ಸಾರಾಂಶ
ಕಾರ್ಕಳ ತಾಲೂಕು ಬಿಜೆಪಿ ವತಿಯಿಂದ ಕಾರ್ಕಳ ಬಸ್ ನಿಲ್ದಾಣದಲ್ಲಿ ಶುಕ್ರವಾರ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಯಿತು. ಕಾರ್ಕಳ ಬಿಜೆಪಿ ಮಂಡಲ ಅಧ್ಯಕ್ಷ ನವೀನ್ ನಾಯಕ್ ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.
ಕನ್ನಡಪ್ರಭ ವಾರ್ತೆ ಕಾರ್ಕಳ
ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಕಾಂಗ್ರೆಸ್ ಸರ್ಕಾರ ಹಣವನ್ನು ನೀಡಿಲ್ಲ ಎಂದು ಕಾರ್ಕಳ ಬಿಜೆಪಿ ಮಂಡಲ ಅಧ್ಯಕ್ಷ ನವೀನ್ ನಾಯಕ್ ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.ಅವರು ಕಾರ್ಕಳ ತಾಲೂಕು ಬಿಜೆಪಿ ವತಿಯಿಂದ ಕಾರ್ಕಳ ಬಸ್ ನಿಲ್ದಾಣದಲ್ಲಿ ಶುಕ್ರವಾರ ಬೆಲೆ ಏರಿಕೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಮುದ್ರಾಂಕ ಶುಲ್ಕ, ಹಾಸ್ಟೆಲ್ ಫೀ, ಹಾಲಿನ ಸಬ್ಸಿಡಿ ನಿಲ್ಲಿಸಿದ್ದಾರೆ. 2000 ಕೊಟ್ಟು, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿ ಪ್ರತಿಮನೆಯಿಂದ 4000ಕ್ಕೂ ಹೆಚ್ಚು ಹಣನ್ನು ಕಿತ್ತುಕೊಳ್ಳುತ್ತಿದೆ. ದಲಿತರಿಗೆ ಮೀಸಲಿಟ್ಟಿದ್ದ ೧೧ ಸಾವಿರ ಕೋಟಿ ರು. ಹಣವನ್ನು ಗ್ಯಾರಂಟಿಗೆ ಉಪಯೋಗಸಿಸಿದೆ. ಶೇ.30 ಜನರಿಗೆ ಮಾತ್ರ ಗೃಹಲಕ್ಷ್ಮೀ ಹಂಚಿಕೆಯಾಗಿದೆ. ಉಳಿದ ಜನರಿಗೆ ಇನ್ನೂ ಗೃಹಲಕ್ಷ್ಮೀ ಬಂದಿಲ್ಲ. ಈ ಪ್ರತಿಭಟನೆ ಹೋಬಳಿ ಹಾಗೂ ಗ್ರಾಮೀಣ ಭಾಗಕ್ಕೆ ವಿಸ್ತರಣೆಯಾಗಲಿದೆ ಎಂದರು.ಉಡುಪಿ ಜಿಲ್ಲೆಯ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ ಮಾತನಾಡಿದರು.ಮಾಜಿ ಕೌನ್ಸಿಲರ್ ಪ್ರಕಾಶ್ ರಾವ್, ಕಾರ್ಕಳ ಬಿಜೆಪಿ ಮುಖಂಡ, ಮಣಿರಾಜ ಶೆಟ್ಟಿ, ಜಿಲ್ಲಾ ಪದಾಧಿಕಾರಿಗಳು ಸೊಜನ್ ಜೇಮ್ಸ್ , ಜಯರಾಂ ಸಾಲಿಯಾನ್ , ಗಿರಿಧರ್ ನಾಯಕ್ , ಅವಿನಾಶ್ ಶೆಟ್ಟಿ, ನಿತ್ಯಾನಂದ ಪೈ, ಹರೀಶ್ ನಾಯಕ್, ಪಕ್ಷದ ವಿವಿಧ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಪ್ರತಿಭಟನೆಯು ಕಾರ್ಕಳ ಅನಂತ ಶಯನ ವೃತ್ತದಿಂದ ಬಸ್ ನಿಲ್ದಾಣ ವರೆಗೆ ಸಾಗಿತು.