ಖರ್ಗೆ ಕುಟುಂಬದ ವಿರುದ್ಧ ಬಿಜೆಪಿಗರ ಅಸಂಬದ್ಧ ಹೇಳಿಕೆ ಸಲ್ಲ

| Published : Jul 13 2025, 01:18 AM IST

ಖರ್ಗೆ ಕುಟುಂಬದ ವಿರುದ್ಧ ಬಿಜೆಪಿಗರ ಅಸಂಬದ್ಧ ಹೇಳಿಕೆ ಸಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

BJP's absurd statement against Kharge family is unacceptable

* ಛಲವಾದಿ ನಡೆಗೆ ಕಿಡಿ

- ಡಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರದೇಶ ಕಾಂಗ್ರೆಸ್‌ ಸಮಿತಿ ಕಾರ್ಯಾಧ್ಯಕ್ಷ ಎ.ವಸಂತ ಕುಮಾರ ಎಚ್ಚರಿಕೆಕನ್ನಡಪ್ರಭ ವಾರ್ತೆ ರಾಯಚೂರು

ಪ್ರಚಾರ ಹಾಗೂ ಅಧಿಕಾರದಾಸೆಗಾಗಿ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ, ಛಲುವಾದಿ ನಾರಾಯಣಸ್ವಾಮಿ, ಆರ್‌.ಅಶೋಕ ಹಾಗೂ ಮತ್ತಿತರ ಬಿಜೆಪಿ ನಾಯಕರು ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುವುದರ ಜೊತೆಗೆ ಅಸಂಬದ್ಧ ಹೇಳಿಕೆಗಳನ್ನು ನೀಡುವುದನ್ನು ಯಾವುದೇ ಕಾರಣಕ್ಕೂ ಇದನ್ನು ಸಹಿಸುವುದಿಲ್ಲ, ಮುಂದಿನ ದಿನ ಗಳಲ್ಲಿ ಬಿಜೆಪಿಗರು ತಮ್ಮ ವರಸೆ ಬದಲಿಸಿಕೊಳ್ಳಬೇಕು ಇಲ್ಲವಾದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಎಂಎಲ್ಸಿ ಎ.ವಸಂತ ಕುಮಾರ ಎಚ್ಚರಿಸಿದರು.

ಇಲ್ಲಿನ ಡಿಸಿಸಿ ಕಾರ್ಯಾಲಯದಲ್ಲಿ ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಗರಡಿಯಲ್ಲಿಯೇ ಬೆಳೆದು ವ್ಯಕ್ತಿತ್ವ ರೂಪಿಸಿಕೊಂಡಿರುವ ಛಲವಾದಿ ನಾರಾಯಣಸ್ವಾಮಿ ಅವರು ಬಿಜೆಪಿಯ ತಮ್ಮ ನಾಯಕರನ್ನು ಮೆಚ್ಚಿಸಲು ಖರ್ಗೆ ಹಾಗೂ ಅವರ ಕುಟುಂಬದವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಸತ್ಯ ಬಯಲು ಮಾಡುವವರು ಬರೀ ಹೇಳಿಕೆ ನೀಡಿದರೆ ಸಾಲದು, ಅಂಥ ವಿಷಯವಿದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಎಸೆದರು.

ಪ್ರತಿಪಕ್ಷದವಲ್ಲಿದ್ದವರು ಆಡಳಿತ, ಅಭಿವೃದ್ಧಿಗೆ ವಿಚಾರ ಹಾಗೂ ರಾಜ್ಯದ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮಾತನಾಡಲಿ, ಸರ್ಕಾರದ ಲೋಪದೋಷಗಳನ್ನು ಎತ್ತಿ ತೋರಿಸಿ, ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಿ, ಜನಪ್ರತಿನಿಧಿಗಳು ಸರಿಯಾಗಿ ಕಾರ್ಯ ನಿರ್ವ ಹಿಸದೇ ಇದ್ದರೆ ಟೀಕೆ-ಟಿಪ್ಪಣಿಗಳನ್ನು ಮಾಡಲಿ. ಅದನ್ನು ಬಿಟ್ಟು ವೈಯಕ್ತಿಕ ದ್ವೇಷವನ್ನಿಟ್ಟುಕೊಂಡು ಖರ್ಗೆಯವರ ಕುಟುಂಬವನ್ನು ಗುರಿಮಾಡಿ ನಿಂಧಿಸುತ್ತಿ ರುವುದು ಖಂಡನೀಯ ವಿಷಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

---

ಬಾಕ್ಸ್:

ಕಾಂಗ್ರೆಸ್‌ನಿಂದ ಅನ್ಯಾಯವಾಗಿಲ್ಲ

ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷೆ ನರಸಮ್ಮ ಮಾಡಗಿರಿ ಅವರು ರಜೆ ಮೇಲೆ ಹೋಗಿರುವ ಕಾರಣಕ್ಕೆ ಪ್ರಭಾರಿ ಹುದ್ದೆಯನ್ನು ಉಪಾಧ್ಯಕ್ಷರಿಗೆ ವಹಿಸಲಾಗಿದೆಯೇ ಹೊರತು, ಕಾಂಗ್ರೆಸ್ ನಿಂದ ಯಾವುದೇ ರೀತಿಯ ಅನ್ಯಾಯವಾಗಿಲ್ಲ. ಅದು ಆಗಲು ಸಹ ಬಿಡುವುದಿಲ್ಲ, ರಜೆ ಮೇಲೆ ಹೋಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಗೊಂದಲವಿದ್ದು, ಅದು ಅವರ ವೈಯಕ್ತಿಕ ಸಂಗತಿಯಾಗಿದೆ ಇಲ್ಲ ಅವರ ಮೇಲೆ ಯಾವುದೇ ಒತ್ತಡವಿದ್ದರೆ ಅದನ್ನು ಅವರೇ ಸ್ಪಷ್ಟಪಡಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಡಿಸಿಸಿ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿ. ಮುಖಂಡರಾದ ಡಾ.ರಜಾಕ ಉಸ್ತಾದ್, ಅಬ್ದುಲ್ ಕರೀಮ್, ದರೂರು ಬಸವರಾಜ ಪಾಟೀಲ್, ಮುರಳಿ ಯಾದವ, ಮಹ್ಮದ್ ಉಸ್ಮಾನ್, ಅಸ್ಲಂ ಪಾಷಾ, ರಾಮಕೃಷ್ಣ, ಸತ್ಯನಾಥ, ಬಸವರಾಜರೆಡ್ಡಿ ಸೇರಿ ಕಾರ್ಯಕರ್ತರು ಇದ್ದರು.

--12ಕೆಪಿಆರ್‌ಸಿಆರ್‌ 01: ರಾಯಚೂರಿನ ಡಿಸಿಸಿ ಕಾರ್ಯಾಲಯದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ ಅವರು ಮಾತನಾಡಿದರು.