ರಾಜ್ಯದಲ್ಲಿ ಆಡಿಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರ ತುಘಲಕ್‌ ಆಡಳಿತದ ಸರ್ಕಾರ. ಜನಹಿತ ಮರೆತು ಬೆಲೆ ಏರಿಕೆ ಮೂಲಕ ವಂಚನೆ ಮಾಡುತ್ತಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ರಾಜ್ಯದಲ್ಲಿ ಆಡಿಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರ ತುಘಲಕ್‌ ಆಡಳಿತದ ಸರ್ಕಾರ. ಜನಹಿತ ಮರೆತು ಬೆಲೆ ಏರಿಕೆ ಮೂಲಕ ವಂಚನೆ ಮಾಡುತ್ತಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆರೋಪಿಸಿದರು. ಹಾಲು, ಬಸ್‌ ಪ್ರಯಾಣ ದರ ಏರಿಕೆ ಖಂಡಿಸಿ ನಗರದ ಬಸವೇಶ್ವರ ವೃತ್ತದಿಂದ ಪ್ರತಿಭಟನೆ ರ್ಯಾಲಿ ನಡೆಸಿ ಕಂಠಿ ವೃತ್ತದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್‌ ಪಕ್ಷ ಚುನಾವಣೆ ವೇಳೆ ಜನರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸುತ್ತೇವೆ. ಪಾರದರ್ಶಕ ಆಡಳಿತ ನಡೆಸುತ್ತೇವೆ ಎಂದು ಜನರಿಗೆ ವಾಗ್ದಾನ ಮಾಡಿ ಮತ ಪಡೆದು ಸರ್ಕಾರ ರಚನೆ ಮಾಡಿದೆ. ಆದರೆ ಎರಡು ವರ್ಷಗಳ ಅವಧಿಯಲ್ಲಿ ಜನರಿಗೆ ಖಾಲಿ ಚೊಂಬು ಕೊಡುವ ಸ್ಥಿತಿಗೆ ಬಂದಿದೆ. ಸರ್ಕಾರ ದಿವಾಳಿಯಾಗಿದೆ, ಖಜಾನೆಯಲ್ಲಿ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಎಲ್ಲ ಯೋಜನೆಗಳು ಹಳ್ಳ ಹಿಡಿದಿವೆ. ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಜನತೆ ಜೀವನ ನಡೆಸುವು ಕಷ್ಟವಾಗಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿಡಿ.ಕೆ.ಶಿವಕುಮಾರ್‌ ಕೊಡಲೇ ಸರ್ಕಾರ ಏರಿಕೆ ಮಾಡಿದ ಎಲ್ಲ ದರಗಳನ್ನು ಇಳಿಸಬೇಕು. ಜನತೆಗೆ ಉತ್ತಮ ಆಡಳಿತ ಕೊಡಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಜನತೆ ದಂಗೆ ಏಳಬಹುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾ ರ‍್ಯಾಲಿಯಲ್ಲಿ ಬಿಜೆಪಿ ಅಧ್ಯಕ್ಷ ಮಹಾಂತಗೌಡ ಪಾಟೀಲ, ಹಿರಿಯರಾದ ಶಿವನಗೌಡ ಅಗಸಿಮುಂದಿನ, ಮಂಜುನಾಥ ಹೊಸಮನಿ, ಮಂಜುನಾಥ ಶೆಟ್ಟರ, ಮಲ್ಲಯ್ಯ ಮೂಗನೂರಮಠ, ವೆಂಕಟೇಶ ಪೋತಾ, ಅರವಿಂದ ಮಂಗಳೂರ, ಡಾ.ಮಹಾಂತೇಶ ಕಡಪಟ್ಟಿ, ಶೋಭಾ ಆಮದಿಹಾಳ, ತೃಪ್ತಿ ಸಾಲಿಮಠ, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.