಸದಾಶಿವ ಇಟಕನ್ನವರ, ಕೆ.ಎಸ್.ಹಿರೇಮಠ, ಲಕ್ಷ್ಮಣ ಚಿನ್ನಣ್ಣವರ, ಶ್ರೀಕಾಂತ ಗುಜ್ಜನ್ನವರ, ಗುರುಪಾದ ಕುಳಲಿ, ಮಾರುತಿ ಕರೆನ್ನವರ, ಬಸವರಾಜ ಮಳಲಿ, ಶಬ್ಬಿರ ಮುಲ್ಲಾ, ಸದಾಶಿವ ಮುಳ್ಳೂರ, ಅನುಪ್ ಚೌಹಾನ್, ಬಸು ದಾಸರ,ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಇದ್ದರು,